ಸ್ವೀಕರಿಸುತ್ತಿರಾ ಈ ಚಾಲೆಂಜ್? ಪ್ರಸ್ತುತ ಚಿತ್ರದಲ್ಲಿ ಕೈ ಗಳೆಷ್ಟು? ಹೇಳಿ ನೋಡೋಣ? 99% ಫೇಲ್ ಆಗಿದ್ದಾರೆ… ನೀವು?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ಫೋಟೋ ಅಸಂಖ್ಯಾತ ನೆಟ್ಟಿಗರ ತಲೆಯನ್ನು ಕೆಡಿಸುತ್ತಿದೆ. ಈ ಫೋಟೋ ನೋಡಿದ ಹತ್ತರಲ್ಲಿ ಒಂಬತ್ತು ಜನರು ತಪ್ಪಾದ ಉತ್ತರವನ್ನು ಕೊಡುತ್ತಿದ್ದಾರೆ. ಅಷ್ಟೇ ಏಕೆ ತುಂಬಾ ಕನ್ಫ್ಯೂಸ್ ಸಹಿತ ಆಗಿದ್ದಾರೆ. ನೀವೂ ಈ ಚಿತ್ರವನ್ನು ನೋಡಿದಾಗ ಇದೇ ಅನುಭವ ನಿಮಗೂ ಬರುತ್ತದೆ ಎಂಬ ನನ್ನ ಅನಿಸಿಕೆ. ಏಕೆಂದರೆ ಚಿತ್ರವನ್ನು ನೋಡಿದಾಗ ಇಲ್ಲಿ ಕೈಗಳು ಎಷ್ಟು ಎಂಬುದು ಬಹುಬೇಗ ಗಮನಕ್ಕೆ ಬರುವುದಿಲ್ಲ.

ಸೋಶಿಯಲ್ ಮೀಡಿಯಾದಲ್ಲಿ ಅಥವಾ ಇಂಟರ್ನೆಟ್ ನಲ್ಲಿ ಅನೇಕ ಸಲ ವಿಚಿತ್ರ ಫೋಟೋಗಳು ವೈರಲ್ ಆಗುತ್ತವೆ. ಈ ಫೋಟೋಗಳು ನೋಡುಗರ ತಲೆಯನ್ನು ಕೆಡಿಸಿಬಿಡುತ್ತವೆ. ಇಂಥ ಫೋಟೋಗಳಿಗೆ ಒಪ್ಟಿಕಲ್ ಇಲ್ಯೂಜನ್ ಅಂದರೆ ದೃಷ್ಟಿಭ್ರಮೆ ನಿರ್ಮಾಣ ಮಾಡುವ ವಿಚಿತ್ರ ಫೋಟೋಗಳು ಎನ್ನುತ್ತಾರೆ.

ಪ್ರತಿಯೊಂದು ಚಿತ್ರ ಅಥವಾ ವಸ್ತುಗಳ ಕಡೆಗೆ ನೋಡುವ ದೃಷ್ಟಿ ಪ್ರತಿಯೊಬ್ಬರದ್ದು ಬೇರೆ ಬೇರೆಯಾಗಿರುತ್ತದೆ. ಅನೇಕ ಸಲ ಯಾವುದಾದರೊಂದು ಚಿತ್ರದ ಕಡೆಗೆ ನೋಡುವಾಗ ಅದು ಕಾಣಿಸುವ ಹಾಗೆ ಇರದೆ ಬೇರೆಯೇ ಆಗಿರುತ್ತದೆ. ಈ ಚಿತ್ರವನ್ನು ಸರಿಯಾಗಿ ಗಮನಿಸಿ ನೋಡಿದಾಗ ಅಲ್ಲಿ ಮೂರೆಮೂರು ಕೈಗಳು ಕಂಡುಬರುತ್ತವೆ.

ಏನಿದೆ ಚಿತ್ರದಲ್ಲಿ?

ಈ ಚಿತ್ರದಲ್ಲಿ ಕೆಲವು ಮಿತ್ರರು ಕೈಯಲ್ಲಿ ವಿ#ಸ್ಕಿಯ ಚಿಕ್ಕ ಬಾಟಲ್ ಹಿಡಿದಿದ್ದಾರೆ. ಇವರೆಲ್ಲರೂ ಕೂಡಿ ಚಿಯರ್ಸ್ ಮಾಡುತ್ತಿದ್ದಾರೆ. ಆದರೆ ಚಿತ್ರದಲ್ಲಿ ಕಾಣಿಸುವ ಕೈಗಳು ಎಷ್ಟಿವೆ ಎಂಬ ಪ್ರಶ್ನೆ ಮೂಡುತ್ತದೆ. ಕಾರಣ ಪ್ರಪ್ರಥಮವಾಗಿ ನೋಡಲು ಚಿತ್ರದಲ್ಲಿ ಬರಿ ಮೂರು ಕೈಗಳು ಕಂಡುಬರುತ್ತವೆ, ಆದರೆ ವಿ#ಸ್ಕಿಯ ಬಾಟಲ್ ಗಳು ಮಾತ್ರ 4 ಕಂಡುಬರುತ್ತಿವೆ. ಕೈಗಳು ಮೂರೇ ಕಂಡು ಬಂದರೂ ಬಾಟಲ್ ಗಳು ಮಾತ್ರ 4 ಕಂಡುಬರುತ್ತಿವೆ. ಹೀಗಾಗಿ ಅನೇಕರು ಈ ಚಿತ್ರವನ್ನು ನೋಡಿ ತುಂಬಾ ಕನ್ಫ್ಯೂಸ್ ಆಗಿಬಿಟ್ಟಿದ್ದಾರೆ. ನೀವು ಈ ಚಿತ್ರ ನೋಡಿದಾಗ ನಿಮಗೂ ಇದೆ ಅನುಭವ ಬರಬಹುದು.

ನಾಲ್ಕನೇ ಕೈ ಎಲ್ಲಿದೆ ಗೊತ್ತಾ?

ಪ್ರಸ್ತುತ ಚಿತ್ರದಲ್ಲಿ ನಾಲ್ಕು ಕೈಗಳಿವೆ. ಮೂರು ಕೈಗಳು ಕಂಡುಬರುತ್ತಿವೆ ಆದರೆ ನಾಲ್ಕನೇ ಕೈ ಎಲ್ಲಿ ಇದೆ? ಎಂಬ ಪ್ರಶ್ನೆಗೆ ಮುಂದೆ ಓದಿ ಉತ್ತರ ಸಿಗುತ್ತದೆ. ಗೊಂದಲದಲ್ಲಿ ಅಥವಾ ಕನ್ಫ್ಯೂಸ್ ಆದವರಿಗೆ ಸಹಾಯವಾಗಲೆಂದು ಒಬ್ಬನು ಫೋಟೋ ಕ್ರಾಪ್ ಮಾಡಿ ನಾಲ್ಕನೇ ಕೈ ಎಲ್ಲಿದೆ ಎಂಬುದನ್ನು ತೋರಿಸಿದ್ದಾನೆ. ಮೊದಲು ನೀವು ಮೇಲಿನ ಫೋಟೋವನ್ನು ಚೆನ್ನಾಗಿ ನೋಡಿ ನಾಲ್ಕನೇ ಕೈ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಿ. ಒಂದುವೇಳೆ ನಿಮಗೆ ಪತ್ತೆ ಹಚ್ಚುವುದು ಸಾಧ್ಯವಾಗದಿದ್ದರೆ ನಾವೇ ನಿಮಗೆ ಸಹಾಯ ಮಾಡುತ್ತೇವೆ.

ಈಗಾದ್ರೂ ಗೊತ್ತಾಯ್ತಾ ಫ್ರೆಂಡ್ಸ್ ಉತ್ತರ? ಇಲ್ವಾ? ನಾಲ್ಕನೇ ವ್ಯಕ್ತಿಯ ಕೈ ಫೋಟೋದ ಎಡ ಭಾಗದಲ್ಲಿ ಕಂಡುಬರುತ್ತದೆ. ಸರಿಯಾಗಿ ಗಮನಿಸಿ ನೋಡಿದಾಗ ವ್ಯಕ್ತಿಯು ಧರಿಸಿದ ಫುಲ್ ಸ್ಲೀವ್ ಕೋಟ್ ನಿಂದಾಗಿ ಕೈ ಬ್ಯಾಗ್ರೌಂಡ್ ಜೊತೆಗೆ ಕ್ಯಾಮೋಫ್ಲಾಜ್ ಆಗಿದೆ. ಎರಡನೆಯ ಕಾರಣ ಏನೆಂದರೆ, 4 ನೇ ವ್ಯಕ್ತಿಯು ಕೈಯಲ್ಲಿ ಹಾಕಿಕೊಂಡ ಗ್ಲೌಸ್ ಬಣ್ಣ ಮತ್ತು ಎದುರುಗಡೆ ನಿಂತುಕೊಂಡ ವ್ಯಕ್ತಿಯ ಜೀನ್ಸ್ ಬಣ್ಣ ಒಂದೇ ಆಗಿದೆ. ಹೀಗಾಗಿ ಆತನ ಕೈ ಬೇಗನೆ ಗಮನಕ್ಕೆ ಬರುವುದಿಲ್ಲ ಅಥವಾ ಕಣ್ಣಿಗೆ ಕಂಡುಬರುವುದಿಲ್ಲ, ಅಲ್ವಾ? ಈಗ ನೋಡಿದಾಗ ಈ ಚಿತ್ರದಲ್ಲಿಯ ನಾಲ್ಕನೇ ವ್ಯಕ್ತಿಯ ಕೈ ಎಲ್ಲಿದೆ ಎಂಬುದು ಕಂಡು ಬರುತ್ತದೆ, ಅಲ್ವಾ?