ತಂದೆಯ ನಿಧನ, ಮನೆ ಮಾರುವ ಪ್ರಸಂಗ, 30 ರೂಪಾಯಿ ಗಳಿಕೆ, ಹೀಗಿತ್ತು ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿಯ ಕಷ್ಟದ ಪಯಣ….
ರೋಹಿತ್ ಶೆಟ್ಟಿ ಇಂದು ಬಾಲಿವುಡ್ ನಲ್ಲಿ ಪ್ರಸಿದ್ಧ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಅವರ ಇಲ್ಲಿಯವರೆಗಿನ ಕಷ್ಟ ಮತ್ತು ಪರಿಶ್ರಮದಲ್ಲಿ ನಡೆದುಕೊಂಡು ಬಂದ ದಾರಿ ಒಂದು ಚಲನ ಚಿತ್ರದ ಕಥೆಯಂತೆಯೇ ಆಗಿದೆ.
ಸದ್ಯ ಬಾಕ್ಸಾಫೀಸ್ ನಲ್ಲಿ ಅಕ್ಷಯ್ ಕುಮಾರ್ ನಟನೆಯ ಮತ್ತು ರೋಹಿತ್ ಶೆಟ್ಟಿ ಅವರ ನಿರ್ದೇಶನದ ಸೂರ್ಯವಂಶಮ್ ಚಿತ್ರವು ತುಂಬಾನೇ ಸದ್ದು ಮಾಡುತ್ತಿದೆ. ಬಾಕ್ಸಾಫೀಸಿನಲ್ಲಿ ಈ ಚಿತ್ರವು ಹಳೆಯ ದಾಖಲೆಗಳನ್ನು ಮುರಿಯುತ್ತಾ ಎರಡು ನೂರು ಕೋಟಿ ರೂಪಾಯಿಗಳ ಗಳಿಕೆಯ ಕಡೆಗೆ ಮುನ್ನುಗ್ಗುತ್ತಿದೆ.

ಈ ಕಾರಣದಿಂದಾಗಿಯೇ ರೋಹಿತ್ ಶೆಟ್ಟಿಗೆ ಬಾಲಿವುಡ್ ನ ಯಶಸ್ವಿ ನಿರ್ದೇಶಕರೆಂದು ಗುರುತಿಸಲಾಗುತ್ತದೆ. ಇಂದು ಕೋಟ್ಯಾವಧಿ ರೂಪಾಯಿಗಳಲ್ಲಿ ಆಡುವ ರೋಹಿತ್ ಶೆಟ್ಟಿ ಅವರ ಇಲ್ಲಿಯವರೆಗಿನ ಪ್ರವಾಸ ಒಂದು ದುಃಖದ ಚಲನಚಿತ್ರ ಕಥೆಯ ಹಾಗೆಯೇ ಇದೆ ಎಂದರೆ ತಪ್ಪಾಗಲಾರದು.
ರೋಹಿತ್ ಶೆಟ್ಟಿ ಅವರ ತಂದೆ ಎಂ ಬಿ ಶೆಟ್ಟಿ ಬಾಲಿವುಡ್ ನಲ್ಲಿ ಪ್ರಸಿದ್ಧ ವಿಲನ್ ಗಾಗಿ ಗುರುತಿಸಿಕೊಂಡಿದ್ದರು.

ಅಮಿತಾಬ್ ಬಚ್ಚನ್ ಅವರ ಅಭಿನಯದ ಡಾನ್ ಮತ್ತು ದಿವಾರ್ ಚಿತ್ರಗಳಲ್ಲಿ ಎಂ ಬಿ ಶೆಟ್ಟಿ ಅವರು ಆಕ್ಷನ್ ನಿರ್ದೇಶನ ಸಹ ಮಾಡಿದ್ದರು.
ರೋಹಿತ್ ಶೆಟ್ಟಿ ಅವರ ತಾಯಿ ರತ್ನ ಅವರು ಜೂನಿಯರ್ ಆರ್ಟಿಸ್ಟ್ ಆಗಿ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ರೋಹಿತ್ ಶೆಟ್ಟಿ ಅವರ ತಂದೆ-ತಾಯಿಯ ಎರಡನೇ ಮದುವೆಯಾಗಿತ್ತು.

ರೋಹಿತ್ ಶೆಟ್ಟಿ ಅವರ ಮಲತಮ್ಮನು ಸಹ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾನೆ. ಆದರೆ ರೋಹಿತ್ ಶೆಟ್ಟಿ ಅವರ ಕುಟುಂಬದ ಜೊತೆಗೆ ಯಾವುದೇ ರೀತಿಯ ತಮ್ಮ ಸಂಬಂಧವಿಲ್ಲ ಎಂದು ಹೇಳುತ್ತಾರೆ.
ರೋಹಿತ್ ಶೆಟ್ಟಿ ಅವರು ಶಾಲೆಯಲ್ಲಿ ಕಲಿಯುವ ಸಮಯದಲ್ಲಿಯೇ ತಂದೆ ಸಾವಿಗೀಡಾದರು. ಇದರಿಂದಾಗಿ ಎಲ್ಲವೂ ಸರಿಯಾಗಿ ನಡೆದ ಮನೆಯ ಜವಾಬ್ದಾರಿಗಳು ಒಮ್ಮೆಲೆ ರೋಹಿತ್ ಅವರ ಹೆಗಲ ಮೇಲೆ ಬಿತ್ತು..

ರೋಹಿತ್ ಶೆಟ್ಟಿ ಅವರು ತಮ್ಮ ಸಂದರ್ಶನದಲ್ಲಿ ತಂದೆ ತೀರಿಕೊಂಡ ನಂತರ ಆರ್ಥಿಕ ಮುಗ್ಗಟ್ಟು ಎದುರಿಸಿದ ಬಗ್ಗೆ ಹೇಳುತ್ತಾರೆ. ಕೈಯಲ್ಲಿ ಹಣವಿಲ್ಲದ ಕಾರಣಕ್ಕಾಗಿ ಮನೆ ಮಾರಾಟ ಮಾಡುವ ಪ್ರಸಂಗವು ಬಂದಿತ್ತು ಎಂದು ಹೇಳುತ್ತಾರೆ. ಮನೆಯಲ್ಲಿ ಇದ್ದ ನಾಲ್ಕು ವಾಹನಗಳನ್ನು ಮಾರಾಟ ಮಾಡುವ ಪ್ರಸಂಗ ಒದಗಿಬಂತು.
ಸಂತಾಕ್ರುಜ ನಲ್ಲಿಯ ಹಾಯ್ ಪ್ರೊಫೈಲ್ ಏರಿಯಾದಿಂದ ರೋಹಿತ್ ಶೆಟ್ಟಿಯವರು ತಮ್ಮ ತಾಯಿಯ ಜೊತೆಗೆ ದಹಿಸರ್ ಗೆ ಶಿಫ್ಟ್ ಆದರು. ದಹಿಸರ್ ನಲ್ಲಿ ಒಳ್ಳೆಯ ಶಾಲೆ ಇಲ್ಲದ ಕಾರಣ ಸಾಂತಾಕ್ರುಜ್ ನಲ್ಲಿಯ ಶಾಲೆ ಮಾತ್ರ ಬಿಡಲಿಲ್ಲ. ದಹಿಸರ್ ನಿಂದ ಶಾಲೆಗೆ ಹೋಗಲು ರೋಹಿತ್ ಶೆಟ್ಟಿ ಅವರಿಗೆ ಒಂದುವರೆ ಗಂಟೆ ಬೇಕಾಗುತ್ತಿತ್ತು.

ತಾಯಿಯ ಮೊದಲ ಗಂಡನ ಮಲ ತಂಗಿಯಿಂದಾಗಿ ರೋಹಿತ್ ಶೆಟ್ಟಿ ಅವರು ಕುಕು ಕೊಹ್ಲಿ ಅವರ ಸಂಪರ್ಕದಲ್ಲಿ ಬಂದರು. ಆದರೆ ಆ ಸಮಯದಲ್ಲಿ ರೋಹಿತ್ ಶೆಟ್ಟಿ ಅವರು ಬರೀ 15 ವರ್ಷದವರಿದ್ದ ಕಾರಣಕ್ಕಾಗಿ ಕುಕು ಕೊಹ್ಲಿ ಅವರು ರೋಹಿತ್ ಗೆ ಕೆಲಸ ನೀಡಲು ನಿರಾಕರಿಸಿದರು.
ಮುಂದೆ ಒಂದುವರೆ ವರ್ಷದ ನಂತರ ಕುಕು ಕೊಹ್ಲಿ ಅವರು ರೋಹಿತ್ ಶೆಟ್ಟಿಗೆ ತಮ್ಮ ಪ್ರಾಜೆಕ್ಟ್ ನ್ನಲ್ಲಿ ಇಂಟರ್ನ್ ಎಂದು ಕೆಲಸ ನೀಡಿದರು. ಆಗ ಅವರಿಗೆ ದಿನವೊಂದಕ್ಕೆ ಮೂವತ್ತು ರೂಪಾಯಿ ಸಂಬಳ ಸಿಗುತ್ತಿತ್ತು. ಆ ಪ್ರಾಜೆಕ್ಟ್ ಅಜಯ್ ದೇವಗನ್ ಅವರ ಮೊದಲ ಚಿತ್ರ ಫೂಲ್ ಔರ್ ಕಾಟೆ ಆಗಿತ್ತು.
ಆರ್ಥಿಕ ಪರಿಸ್ಥಿತಿಯಲ್ಲಿ ಮುಗ್ಗರಿಸಿದ ಕಾರಣ ರೋಹಿತ್ ಶೆಟ್ಟಿ ಅವರ ತಾಯಿ ಒಂದು ದಿನ ಅಮಿತಾಬ್ ಬಚ್ಚನ್ ಅವರ ಕಡೆಗೆ ಸಹಾಯಕ್ಕಾಗಿ ಯಾಚಿಸಿದರು. ರೋಹಿತ್ ಅವರ ತಂದೆ ಎಂಬಿ ಶೆಟ್ಟಿ ಅಮಿತಾಬ್ ಅವರ ಒಳ್ಳೆಯ ಮಿತ್ರನಾಗಿದ್ದರಿಂದ ಅಮಿತಾಬ್ ಅವರು ಆ ಸಮಯದಲ್ಲಿ ಸ್ವಲ್ಪ ಹಣದ ಸಹಾಯ ಮಾಡಿದರು. ಇದೇ ಕಾರಣದಿಂದ ರೋಹಿತ್ ಅವರು ಯಾವತ್ತೂ ಅಮಿತಾಭ್ ಅವರಿಗೆ ಋಣಿಯಾಗಿದ್ದೇನೆ ಎಂದು ಹೇಳುತ್ತಾರೆ.

ಮುಂದೆ ಸುಹಾಗ್ ಚಿತ್ರಕ್ಕಾಗಿ ರೋಹಿತ್ ಶೆಟ್ಟಿಯವರು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದರು. ಇದೇ ಚಿತ್ರದಲ್ಲಿ ರೋಹಿತ್ ಅವರು ಅಕ್ಷಯ್ ಕುಮಾರ್ ಅವರ ಬಾಡಿ ಡಬಲ್ ಆಗಿ ಕೆಲಸ ಮಾಡಿದ್ದರು.
ಅಜಯ್ ದೇವಗನ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ ಅನೇಕ ಚಿತ್ರಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ರೋಹಿತ್ ಶೆಟ್ಟಿ ಅಜಯ್ ಜೊತೆಗೆ ಕೆಲಸ ಮಾಡಿದ್ದಾರೆ. ಇದರಿಂದ ಅವರ ಮೈತ್ರಿಯು ಚೆನ್ನಾಗಿದೆ.

ರೋಹಿತ್ ಶೆಟ್ಟಿ ಅವರು ಯಾವತ್ತೂ ಅಜಯ್ ದೇವಗನ್ ಅವರಿಗೆ ದೊಡ್ಡ ಅಣ್ಣ ಎಂದು ತಿಳಿಯುತ್ತಾರೆ.
ಸದ್ಯ ರೋಹಿತ್ ಶೆಟ್ಟಿಯವರು ಚಲನಚಿತ್ರದ ನಿರ್ದೇಶನ ಮಾಡುವಲ್ಲಿ ಉತ್ಸುಕರಾಗಿದ್ದಾರೆ. ತಮ್ಮ ಮೊದಲ ಚಿತ್ರ ಅಜಯ್ ಅವರ ಜೊತೆಗೆ ಇರುತ್ತದೆ ಎಂದು ಮೊದಲೇ ನಿಶ್ಚಯಿಸಿದ್ದರು.
ಮುಂದೆ ಅವರು ತಯಾರಿಸಿದ ಗೋಲ್ಮಾಲ್, ಗೋಲ್ಮಾಲ್ ರಿಟರ್ನ್, ಸಿಂಘಮ್, ಬೋಲ್ ಬಚ್ಚನ್ ಹೀಗೆ ಒಂದರ ನಂತರ ಒಂದು ಚಿತ್ರಗಳು ಹಿಟ್ ಆಗುತ್ತ ನಡೆದವು. ಇದರಿಂದಾಗಿ ಬಾಲಿವುಡ್ ರೋಹಿತ್ ಶೆಟ್ಟಿ ಅವರ ಕಡೆಗೆ ಯಶಸ್ವಿ ನಿರ್ದೇಶಕರೆಂದೇ ನೋಡಲಾಗುತ್ತದೆ.
2010 ರಿಂದ 2018ರವರೆಗೆ ರೋಹಿತ್ ಶೆಟ್ಟಿ ಅವರ ಒಟ್ಟು ಎಂಟು ಚಿತ್ರಗಳು ತೆರೆ ಕಂಡವು. ಈ ಎಲ್ಲ ಚಿತ್ರಗಳು ಬಾಕ್ಸಾಫೀಸಿನಲ್ಲಿ 100 ಕೋಟಿ ರೂಪಾಯಿಗಳ ಗಳಿಕೆ ಮಾಡಿವೆ.

ಇಲ್ಲಿಯವರೆಗೆ ರೋಹಿತ್ ಶೆಟ್ಟಿ ಅವರು ಒಟ್ಟು 14 ಚಿತ್ರಗಳ ನಿರ್ದೇಶನ ಮಾಡಿದ್ದಾರೆ. ಅವುಗಳಲ್ಲಿ ಹತ್ತು ಚಿತ್ರಗಳಲ್ಲಿ ಅಜಯ್ ದೇವಗನ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದ ಎರಡು ಸಿಂಬಾ ಮತ್ತು ಸೂರ್ಯವಂಶಿ ಚಿತ್ರದಲ್ಲಿ ಅಜಯ್ ದೇವಗನ್ ಅವರು ಅತಿಥಿಯಾಗಿ ನಟಿಸಿದ್ದಾರೆ.
ಅಜಯ್ ದೇವಗನ್ ಅವರು ನನ್ನ ಮೇಲೆ ವಿಶ್ವಾಸವಿಡದೆ ಇದ್ದರೆ ಇಂದು ನಾನು ಇಷ್ಟೊಂದು ಯಶಸ್ವಿಯಾಗುತ್ತಿರಲಿಲ್ಲ ಎಂದು ರೋಹಿತ್ ಅವರು ಯಾವಾಗಲೂ ಹೇಳುತ್ತಾರೆ.

ಒಂದು ಸಮಯದಲ್ಲಿ ಮೂವತ್ತು ರೂಪಾಯಿಗಳನ್ನು ಉಳಿಸಿಕೊಳ್ಳುವ ಸಲುವಾಗಿ ನಡೆದುಕೊಂಡೆ ತಿರುಗಾಡುವ ರೋಹಿತ್ ಶೆಟ್ಟಿಯವರು ಇಂದು ದುಬಾರಿ ವಾಹನಗಳ ಮಾಲೀಕರಾಗಿದ್ದಾರೆ.