Viral video! ಶರವೇಗದಲ್ಲಿ ಬಂದು ರೈಲ್ವೆ ಗೇಟ್ ದಾಟಲು ಪ್ರಯತ್ನಿಸಿದ ಬೈಕ್ ಸವಾರನ ಸ್ಥಿತಿ ನೀವೇ ನೋಡಿ….ಏನಾಗಿದೆ?
ವಾಹನಗಳ ಹಿಂದುಗಡೆ ಬರೆದಿರುವ ‘ಅವಸರವೇ ಅಪಘಾತಕ್ಕೆ ಕಾರಣ’ ಈ ವಾಕ್ಯವನ್ನು ಎಲ್ಲರೂ ಓದಿರುತ್ತಾರೆ, ಆದರೆ ಯಾರೂ ಅದನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಗಡಿಬಿಡಿಯಲ್ಲಿ ಮಾಡುವ ಪ್ರತಿಯೊಂದು ಕೆಲಸ ನಷ್ಟಕ್ಕೆ ಎಡೆ ಮಾಡಿ ಕೊಡುವದು ನಿಜ. ಇದೇ ವಿಷಯಕ್ಕೆ ಸಂಬಂಧಿಸಿದ ವೀಡಿಯೋ ಒಂದು ಇನ್ಸ್ಟಾ ಗ್ರಾಮ್ ನಲ್ಲಿ ಸದ್ಯ ಎಲ್ಲರ ಗಮನ ತನ್ನ ಕಡೆಗೆ ಸೆಳೆದು ಕೊಳ್ಳುತ್ತಿದೆ. ಇದರಲ್ಲಿ ಬೈಕ್ ಸವಾರನ ಗಡಿಬಿಡಿ ಎಂಥ ಅನಾಹುತಕ್ಕೆ ಕಾರಣವಾಯಿತು ಎಂಬುದನ್ನು ತಿಳಿಯಲು ಈ ವಿಡಿಯೋವನ್ನು ನೋಡಿ…..
ಪ್ರಸ್ತುತ ವಿಡಿಯೋದಲ್ಲಿ ರೈಲ್ವೆ ಗೇಟ್ ಕಾಣುತ್ತದೆ. ಅಲ್ಲಿ ರೈಲು ಬರುವ ಮುಂಚೆ ರೈಲ್ವೆ ಗೇಟ್ ಮುಚ್ಚುತ್ತಿರುವ ದೃಶ್ಯ ಕಂಡು ಬರುತ್ತದೆ. ಇದೇ ಸಮಯದಲ್ಲಿ ಒಂದು ಕಾರು ಹಾಗೂ ಬೈಕ್ ಪಾಸ್ ಆಗುತ್ತದೆ. ಇನ್ನೊಬ್ಬ ಬೈಕ್ ಸವಾರನು ರೈಲ್ವೆ ಗೇಟ್ ಮುಚ್ಚುವ ಮುನ್ನ ತಾನು ಸಹ ಇಲ್ಲಿಂದ ಪಾಸ್ ಆಗಬಹುದು ಎಂದು ವಿಚಾರ ಮಾಡಿ ತನ್ನ ಬೈಕಿನ ವೇಗ ಮತ್ತಷ್ಟು ಹೆಚ್ಚಿಸಿ ಬರುತ್ತಾನೆ. ಆದರೆ ದುರದೃಷ್ಟವಶಾತ್ ಆತ ವೇಗದಲ್ಲಿ ಬಂದು ನೇರ ರೈಲ್ವೆ ಗೇಟಿನ ಅಡ್ಡವಾದ ಕಂಬಕ್ಕೆ ಜೋರಾಗಿ ಢಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾನೆ.
ಈ ಪ್ರಯತ್ನದಲ್ಲಿ ಬೈಕ್ ಸವಾರನು ಜೋರಾಗಿ ಕೆಳಗೆ ಬಿದ್ದರೂ ಮತ್ತೆ ಎದ್ದು ನಿಲ್ಲುತ್ತಾನೆ.
ವಿಡಿಯೋ ನೋಡಿ
ಈ ವಿಡಿಯೋ ನೋಡಿದ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಬೈಕ್ ಸವಾರನಿಗೆ ಚೆನ್ನಾಗಿ ಮಂಗಳಾರತಿ ಮಾಡುತ್ತಿದ್ದಾರೆ. ಬರೀ 5 ದಿನಗಳ ಹಿಂದೆ ಹಾಕಿದ ಈ ವಿಡಿಯೋವನ್ನು ಇಲ್ಲಿಯವರೆಗೆ 4 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.
ಅದಕ್ಕೆ ಹೇಳುವದು ‘ಅವಸರವೇ ಅಪಘಾತಕ್ಕೆ ಕಾರಣ’ ಎಂದು, ಅಲ್ವಾ?