ಈ ಪಾಕಿಸ್ತಾನ ಯಾಕಾದರೂ ಹೀಗೆ ಮಾಡುತ್ತೆ? ಸರಣಿ ರದ್ದು ಗೊಳಿಸಿ ಬಾಂಗ್ಲಾದೇಶದಿಂದ ಮೊದಲು ಹೊರ ಹಾಕಿ! ಬಾಂಗ್ಲಾ ಅಭಿಮಾನಿಗಳು.

ಪ್ರತಿಯೊಂದು ಕ್ಷೇತ್ರದಲ್ಲಿ ಪಾಕಿಸ್ತಾನವು ವಿವಾದ ಹುಟ್ಟುಹಾಕುವುದರಲ್ಲಿ ಎತ್ತಿದ ಕೈ. ಈಗ ಪಾಕಿಸ್ತಾನ ಕ್ರಿಕೆಟ್ ತಂಡವು ಹೊಸ ವಾದಕ್ಕೆ ಎಡೆಮಾಡಿಕೊಟ್ಟಿದೆ. ಈ ಕಾರಣದಿಂದಾಗಿ ಪಾಕಿಸ್ತಾನ ತಂಡಕ್ಕೆ ಬಾಂಗ್ಲಾದೇಶದಿಂದ ಮೊದಲು ಓಡಿಸಿ ಕಳುಹಿಸಿ ಎಂದು ಬಾಂಗ್ಲಾದೇಶದ ಅಭಿಮಾನಿಗಳು ಸರಕಾರಕ್ಕೆ ಯಾಚನೆ ಮಾಡುತ್ತಿದ್ದಾರೆ. ಇಂತಹ ಕೀಳು ಮಟ್ಟದ ಕೆಲಸ ಪಾಕಿಸ್ತಾನ ಏನು ಮಾಡಿದೆ ಎನ್ನುತ್ತೀರಾ? ಮುಂದೆ ಓದಿ ಗೊತ್ತಾಗುತ್ತದೆ.

T20 ವರ್ಲ್ಡ್ ಕಪ್ ನಂತರ ಜಗತ್ತಿನ ತುಂಬಾ ಮತ್ತೆ ಕ್ರಿಕೆಟ್ ಹಬ್ಬ ಶುರುವಾಗಿದೆ. ನಮ್ಮಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಸರಣಿ ಶುರುವಾಗಿದ್ದರೆ ಅತ್ತ ಪಾಕಿಸ್ತಾನವೂ ಬಾಂಗ್ಲಾದೇಶದಲ್ಲಿ 3 ಟಿ20 ಪಂದ್ಯಗಳನ್ನು ಆಡಲು ಬಾಂಗ್ಲಾದೇಶಕ್ಕೆ ಬಂದಿದೆ. ಈ ಸರಣಿಗಾಗಿ 2 ತಂಡಗಳು ಮೈದಾನದಲ್ಲಿ ಬೆವರು ಹರಿಸುತ್ತಿವೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನ ತಂಡವು ಮಾಡಿದ ಒಂದು ಕೃತಿಯಿಂದ ಬಾಂಗ್ಲಾದೇಶದಲ್ಲಿ ದೊಡ್ಡ ವಿವಾದವೇ ಹುಟ್ಟು ಹಾಕಿದೆ. ಮೀರಪುರ ಆಟದ ಮೈದಾನದಲ್ಲಿ ಸರಣಿ ಪ್ರಾರಂಭವಾಗುವ ಮುನ್ನ ಪಾಕಿಸ್ತಾನ ತಂಡವು ಪ್ರಾಕ್ಟೀಸ್ ಮಾಡುವಾಗ ನೆಟ್ ನಲ್ಲಿ ತಮ್ಮ ರಾಷ್ಟ್ರಧ್ವಜವನ್ನು ನೆಟ್ಟಿದೆ. ಇದೇ ಕಾರಣದಿಂದ ವಿವಾದವು ಶುರುವಾಗಿದೆ. ಬಾಂಗ್ಲಾದೇಶದ ಕ್ರಿಕೆಟ್ ಪ್ರೇಮಿಗಳಿಗೆ ಪಾಕಿಸ್ತಾನದ ಈ ಕೃತಿ ಸ್ವಲ್ಪವೂ ರುಚಿಸಿಲ್ಲ. ಬಾಂಗ್ಲಾದೇಶ ಸ್ವಾತಂತ್ರ್ಯದ ಸುವರ್ಣ ಜಯಂತಿಯ ಕಾರ್ಯಕ್ರಮಕ್ಕೂ ಮುನ್ನ ಪಾಕಿಸ್ತಾನವು ರಾಜಕೀಯ ದುರುದ್ದೇಶದಿಂದ ಈ ಕೃತಿ ಉದ್ದೇಶಪೂರ್ವಕವಾಗಿಯೇ ಮಾಡುತ್ತಿದೆಯೆಂದು ಬಾಂಗ್ಲಾದೇಶದ ಜನರು ಆರೋಪಿಸುತ್ತಿದ್ದಾರೆ.

ಇಲ್ಲಿಯವರೆಗೆ ಅನೇಕ ದೇಶಗಳು ಬಾಂಗ್ಲಾದೇಶ ಪ್ರವಾಸ ಮಾಡಿವೆ. ಅನೇಕ ದೇಶಗಳು ಇಲ್ಲಿ ಬಂದು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿವೆ. ಆದರೆ ಯಾವ ದೇಶವು ಸಹ ಇಲ್ಲಿಯವರೆಗೆ ತಮ್ಮ ದೇಶದ ಬಾವುಟವನ್ನು ಬಾಂಗ್ಲಾದೇಶದ ಭೂಮಿಯ ಮೇಲೆ ನೆಡುವಂತಹ ದುಷ್ಕೃತಿಯನ್ನು ಯಾರು ಮಾಡಿಲ್ಲ. ಅಂದಮೇಲೆ ಪಾಕಿಸ್ತಾನವೇ ಇಂಥ ಕೃತಿ ಯಾಕೆ ಮಾಡಿರಬಹುದು? ಇದರ ಮೇಲಿಂದ ಪಾಕಿಸ್ತಾನಕ್ಕೆ ಏನನ್ನು ಸಿದ್ಧಮಾಡಿ ತೋರಿಸುವುದಿದೆ? ಎಂದು ಅನೇಕರು ಪ್ರಶ್ನೆ ಹಾಕಿದ್ದಾರೆ.

ಈ ವಿವಾದವು ಹೆಚ್ಚಾಗುತ್ತಿದ್ದಂತೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ ಈ ಸಂಬಂಧ ಒಂದು ಸ್ಪಷ್ಟೀಕರಣವನ್ನು ನೀಡಿದೆ. ಕಳೆದ ಎರಡು ತಿಂಗಳುಗಳಿಂದ ಪಾಕಿಸ್ತಾನ ತಂಡವು ಪ್ರಾಕ್ಟೀಸ್ ಮಾಡುವಾಗ ತನ್ನ ದೇಶದ ಬಾವುಟವನ್ನು ನೆಟ್ಟು ಪ್ರಾಕ್ಟೀಸ್ ಮಾಡುತ್ತಿದೆ ಎಂದು ಹೇಳಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಇನ್ನೂವರೆಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಪಾಕಿಸ್ತಾನ ತಂಡಕ್ಕೆ ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ. ಪ್ರಾಕ್ಟೀಸ್ ಮಾಡುವಾಗ ಪಾಕಿಸ್ತಾನದ ಬಾವುಟವನ್ನು ಹಚ್ಚಬಾರದು ಮತ್ತು ಆ ಬಾವುಟವನ್ನು ತಕ್ಷಣ ತೆಗೆಯಬೇಕು ಎಂದು ಬಾಂಗ್ಲಾ ಅಭಿಮಾನಿಗಳು ಡಿಮಾಂಡ್ ಮಾಡುತ್ತಿದ್ದಾರೆ. ಪಾಕಿಸ್ತಾನ ತಂಡ ಮಾಡಿದ ಈ ಕೃತಿ ನಾಚಿಕೆಗೇಡಿನ ಕೃತಿಯಾಗಿದೆ ಎಂದು ಕೆಲವು ಯೂಸರ್ ಗಳು ಚೀಮಾರಿ ಹಾಕಿದ್ದಾರೆ. ಕೆಲವರಂತೂ ಪಾಕಿಸ್ತಾನ ವಿರುದ್ಧದ ಸರಣಿಯನ್ನು ರದ್ದುಗೊಳಿಸಬೇಕೆಂದು ಬಾಂಗ್ಲಾ ಸರ್ಕಾರಕ್ಕೆ ಕೇಳಿಕೊಂಡಿದ್ದಾರೆ. ಪಾಕಿಸ್ತಾನಿ ಕ್ರಿಕೆಟಿಗರು ಮಾಡಿದ ಈ ಕೃತಿಗೆ ಅವರನ್ನು ದೇಶದಿಂದಲೇ ಓಡಿಸಿ ಕಳುಹಿಸಬೇಕು ಎಂದು ಕೆಲವು ಯೂಸರ್ ಗಳು ಆಕ್ರೋಶ ವ್ಯಕ್ತ ಮಾಡಿದ್ದಾರೆ.