Astro tips for job : ಪರಿಶ್ರಮದ ಹೊರತಾಗಿಯೂ ನೌಕರಿ, ವ್ಯವಸಾಯದಲ್ಲಿ ಯಶಸ್ಸು ಸಿಗುತ್ತಿಲ್ಲವೆ? ಹಾಗಾದರೆ ಜ್ಯೋತಿಷಶಾಸ್ತ್ರದ ಈ ಉಪಾಯ ಟ್ರೈ ಮಾಡಿ….
ಬದುಕಿಗೆ ಸಂಬಂಧಿಸಿದ ಎಲ್ಲ ಸುಖಗಳನ್ನು ಪಡೆಯುವ ಸಲುವಾಗಿ ಪ್ರತಿಯೊಬ್ಬ ಮನುಷ್ಯನು ಹಗಲು-ರಾತ್ರಿ ಪರಿಶ್ರಮ ತೆಗೆದುಕೊಳ್ಳುತ್ತಾನೆ. ಆದರೂ ನೌಕರಿ, ಉದ್ಯೋಗ ಅಥವಾ ವ್ಯವಸಾಯದಲ್ಲಿ ಅನೇಕ ಸಲ ಸಾಕಷ್ಟು ಕಷ್ಟಪಟ್ಟರೂ ವ್ಯಕ್ತಿಗೆ ಅಪೇಕ್ಷಿತವಾದ ಪ್ರಗತಿ ಅಥವಾ ಯಶಸ್ಸು ದೊರೆಯುವುದಿಲ್ಲ.
ನೀವು ಸಹಿತ ಮಾಡುತ್ತಿರುವ ನಿಮ್ಮ ನೌಕರಿಯಲ್ಲಿ ಪ್ರಮೋಷನ್ ಅಥವಾ ನಿಮ್ಮ ವ್ಯವಸಾಯದಲ್ಲಿ ಇನ್ನಷ್ಟು ಪ್ರಗತಿ ಸಾಧಿಸುವ ಸಲುವಾಗಿ ಅನೇಕ ದಿನಗಳಿಂದ ಪರಿಶ್ರಮ ಪಡುತ್ತಿರಬಹುದು. ನಿಮ್ಮ ಕನಸುಗಳನ್ನು ನನಸಾಗಿ ಮಾಡಲು ಜ್ಯೋತಿಶಾಸ್ತ್ರದ ಸರಳ ಮತ್ತು ಪ್ರಭಾವಪೂರ್ಣವಾದ ಉಪಾಯಗಳನ್ನು ಒಂದು ಸಲ ಟ್ರೈ ಮಾಡಿ ನೋಡಬಹುದು.

- ಸೂರ್ಯದೇವನ ಉಪಾಸನೆಯಿಂದ ಎಲ್ಲ ಕನಸುಗಳು ನನಸಾಗುವವು.
ಒಂದು ವೇಳೆ ನಿಮಗೆ ನಿಮ್ಮ ನೌಕರಿಯಲ್ಲಿ ಅಪೇಕ್ಷಿತವಾದ ಪ್ರಗತಿ ಅಥವಾ ಯಶಸ್ಸು ಪಡೆಯಬೇಕಾದರೆ, ಮೊಟ್ಟಮೊದಲು ದಿನಂಪ್ರತಿ ಮುಂಜಾನೆ ಸೂರ್ಯೋದಯಕ್ಕಿಂತ ಮುನ್ನವೇ ಹಾಸಿಗೆಯಿಂದ ಏಳಬೇಕು. ಆಮೇಲೆ ಬೇಗನೆ ಸ್ನಾನ ಮಾಡಿ ದಿನಂಪ್ರತಿ ಉದಯಿಸುವ ಸೂರ್ಯನಿಗೆ ತಾಮ್ರದ ಕಲಶದಿಂದ ಅರ್ಘ್ಯವನ್ನು ಅರ್ಪಿಸಬೇಕು. ಅದರ ಜೊತೆಗೆ “ಆದಿತ್ಯ ಹೃದಯ ಸ್ತೋತ್ರ” ಅಥವಾ ಸೂರ್ಯಾಶ್ಟಕವನ್ನು ಪಠಿಸಬೇಕು. ಸೂರ್ಯದೇವನ ಸ್ಮರಣೆಮಾಡುವ ಈ ಉಪಾಯದಿಂದ ನಿಮ್ಮಲ್ಲಿ ಧನಾತ್ಮಕ ವಿಚಾರಗಳು ನಿರ್ಮಾಣವಾಗುವವು. ಅಷ್ಟೇ ಅಲ್ಲ ಆತನ ಆಶೀರ್ವಾದದಿಂದ ನಿಮಗೆ ಶಕ್ತಿ ಮತ್ತು ಬುದ್ಧಿ ಸಿಗುವುದು. ಈ ಸಹಾಯದಿಂದ ನಿಮ್ಮ ನೌಕರಿ ಅಥವಾ ವ್ಯವಸಾಯದಲ್ಲಿ ಬರುವ ವಿವಿಧ ಅ#ಡತಡೆಗಳು ದೂರವಾಗುವುದರ ಜೊತೆಗೆ ನಿಮ್ಮ ಶ#ತ್ರುಗಳ ಮೇಲೆಯೂ ಸಹ ಜಯ ಸಾಧಿಸಬಹುದು. ಸೂರ್ಯದೇವನ ಉಪಾಸನೆಯಲ್ಲಿ ಸಾಧ್ಯವಾದರೆ ಗಾಯತ್ರಿ ಮಂತ್ರವನ್ನೂ ಪಠಿಸಬಹುದು.
- ಶಂಕರನ ಪೂಜೆಯಿಂದ ಪ್ರಮೋಷನ್ ದೊರೆಯುವ ಆಸೆಯು ಪೂರ್ಣವಾಗುವದು.
ಜಗತ್ತಿನ ಕಲ್ಯಾಣವನ್ನೇ ಮಾಡುವ ದೇವತೆಯೆಂದು ಶಂಕರನ ಪೂಜೆ ಮಾಡಲಾಗುತ್ತದೆ. ಕರಿಯರ್ ಅಥವಾ ವ್ಯವಸಾಯದಲ್ಲಿ ಅಪೇಕ್ಷಿತವಾದ ಪ್ರಗತಿ ಪಡೆಯುವ ಸಲುವಾಗಿ ಶಂಕರನ ಪೂಜೆಗೆ ಮಹತ್ವವಿದೆ. ಒಂದು ವೇಳೆ ನಿಮಗೆ ನೌಕರಿಯಲ್ಲಿ ಯಾವುದೇ ಪ್ರಕಾರದ ಸಮಸ್ಯೆ ಕಾಡುತ್ತಿದ್ದರೆ ನೀವು ದೇವಾದಿದೇವ ಶಂಕರನ ಉಪಾಸನೆಯನ್ನು ಮಾಡಬೇಕು. ಪ್ರತಿ ಸೋಮವಾರ ಶಿವಲಿಂಗದ ಮೇಲೆ ಹಾಲನ್ನು ಅರ್ಪಿಸುತ್ತಾ “ಓಂ ಸೋಮೇಶ್ವರಾಯ ನಮಃ” ಎಂಬ ಮಂತ್ರವನ್ನು ಜಪಿಸಬೇಕು. ಹಾಗೆಯೇ ಈ ಮಂತ್ರವನ್ನು ಪಠಿಸುತ್ತಾ ಕನಿಷ್ಠ ಒಂದು ಮಾಲೆಯನ್ನು ಜಪಿಸಬೇಕು. ಶ್ರದ್ಧೆಯಿಂದ ಈ ಉಪಾಯವನ್ನು ಮಾಡಿದ್ದೇ ಆದರೆ ನಿಜಕ್ಕೂ ಚಮತ್ಕಾರಿಕ ಲಾಭಗಳು ಆಗಿಯೇ ಆಗುತ್ತದೆ.
- ಆಲದ ಮರದ ಪೂಜೆಯ ಉಪಾಯ.
ಶನಿ ದೋ#ಷದಿಂದ ನಿಮ್ಮ ಕರಿಯರ್ ಮತ್ತು ವ್ಯವಸಾಯದಲ್ಲಿ ಸ#ಮಸ್ಯೆಗಳು ಉದ್ಭವಿಸುತ್ತಿದ್ದರೆ ಅದನ್ನು ದೂರ ಮಾಡುವ ಸಲುವಾಗಿ ಪ್ರತಿ ಶನಿವಾರ ಆಲದ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಬೇಕು. ಶುಭಕಾರ್ಯದ ಸಲುವಾಗಿ ಗುರುವಾರದಂದು ಆಲದಮರದ ಗಿಡಕ್ಕೆ ಶುದ್ಧ ಜಲವನ್ನು ಅರ್ಪಿಸಬೇಕು.
- ದಕ್ಷಿಣಾವರ್ತಿ ಶಂಖದ ಪವಾಡ ಸದೃಶ್ಯ ಉಪಾಯ.
ಒಂದುವೇಳೆ ನಿಮಗೆ ನಿಮ್ಮ ಉದ್ಯೋಗ ವ್ಯವಸಾಯ ಅಥವಾ ಕರಿಯರ್ ನಲ್ಲಿ ಬೇಕಾಗಿರುವಂತಹ ಅಪೇಕ್ಷಿತವಾದ ಯಶಸ್ಸು ಸಿಗದೇ ಇದ್ದಾಗ ಯಾವುದೇ ತಿಂಗಳ ಶುಕ್ಲಪಕ್ಷದ ಸೋಮವಾರದಂದು ನೀವು ಮಾಡುವ ಕೆಲಸದ ಸ್ಥಳದಲ್ಲಿ ದಕ್ಷಿಣಾವರ್ತಿ ಶಂಖದ ಸ್ಥಾಪನೆಯನ್ನು ಮಾಡಿ. ತದನಂತರ ದಿನಂಪ್ರತಿ ಆ ಶಂಖಿನ ಪೂಜೆಯನ್ನು ಮಾಡಿ. ಶಂಖಿಗೆ ಸಂಬಂಧಿಸಿದ ಈ ಉಪಾಯವನ್ನು ಮಾಡಿದಾಗ ನಿಮ್ಮ ವ್ಯವಸಾಯದಲ್ಲಿ ಅದ್ಭುತವಾದ ಲಾಭ ಮತ್ತು ಯೋಗ್ಯ ಬದಲಾವಣೆ ಕಂಡು ಬರುತ್ತದೆ.
Disclaimer- ಈ ಲೇಖನದಲ್ಲಿ ನೀಡಿದ ಮಾಹಿತಿ, ಸೂಚನೆ ಮತ್ತು ಪದ್ಧತಿಗಳನ್ನು ಉಪಲಬ್ಧವಿದ್ದ ಸಾಮಾನ್ಯ ಮಾಹಿತಿಯ ಆಧಾರದ ಮೇಲೆ ನೀಡಲಾಗಿದೆ. ಈ ರೀತಿಯ ಯಾವುದೇ ಉಪಾಯಗಳನ್ನು ಮಾಡುವ ಮೊದಲು ಜ್ಯೋತಿಷ್ಯ ವಿಷಯದ ತಜ್ಞರಿಂದ ಸಲಹೆಯನ್ನು ಪಡೆದುಕೊಳ್ಳಿ.