ಕಪಲ್ಸ್ ಗಳಿಗೆ ಪ್ಯಾರಾಸಿಲಿಂಗ್ ಬಿತ್ತು ದುಬಾರಿ… ಪ್ಯಾರಶೂಟ್ ಆಕಾಶದಲ್ಲಿ ಹಾರುತ್ತಲೇ ಕತ್ತರಿಸಿತು ಹಗ್ಗ! ನೋಡಿ ಈ ವೈರಲ್ ವಿಡಿಯೋ……

ನೀವು ಅನೇಕ ಸಲ ಪ್ರತ್ಯಕ್ಷವಾಗಿ ಅಥವಾ ಸೋಷಿಯಲ್ ಮೀಡಿಯಾದಲ್ಲಿ ಅಡ್ವೆಂಚರ್ಸ್ ಗೇಮ್ ಅಥವಾ ಸಾಹಸಿಕ ಆಟಗಳನ್ನು ನೋಡಿರಬಹುದು. ಪ್ಯಾರಾಗ್ಲೈಡಿಂಗ್, ಪ್ಯಾರ ಸೀಲಿಂಗ್, ರೋಪ್ ಜಂಪಿಂಗ್, ಸ್ಕೈಡೈವಿಂಗ್ ನಂತಹ ಅನೇಕ ಸಾಹಸಮಯ ಆಟಗಳನ್ನು ಆಡಲಾಗುತ್ತದೆ.

ಅನೇಕರು ಧೈರ್ಯದಿಂದ ಇಂತಹ ಆಟಗಳನ್ನು ಆಡಲು ಮುಂದೆ ಬರುತ್ತಾರೆ ಮತ್ತು ಸಂತೋಷ ಪಡೆಯುತ್ತಾರೆ. ಆದರೆ ಕೆಲವು ಸಲ ಇದೇ ಆಟಗಳು ಜೀವಕ್ಕೆ ಕುತ್ತು ತರುತ್ತವೆ. ಇಂಥ ಸಾಹಸಮಯ ಆಟಗಳನ್ನು ಆಡುವಾಗ ಎಷ್ಟೋ ಸಲ ಅನೇಕ ದುರ್ಘಟನೆಗಳಾಗಿ ಅನೇಕರು ತಮ್ಮ ಪ್ರಾಣವನ್ನು ಸಹ ಕಳೆದುಕೊಂಡಿದ್ದಾರೆ.

ಇದೇ ರೀತಿಯ ಘಟನೆಯ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡುತ್ತಿರುವಾಗ ನಿಮ್ಮ ಎದೆಯು ಸಹ ಡವಡವ ಎನ್ನದೆ ಇರಲಾರದು. ಈ ವಿಡಿಯೋ ನೋಡಿದ ನಂತರ ಈ ರೀತಿಯ ಆಟವನ್ನು ಆಡುವ ಮುನ್ನ ಹತ್ತು ಸಲ ವಿಚಾರ ಮಾಡುವಿರಿ. ವೈರಲ್ ಆಗುತ್ತಿರುವ ಈ ವಿಡಿಯೋ ಪ್ಯಾರಾಸೀಲಿಂಗ್ ಮಾಡುವ ಸಂದರ್ಭದಲ್ಲಿಯದಿದೆ. ಈ ವಿಡಿಯೋದಲ್ಲಿ ಒಂದು ಕಪಲ್ಸ್ ಬೋಟಿಗೆ ಹಗ್ಗವನ್ನು ಕಟ್ಟಿ ಪ್ಯಾರಾಸೀಲಿಂಗ್ ಆನಂದ ಪಡೆಯುತ್ತಿದ್ದಾರೆ. ಏತನ್ಮದ್ಯೆ ಪ್ಯಾರಶೂಟ್ ಸಹಾಯದಿಂದ ಈ ಕಪಲ್ಸ್ ಗಳು ಆಕಾಶದಲ್ಲಿ ತುಂಬಾ ಮೇಲೆ ಹೋಗಿದ್ದಾರೆ. ಅದೇ ಸಮಯದಲ್ಲಿ ಪ್ಯಾರಶೂಟ್ ಗೆ ಕಟ್ಟಿದ ಹಗ್ಗವು ಕತ್ತರಿಸಿದೆ.

ವಿಡಿಯೋ ನೋಡಿ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ದೀವ್ ನಲ್ಲಿಯ ನಾಗವಾ ಬೀಚ್ ನಲ್ಲಿಯದಿದೆ. ಅಲ್ಲೇ ಗುಜರಾತಿನ ಜುನಾಗಡ ದಲ್ಲಿಯ ಒಂದು ಕಪಲ್ಸ್ ರವಿವಾರ ಮುಂಜಾನೆ ಪ್ಯಾರಾಸೀಲಿಂಗ್ ಮಾಡುವ ಸಲುವಾಗಿ ಬಂದಿದ್ದರು. ಇಲ್ಲಿ ಬಂದು ಬೋಟಿನ ಸಹಾಯದಿಂದ ಪ್ಯಾರಾಸೀಲಿಂಗ್ ಮಾಡುವ ನಿರ್ಣಯ ತೆಗೆದುಕೊಳ್ಳುತ್ತಾರೆ. ಆದರೆ ದುರದೃಷ್ಟವಶಾತ್ ಪ್ಯಾರಾಸೀಲಿಂಗ್ ಮಾಡುವಾಗ ನಡೆದ ಈ ಘಟನೆ ಅವರು ಜೀವನದಲ್ಲಿ ಎಂದಿಗೂ ಮರೆಯಲಾರರು. ಆ ಜೋಡಿಯ ಹೆಸರು ಅಜಿತ್ ಕಾಥಡ್ ಮತ್ತು ಸರಳಾ ಕಾಥಡ್ ಇದೆ. ಅಜಿತ್ ಅವರ ಸಹೋದರ ಈ ಎಲ್ಲ ದೃಶ್ಯದ ವಿಡಿಯೋ ಮಾಡಿಕೊಂಡಿದ್ದಾರೆ. ಮುಂದೆ ಈ ಇಬ್ಬರೂ ಸುದೈವದಿಂದ ನೀರಿನಲ್ಲಿಯೇ ಬಿದ್ದ ಕಾರಣಕ್ಕಾಗಿ ಯಾವುದೇ ರೀತಿಯ ಜೀವಿತ ಹಾನಿ ಆಗಿಲ್ಲ.