ನಮ್ಮ RCB ಗೆ ವಿರಾಟ್ ನಾಯಕತ್ವ ಬಿಟ್ಟ ನಂತರ ಮತ್ತೊಂದು ಆ#ಘಾತ! ಈ ಸ್ಟಾರ್ ಬ್ಯಾಟ್ಸ್ ಮನ್….

ದಕ್ಷಿಣ ಆಫ್ರಿಕಾದ ಬಿರುಸಿನ ಹೊಡೆತದ ಕ್ರಿಕೆಟ್ ಆಟಗಾರ AB ಎಂದೇ ಪ್ರಸಿದ್ಧರಾದ ಎಬಿ ಡಿವಿಲಿಯರ್ಸ್ ಇಂದು ಕ್ರಿಕೆಟ್ ನಿಂದ ರಿಟಾಯರ್ ಮೇಂಟ್ ಘೋಷಿಸಿ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಶೆ ಮಾಡಿದರು.

ಸೋಶಿಯಲ್ ಮೀಡಿಯಾ ಮೂಲಕ ತಾವು ಎಲ್ಲ ಪ್ರಕಾರದ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದೇನೆ ಎಂದು ತಿಳಿಸಿದ್ದಾರೆ. ಕ್ರಿಕೆಟ್ ಲೋಕದಲ್ಲಿ Mr. 360 ಡಿಗ್ರಿ ಎಂದೇ ಕ್ರಿಕೆಟ್ ನಲ್ಲಿ ಚಿರಪರಿಚಿತರಾಗಿದ್ದಾರೆ.

ಎಬಿ ಅವರು ತೆಗೆದುಕೊಂಡ ನಿವೃತ್ತಿಯ ಘೋಷಣೆಯ ಹಾನಿ ನಮ್ಮ ತಂಡ RCB ಗೆ ಜಾಸ್ತಿ ಆಗಲಿದೆ. ಕಾರಣ ಇತ್ತೀಚೆಗೆ ವಿರಾಟ್ ಅವರು ಸಹ ತಂಡದ ನಾಯಕತ್ವವನ್ನು ತ್ಯಜಿಸಿದ್ದಾರೆ. ಈಗ ಆರ್ಸಿಬಿ ತಂಡದ ಅಗ್ರ ಬ್ಯಾಟ್ಸ್ ಮನ್ ಎಬಿ ಅವರೂ ಸಹ ನಿವೃತ್ತಿ ಘೋಷಿಸಿದ್ದರಿಂದ ತಂಡದ ಶಕ್ತಿ ಕಡಿಮೆ ಯಾಗುವದರಲ್ಲಿ ಯಾವುದೇ ಡೌಟ್ ಇಲ್ಲವೇ ಇಲ್ಲ.

ತಮ್ಮ ಸಂದೇಶದಲ್ಲಿ ಇಲ್ಲಿಯ ವರೆಗಿನ ತಮ್ಮ ಕ್ರಿಕೆಟ್ ಪ್ರವಾಸಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ನನ್ನ ದೇಶ ದಕ್ಷಿಣ ಆಫ್ರಿಕಾ ಕಡೆಯಿಂದ ಇರಲಿ ಅಥವಾ ಟಾಯ್ಟನ್ ಸಲುವಾಗಿ ಇರಲಿ ಅಥವಾ RCB ಕಡೆಯಿಂದ ಇರಲಿ ಕ್ರಿಕೆಟ್ ನನಗೆ ತುಂಬಾ ಮಮತೆಯಿಂದ ಸಮೀಪ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ. ನಾನು ಕ್ರಿಕೆಟ್ ಸಂಬಂಧಿಸಿದ ಎಲ್ಲರ ಋಣಿಯಾಗಿದ್ದೇನೆ ಎಂದು ಕೊನೆಗೆ ಹೇಳುವುದು ಮರೆತಿಲ್ಲ.