ವಧು-ವರನಿಗೆ ಫ್ಯಾನ್ಸಿ ಜೋಕಾಲಿ ಮುಖಾಂತರ ಮಾಡಿಕೊಳ್ಳುವದಿತ್ತು ಗ್ರ್ಯಾಂಡ್ ಎಂಟ್ರಿ; ಆದರೆ ನಡೆದದ್ದೇ ಬೇರೆ! ನೋಡಿ ಈ ಫನ್ನಿ ವಿಡಿಯೋ…..
ಮದುವೆಯೆಂದರೆ ಜೀವನದಲ್ಲಿಯ ಮಹತ್ವದ ಕ್ಷಣ. ತಮ್ಮ ಮದುವೆಯ ಸಮಾರಂಭದಲ್ಲಿ ಏನಾದರೂ ಒಂದು ವಿಶೇಷ ಇರಲೇಬೇಕೆಂದು ಪ್ರತಿಯೊಂದು ಜೋಡಿಯು ಆಶಿಸುತ್ತದೆ. ತಮ್ಮ ಮದುವೆಯ ಸಮಾರಂಭವನ್ನು ಸ್ಪೆಷಲ್ ಮಾಡುವ ಸಲುವಾಗಿ ವಧು-ವರರು ಏನಾದರೊಂದು ಪ್ರಯತ್ನ ಮಾಡಿರುತ್ತಾರೆ.
ಮದುವೆಯ ಸಮಾರಂಭ ಸದಾ ನೆನಪಿನಲ್ಲಿ ಇರಬೇಕೆಂದು ಕಪಲ್ಸ್ ಗಳು ಮೊದಲೇ ಕೆಲವೊಂದು ಯೋಜನೆಗಳನ್ನು ಹಾಕಿ ಕೊಂಡಿರುತ್ತಾರೆ. ಈ ಯೋಜನೆಗಳು ಕೆಲವೊಂದು ಸಲ ಅಯಶಸ್ವಿಯಾಗಿ ತುಂಬಾ ತಮಾಷೆಯ ಘಟನೆಗಳು ನೋಡಲು ಸಿಗುತ್ತವೆ. ನಂತರ ಅವುಗಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿಬಿಡುತ್ತದೆ. ನೆಟ್ಟಿಗರು ಇವುಗಳನ್ನು ನೋಡಿ ಹೊಟ್ಟೆ ಹುಣ್ಣಾಗುವಂತೆ ನಗುವುದು ಉಂಟು.
ಇದೇ ರೀತಿಯ ಮದುವೆ ಸಮಾರಂಭದಲ್ಲಿಯ ತಮಾಷೆಯ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋ ನೋಡಿದ ನಂತರ ನಗೂ ತಡೆಯುವುದು ಅಸಾಧ್ಯ. ಈ ವಿಡಿಯೋದಲ್ಲಿ ವಧು ಮತ್ತು ವರ ಒಂದು ಫ್ಯಾನ್ಸಿ ಜೋಕಾಲಿಯಲ್ಲಿ ಕುಳಿತಿದ್ದಾರೆ. ಇಬ್ಬರು ಮೇಲಿಂದ ಸಮಾರಂಭದಲ್ಲಿ ಕುಳಿತ ಅತಿಥಿಗಳಿಗೆ ವಿಕ್ಷಿಸುತ್ತಿದ್ದಾರೆ. ಅವರ ಸ್ಟೈಲ್ ನೋಡುವಾಗ ಹೇಗನಿಸುತ್ತದೆ ಎಂದರೇ ಅವರ ಎಂಟ್ರಿ ತುಂಬಾ ಸ್ಪೆಷಲ್ ಆಗಿದೆ ಎಂದು. ಮದುವೆಗೆ ಬಂದ ಅತಿಥಿಗಳು ಕೊನೆವರೆಗೂ ನೆನಪಿನಲ್ಲಿಡಬೇಕು ಆ ರೀತಿಯ ಫ್ಯಾನ್ಸಿ ಜೋಕಾಲಿಯ ವ್ಯವಸ್ಥೆಯನ್ನು ಮಾಡಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ಅವರ ಪ್ಲಾನ್ ಉಲ್ಟಾ ಹೊಡೆದಿದೆ. ಅದನ್ನು ನೋಡಿದಾಗ ಕ್ಷಣದಲ್ಲಿಯೇ ನಿಮಗೂ ನಗು ತಡೆಯಲು ಸಾಧ್ಯವಾಗುವುದಿಲ್ಲ.
ಇಬ್ಬರು ಫ್ಯಾನ್ಸಿ ಜೋಕಾಲಿಯಲ್ಲಿ ಕುಳಿತಿರುವಾಗ ಒಮ್ಮೆಲೆ ಆಕಸ್ಮಿಕವಾಗಿ ಇಬ್ಬರು ಬ್ಯಾಲನ್ಸ್ ಕಳೆದುಕೊಳ್ಳುತ್ತಾರೆ. ಸ್ವಿಂಗ್ ತೆಗೆದುಕೊಳ್ಳುತ್ತಿರುವ ಜೋಕಾಲಿ ಮುಂದಿನ ಬದಿಯಲ್ಲಿ ವಾಲಿ ವಧು ಮತ್ತು ವರ ಇಬ್ಬರು ದಪ್ಪನೆ ಕೆಳಗೆ ಟೇಬಲ್ ಮೇಲೆ ಬೀಳುತ್ತಾರೆ. ಪ್ರಸ್ತುತ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಲೇ ಅನೇಕರು ತಮ್ಮ ಪ್ರತಿಕ್ರಿಯೆಗಳನ್ನು ನೀಡಲು ಶುರು ಮಾಡಿದರು.
ವಿಡಿಯೋ ನೋಡಿ
ಈ ವಿಡಿಯೋ ನೋಡಿದ ಯೂಸರ್ ನೊಬ್ಬ ಪ್ರೀತಿಯಲ್ಲಿ ಬೀಳುವುದು ಅಂದರೆ ಇದೇ ಎಂದು ಹೇಳಿದ್ದಾನೆ. ಸ್ಟೈಲ್ ನಿಂದಾಗಿ ಅತಿಥಿಗಳ ಮುಂದೆ ಪಾಪ ವಧು-ವರರ ಅವಮಾನವಾಯಿತು ಎಂದು ಇನ್ನೊಬ್ಬ ಯೂಸರ್ ಹೇಳಿದ್ದಾನೆ. ಅವಸರದಲ್ಲಿ ಅನೇಕ ಸಲ ಈ ರೀತಿಯ ಘಟನೆಗಳು ನೋಡಲು ಸಿಗುತ್ತವೆ ಎಂದು ಇನ್ನೊಬ್ಬ ಯೂಜರ ತನ್ನ ಪ್ರತಿಕ್ರಿಯೆ ನೀಡಿದ್ದಾನೆ. ಈ ತಮಾಷೆಯ ವಿಡಿಯೋವನ್ನು brides_special ಹೆಸರಿನ ಅಕೌಂಟ್ ನಿಂದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋಗೆ ಇಲ್ಲಿಯವರೆಗೆ ಸಾವಿರಾರು ಕಾಮೆಂಟ್ಗಳು ಮತ್ತು ಲೈಕ್ಸ್ ಗಳು ಬಂದಿವೆ.