63 ವರ್ಷದ ಮಹಿಳೆಯೊಬ್ಬಳು ತನ್ನ ಸಂಪತ್ತನ್ನು ನೀಡಿದಳು ಆಟೋ ಡ್ರೈವರ್ ಗೆ! ಕಾರಣವೇನು ನೋಡಿ, ಓದಿ ಹೆಮ್ಮೆ ಪಡುವಿರಿ.
ಒಡಿಶಾದಲ್ಲಿಯ 63 ವರ್ಷದ ಮಹಿಳೆಯೊಬ್ಬಳು ತನ್ನ ಒಂದು ಕೋಟಿ ರೂಪಾಯಿ ಆಸ್ತಿಯನ್ನು ಒಬ್ಬ ಆಟೋ ಚಾಲಕನಿಗೆ ದಾನವಾಗಿ ನೀಡಿದ್ದಾಳೆ. ಆ ಮಹಿಳೆಯ ಹೆಸರು ಮಿನಾತಿ ಪಟ್ನಾಯಕ್ ಇದೆ. ಟೈಮ್ಸ್ ಆಫ್ ಇಂಡಿಯಾ ನೀಡಿದ ವರದಿಯ ಪ್ರಕಾರ, ಮಹಿಳೆಯು ತನ್ನ ಮೂರು ಮಹಡಿಯ ಮನೆ, ಬಂಗಾರದ ಒಡವೆಗಳನ್ನು ಮತ್ತು ಇನ್ನಿತರ ಸಂಪತ್ತನ್ನು ಆಟೋ ಡ್ರೈವರ್ ಆದ ಬುಧಾ ಸಮಲ್ (50) ಗೆ ನೀಡಿದ್ದಾರೆ.
ಅವರ ನೀಡಿದ ಒಟ್ಟು ಸಂಪತ್ತಿನ ಮೌಲ್ಯ ಸುಮಾರು 1 ಕೋಟಿ ರೂಪಾಯಿಗಳಷ್ಟು ಇದೆ ಎಂದು ಹೇಳಲಾಗಿದೆ. ಮೀನಾತಿ ಪಟ್ನಾಯಕ್ ಅವರು ತೆಗೆದುಕೊಂಡ ಈ ನಿರ್ಣಯವನ್ನು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ.
ತಮ್ಮ ಸಂಪತ್ತನ್ನು ದಾನ ಮಾಡಿದ ನಂತರ ANI ಜೊತೆ ಮಾತನಾಡುವಾಗ ಮೀನಾತಿಯವರು, ನನ್ನ ಪತಿ ಹಾಗೂ ಮಗನ ಮೃತ್ಯುವಿನ ನಂತರ ಬುಧಾ ಸಮಲ್ ಹಾಗೂ ಆತನ ಕುಟುಂಬ ನನ್ನ ನಿಸ್ವಾರ್ಥ ಸೇವೆಯನ್ನು ಮಾಡುತ್ತಾ ಕಾಳಜಿ ತೆಗೆದುಕೊಂಡಿದ್ದಾರೆ. ಆದ್ದರಿಂದ ನನ್ನೆಲ್ಲಾ ಸಂಪತ್ತನ್ನು ಅವರ ಹೆಸರಿಗೆ ಬರೆದು ಕೊಟ್ಟಿದ್ದೇನೆ ಎಂದು ಹೇಳುತ್ತಾರೆ.
ಬುಧಾ ಸಮಲ್ ಯಾವತ್ತೂ ನನ್ನ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ. ಆತ 50 ವರ್ಷದವನಾಗಿದ್ದರೂ ಆತನ ಹೆಂಡತಿ ನನಗೆ ಅಮ್ಮನೆಂದೇ ಕರೆಯುತ್ತಾಳೆ. ಅಷ್ಟೇ ಅಲ್ಲ ಅವರ ಮಕ್ಕಳು ನನ್ನನ್ನು ಅಜ್ಜಿ ಅಂತಲೇ ಕರೆಯುತ್ತಾರೆ. ಅವರ ಸರಳತೆ ಮತ್ತು ಪ್ರಾಮಾಣಿಕತನ ಈ ಸಂಪತ್ತಿನ ಮುಂದೆ ಏನೂ ಅಲ್ಲ ಎಂದು ಮಿನಾತಿ ಅವರು ಹೇಳುತ್ತಾರೆ.
ನನಗೆ ನಿಜವಾಗಿಯೂ ಈ ಸಂಪತ್ತು ಬೇಡವಾಗಿತ್ತು ನಾನು ತಾಯಿಯ (ಮಿನಾತಿ) ನಿರ್ಣಯವನ್ನು ಗೌರವಿಸುತ್ತೇನೆ. ನಾನು ಅವರ ಜೊತೆಗೆ ಇರಬೇಕೆಂದು ಅವರು ಆಗ್ರಹಿಸುತ್ತಿದ್ದರು. ನಮ್ಮ ಕುಟುಂಬದವರೆಲ್ಲರಿಗೂ ಅಮ್ಮ ತುಂಬಾ ಪ್ರೀತಿ ಮಾಡುತ್ತಾರೆ ಎಂದು ಬುಧಾ ಸಮಲ್ ಹೇಳುತ್ತಾರೆ.
Odisha: A 63-year-old widow has donated all her properties worth about Rs 1 crore to a rickshaw puller in Cuttack
— ANI (@ANI) November 14, 2021
"After my husband & daughter died in quick succession, Budha Samal & his family have been taking care of me so I'm giving him my properties," Minati Patnaik says pic.twitter.com/9djGEnn8jn
ಮಿನಾತಿ ಅವರು ಹೇಳುವ ಪ್ರಕಾರ ಬುಧಾ ಅವರು ನನ್ನ ಮಗಳಿಗೆ ಶಾಲೆಗೆ ಒಯ್ದು ಬಿಡುತ್ತಿದ್ದರು. ನಮಗೆ ಎಲ್ಲಿ ಬೇಕಾದರೂ ಹೋಗಬೇಕಾದರೆ ನಾವು ಅವರ ಆಟೋವನ್ನೇ ಹೇಳುತ್ತಿದ್ದೇವು. ಮುಂದೆ ನನ್ನ ಪತಿ ಹಾಗೂ ಮಗನ ಮೃತ್ಯುವಿನ ನಂತರ ನಾನು ಸಂಪೂರ್ಣವಾಗಿ ಅವರ ಕುಟುಂಬದ ಮೇಲೆ ಅವಲಂಬಿತಳಾದೇನು. ಬುಧಾ ಮತ್ತು ಆತನ ಕುಟುಂಬವು ಅನೇಕ ಕಠಿಣ ಪ್ರಸಂಗಗಳಲ್ಲಿ ನನಗೆ ಆಧಾರವಾಗಿ ನಿಂತರು. ನಾನು ಈ ನಿರ್ಣಯವನ್ನು ತೆಗೆದುಕೊಂಡಾಗ ನನ್ನ ಸಹೋದರರು ಸ್ವಲ್ಪ ಅಸಮಾಧಾನವನ್ನು ತೋರಿದರು. ಆದರೆ ಅವರು ನನಗೆ ವಿರೋಧ ಮಾತ್ರ ಮಾಡಲಿಲ್ಲ.