4.7 ಮಿಲಿಯನ್ ಜನ ನೋಡಿದ 1929 ರಲ್ಲಿಯ 1046 ಅಡಿ ಎತ್ತರದ ನ್ಯೂಯಾರ್ಕ್‌ನ ಕ್ರಿಸ್ಲರ್ ಕಟ್ಟಡದ ವೈರಲ್ ವಿಡಿಯೋ..

ಸೋಶಿಯಲ್ ಮೀಡಿಯಾದಲ್ಲಿ ಒಮ್ಮೆಲೆ ಕೆಲವೊಂದು ಅಪರೂಪದ ಫೋಟೋ ಅಥವಾ ವಿಡಿಯೋಗಳು ವಿಶೇಷ ಕಾರಣದಿಂದಾಗಿ ವೈರಲ್ ಆಗುತ್ತಿರುತ್ತವೆ. ಅದರಲ್ಲೂ ನಾವು ನೋಡದ ಅನೇಕ ಹಳೆಯ ಮತ್ತು ಅಷ್ಟೇ ವಿಶೇಷವಾದ ವಿಡಿಯೋಗಳು ನಮ್ಮ ಮನಕ್ಕೆ ಅದ್ಭುತ ಖುಷಿಯನ್ನು ನೀಡುತ್ತವೆ.

ಸದ್ಯ ಇದೇ ರೀತಿಯ ತುಂಬಾ ಹಳೆಯದಾದ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋ 1929 ರಲ್ಲಿ ಶೂಟ್ ಮಾಡಲಾಗಿದೆ. ಇದನ್ನು ಸುಮಾರು 1046 ಅಡಿ ಎತ್ತರದ ಕಟ್ಟಡವನ್ನು ತಯಾರಿಸುವಾಗಿನ ದೃಶ್ಯವಿದೆ.

ವಿಡಿಯೋ ನೋಡಿ

1,046 ಅಡಿ ಎತ್ತರದಲ್ಲಿ ಇದು ಉಕ್ಕಿನ ಚೌಕಟ್ಟನ್ನು ಹೊಂದಿರುವ ವಿಶ್ವದ ಅತಿ ಎತ್ತರದ ಇಟ್ಟಿಗೆಯ ಕಟ್ಟಡವಾಗಿತ್ತು, ಮತ್ತು 1930 ರಲ್ಲಿ ಪೂರ್ಣಗೊಂಡ ನಂತರ ಎಷ್ಟೋ ತಿಂಗಳುಗಳ ವರೆಗೆ ವಿಶ್ವದ ಅತಿ ಎತ್ತರವಾದ ಕಟ್ಟಡವಾಗಿತ್ತು. ಈ ವಿಡಿಯೋವನ್ನು ಟ್ವಿಟರ್ ನಲ್ಲಿ @ValaAfshar ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 4.7 ಮಿಲಿಯನ್ ಜನ ನೋಡಿದ್ದಾರೆ.