ಜಗತ್ತಿನ ಎಲ್ಲಕ್ಕೂ ದುಬಾರಿ ವೈನ್ ಬ್ರ್ಯಾಂಡ್ ಯಾವುದು? ಗೊತ್ತಾ? ಬೆಲೆ ಕೇಳಿದರೆ ತಲೆ ಗಿರ್ರ ಅನ್ನುತ್ತೆ! ಓದಿ ಒಮ್ಮೆ ಗೊತ್ತಾಗುತ್ತೆ….

ಮಧ್ಯಪಾನ ಆರೋಗ್ಯಕ್ಕೆ ಹಾನಿಕರವಾಗಿದ್ದರೂ ಇಂದಿನ ಯುಗದಲ್ಲಿ ಮಧ್ಯಪಾನವಿದು ಒಂದು ಸ್ಟೇಟಸ್ ಸಿಂಬಲ್ ಆಗಿಬಿಟ್ಟಿದೆ. ಅನೇಕ ದೊಡ್ಡ ದೊಡ್ಡ ಶ್ರೀಮಂತರು, ದಿಗ್ಗಜರು ತಮ್ಮ ಮನೆಯಲ್ಲಿ ಅತಿಥಿಗಳಿಗೆ ತುಂಬಾ ದುಬಾರಿಯಾದ ಮದ್ಯವನ್ನು ಸರ್ವ್ ಮಾಡುತ್ತಾರೆ.

ಇಂದಿನ ಈ ಲೇಖನದಲ್ಲಿ ಜಗತ್ತಿನ 5 ಎಲ್ಲಕ್ಕೂ ದುಬಾರಿ ಮಧ್ಯದ ಬ್ರಾಂಡ್ ಗಳ ಬಗ್ಗೆ ಹೇಳಲಿದ್ದೇವೆ. ಅವುಗಳ ಬೆಲೆ ಕೇಳಿದರೇನೇ ತಲೆಸುತ್ತಿ ಬರುತ್ತೆ.

1) ಟಕಿಲಾ ಲೇ. 925:-ಈ ಲಿಸ್ಟ್ ನಲ್ಲಿ ‘ಟಕಿಲಾ ಲೇ 925’ ಬ್ರಾಂಡಿನ ಹೆಸರು ಪ್ರಪ್ರಥಮವಾಗಿ ಬರುತ್ತದೆ. ಈ ಮಧ್ಯದ ಬಾಟಲಿಯಲ್ಲಿ 6400 ವಜ್ರಗಳನ್ನು ಜಡಿದಿದ್ದಾರೆ. ಈ ವೈನನ್ನು ಮೆಕ್ಸಿಕೋದಲ್ಲಿ ಲಾಂಚ್ ಮಾಡಲಾಗಿದೆ. ವಿಷಾದದ ಸಂಗತಿಯೆಂದರೆ ಇಲ್ಲಿಯವರೆಗೆ ಈ ಮಧ್ಯದ ಬಾಟಲಿಯನ್ನು ಯಾರು ಖರೀದಿಸಿಲ್ಲ.

2) ದಿವಾ ಓಡಕಾ :- ಈ ವೈನ್ ಬ್ರಾಂಡ್ ಎರಡನೇ ಕ್ರಮಾಂಕದಲ್ಲಿ ಬರುತ್ತದೆ. ಪ್ರತಿಯೊಂದು ಬಾಟಲಿಯ ಮಧ್ಯಭಾಗದಲ್ಲಿ ಒಂದು ಬೇರೆ ಪ್ರಕಾರದ ಅಚ್ಚು ಇದೆ. ಅದರಲ್ಲಿ ಸ್ವಾರೋವಸ್ಕಿ ಕ್ರಿಸ್ಟಲ್ಸ್ ಉಪಯೋಗಿಸಲಾಗಿದೆ. ಈ ವಿಸ್ಕಿ ಬಾಟಲಿಯ ಬೆಲೆ 7 ಕೋಟಿ 30 ಲಕ್ಷ ರೂಪಾಯಿಗಳಷ್ಟು ಇದೆ.

3) ಅಮಾಂಡ್ ಡಿ ಬ್ರಿಗ್ನಾಕ್ ಮೇಡಾಸ್ :- Amanda De Brignac Midas) ಹೆಸರಿನ ಈ ಶಾಂಪೇನ್ ಜಗತ್ತಿನಲ್ಲಿ ಎಲ್ಲಕ್ಕೂ ದುಬಾರಿಯಾದ ಶಾಂಪೆನ್ ಆಗಿದೆ. ಇದರ ಬೆಲೆ 1 ಕೋಟಿ 40 ಲಕ್ಷ ರೂಪಾಯಿಗಳಷ್ಟು ಇದೆ.

4) ಡಾಲಮೋರ್ 62 :– ಇದು ಜಗತ್ತಿನ ಎಲ್ಲಕ್ಕೂ ದುಬಾರಿಯಾದ ವಿಸ್ಕಿ ಆಗಿದೆ. ಇದು ಎಷ್ಟೊಂದು ದುಬಾರಿಯಾಗಿದೆ ಅಂದರೆ ಇಲ್ಲಿಯವರೆಗೆ ಒಟ್ಟು ಬರೀ 12 ಬಾಟಲಿಗಳನ್ನು ಮಾತ್ರ ತಯಾರಿಸಲಾಗಿದೆ ಅಂತೆ. ಈ ಒಂದು ವಿಸ್ಕಿ ಬಾಟಲ್ ಬೆಲೆ ಒಂದು ಕೋಟಿ 50 ಲಕ್ಷ ರೂಪಾಯಿಗಳಷ್ಟು ಇದೆ.

5) ಪೇನ್ ಫೋಲ್ಡ್ಸ್ ಎಂಪುಲ್ – Penfolds Ampoule ಇದು ಜಗತ್ತಿನ ಅತ್ಯಂತ ದುಬಾರಿಯಾದ ರೆಡ್ ವೈನ್ ಆಗಿದೆ. ಪೇನಿನಂತಹ ಆಕಾರದ ಬಾಟಲಿಯಲ್ಲಿ ಬರುವ ಈ ವೈನ್ ನ ಬೆಲೆ ಸುಮಾರು 1 ಕೋಟಿ 20 ಲಕ್ಷ ರೂಪಾಯಿಗಳಷ್ಟಿದೆ.