ತನ್ನ ಬಾಲಿಗೆ ಸಿಕ್ಸ್ ಬಾರಿಸಿದ್ದಕ್ಕೆ ಸಿಟ್ಟಾಗಿ ಶಾಹೀನ್ ಆಫ್ರಿದಿ, ಬ್ಯಾಟ್ಸ್ಮನ್ ಗೆ ಬಾಲ್ ನಿಂದ ಜೋರಾಗಿ ಹೊಡೆದು ಮಾಡಿದರು ಗಾಯ! ನೋಡಿ ಈ ವಿಡಿಯೋ…
ಸದ್ಯ ಪಾಕಿಸ್ತಾನ ತಂಡವು ಬಾಂಗ್ಲಾದೇಶದಲ್ಲಿ ಟಿ-20 ಸರಣಿ ಆಡಲು ಹೋಗಿದೆ. ಎರಡನೇ t20 ಪಂದ್ಯವನ್ನು ಪಾಕಿಸ್ತಾನ ಎಂಟು ವಿಕೆಟ್ ಗಳಿಂದ ಗೆದ್ದಿತು. ಆದರೆ ಈ ಪಂದ್ಯದಲ್ಲಿ ಶಾಹೀನ್ ಆಫ್ರಿದಿಯವರಿಂದ ನಾಚಿಕೆಗೇಡಿನ ಘಟನೆಯೊಂದು ನಡೆಯಿತು. ಇದೇ ಘಟನೆಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಪಂದ್ಯದಲ್ಲಿ ಪಾಕಿಸ್ತಾನದ ಸ್ಟಾರ್ ಬೌಲರ್ ಶಾಹೀನ್ ಆಫ್ರಿದಿ ನಡೆದುಕೊಂಡ ರೀತಿ ನೆಟ್ಟಿಗರಿಗೆ ರೋಷ ತಂದಿದೆ.
ಬಾಂಗ್ಲಾದೇಶದ ಬ್ಯಾಟ್ಸ್ಮನ್ ಆಫೀಫ್ ಹುಸೇನ್ ಅವರು ಶಾಹೀನ್ ಆಫ್ರಿದಿ ಅವರ ಬೌಲಿಂಗ್ ಮೇಲೆ ಭರ್ಜರಿ ಸಿಕ್ಸ್ ಬಾರಿಸಿದರು. ಇದು ಅಫ್ರಿದಿಗೆ ಹಿಡಿಸಿಲ್ಲ. ಅದೇ ಸಿಟ್ಟಿನಲ್ಲಿ ನೆಕ್ಸ್ಟ್ ಬಾಲಿಗೆ ಶಾಹೀನ್ ಆಫ್ರಿದಿಯು ಆಫೀಫ್ ಹುಸೇನ್ ಕಡೆಗೆ ಔಟ್ ಮಾಡುವ ದೃಷ್ಟಿಯಿಂದ ಜೋರಾಗಿ ಬಾಲ್ ಎಸೆದಿದ್ದಾರೆ. ಆಗ ಬಾಲ್ ಕ್ರಿಸ್ ನಲ್ಲಿ ಆಫೀಫ್ ಹುಸೇನ್ ಕಾಲಿಗೆ ಜೋರಾಗಿ ಬಡಿದದ್ದರಿಂದ ಅವರು ಅಲ್ಲಿಯೇ ಕುಸಿದರು. ಆಗ ತಕ್ಷಣ ಪಾಕಿಸ್ತಾನದ ನಾಯಕ ಬಾಬರ್ ಆಜಮ್ ಬಂದು ಅವರನ್ನು ಎಬ್ಬಿಸುವ ಪ್ರಯತ್ನ ಮಾಡಿದರು. ಅದೇ ಸಮಯಕ್ಕೆ ಅಫ್ರಿದಿ ಸಹ ಅವರ ಹತ್ತಿರ ಹೋಗಿ ಸಾಂತ್ವನ ಹೇಳಲು ಯತ್ನಿಸಿದರು.
ವಿಡಿಯೋ ನೋಡಿ
Gets hit for a 6 and Shaheen Shah loses his control next ball! #PAKvsBAN #ShaheenAfridi pic.twitter.com/phpRLBFRMm
— Amanpreet Singh (@AmanPreet0207) November 20, 2021
ಅಫ್ರಿದಿ ಮಾಡಿದ ಈ ಹೇಯ ಕೃತ್ಯದಿಂದಾಗಿ ಕ್ರಿಕೆಟ್ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಬಾಲರ್ ಶಹೀನ್ ಆಫ್ರಿದಿ ಗೆ ಟ್ರೋಲ್ ಮಾಡಲು ಶುರು ಮಾಡಿದರು. ಕೆಲವರಂತೂ ಅಫ್ರಿದಿಗೆ ಬ್ಯಾನ್ ಮಾಡಬೇಕೆಂದು ಕೇಳಿಕೊಂಡಿದ್ದಾರೆ.