ಅಯ್ಯೋ! ಇಲ್ಲಿ ಯಾವುದು ಸುರಕ್ಷಿತವಿಲ್ಲಪ್ಪ…! ಮಧ್ಯರಾತ್ರಿ ಕಾರಿನಲ್ಲಿ ಬಂದ ಆಂಟಿ ಕಳ್ಳತನ ಮಾಡಿದ್ದೇನು ಗೊತ್ತಾ? ನೋಡಿ ವೈರಲ್ ವಿಡಿಯೋ!

ಕಳ್ಳತನ ಮಾಡುವ ಜನರು ಇನ್ನೂ ಯಾವ ಯಾವ ವಸ್ತುಗಳನ್ನು ಕಳ್ಳತನ ಮಾಡುತ್ತಾರೋ ಹೇಳಲಿಕ್ಕೆ ಸಾಧ್ಯವಿಲ್ಲ. ಮನೆಯ ಮುಂದೆ ಕಳಚಿಟ್ಟ ಚಪ್ಪಲಿಗಳು ಸಹ ಇಂದು ಸುರಕ್ಷಿತವಾಗಿಲ್ಲ. ಇಂದಿನ ಈ ಲೇಖನದಲ್ಲಿ ಭರ್ಜರಿ ಕಳ್ಳತನದ ವಿಡಿಯೋ ಒಂದು ತೋರಿಸುವವರಿದ್ದೇವೆ. ನೋಡಿ ಈ ವೈರಲ್ ವಿಡಿಯೋ.

ಇಲ್ಲಿ ಯಾವುದೇ ರೀತಿಯ ಖಜಾನೆ ಅಥವಾ ಮಂದಿರದಲ್ಲಿಯ ಚಪ್ಪಲಿಗಳನ್ನು ಅಥವಾ ಕಾಣಿಕೆಯನ್ನು ಹಾಕುವ ಪೆಟ್ಟಿಗೆಯನ್ನು ಕಳ್ಳತನ ಮಾಡಿಲ್ಲ. ಆದರೂ ಈ ಕಳ್ಳತನವು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗಿದೆ. ಇದೊಂದು ಅಪರೂಪದ ಕಳ್ಳತನದ ವಿಡಿಯೋ ಆಗಿದೆ.

ತಡರಾತ್ರಿ ಒಂದು ಕಾರು ರಸ್ತೆಯ ಬದಿಗೆ ಬರುತ್ತದೆ. ಕಾರಿನಿಂದ ಕಪ್ಪು ಬಣ್ಣದ ಉಡುಗೆಯನ್ನು ತೊಟ್ಟ ಮಹಿಳೆಯೊಬ್ಬಳು ಕೆಳಗಿಳಿದು ಬಂದು ಸಾಯಂಕಾಲದ ವಾಕಿಂಗ್ ಮಾಡುವಹಾಗೆ ಅತ್ತಿಂದಿತ್ತ ಇತ್ತಿಂದತ್ತ ತಿರುಗಾಡುತ್ತಾಳೆ. ಸ್ವಲ್ಪವೇ ಕ್ಷಣದಲ್ಲಿ ಆ ಮಹಿಳೆಯ ಜೊತೆಗೆ ಗುಲಾಬಿ ಬಣ್ಣದ ಡ್ರೆಸ್ ಹಾಕಿಕೊಂಡು ಇನ್ನೊಬ್ಬಳು ಬರುತ್ತಾಳೆ. ಕಪ್ಪು ಬಣ್ಣದ ಡ್ರೆಸ್ ತೊಟ್ಟ ಮಹಿಳೆ ಫುಟ್ಪಾತ್ ಮೇಲೆ ಇಟ್ಟ ಸಸಿಗಳಿಂದ ಒಂದು ಸಸಿಯನ್ನು ತುಡುಗು ಮಾಡಿ ತಮ್ಮ ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಾಳೆ. ಪ್ರಸ್ತುತ ಘಟನೆಯ ಎಲ್ಲ ದೃಶ್ಯವು ರಸ್ತೆಯಲ್ಲಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ನೋಡಿದಾಗ ನಿಮಗೂ ಸಹ ಆಶ್ಚರ್ಯವಾಗದೇ ಇರದು. ಯಾಕೆಂದರೆ ಜನರು ಇಲ್ಲಿ ಯಾವುದನ್ನು ಬಿಡುವುದಿಲ್ಲ ಎಂಬ ವಿಚಾರ ಬಂದೇ ಬರುತ್ತದೆ.

ವಿಡಿಯೋ ನೋಡಿ

memes.bks and schoolmemories.ig’ ಹೆಸರಿನ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡಿ ತಮ್ಮ ವಿವಿಧ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಈ ವಿಡಿಯೋವನ್ನು ನೋಡಿದ ನೆಟ್ಟಿಗನೊಬ್ಬ, ‘ಈ ಇಬ್ಬರೂ ಆಂಟಿಯರು ಕಾರಿನಲ್ಲಿ ಕೂಡಲು ಯೋಗ್ಯರಲ್ಲ’ ಎಂದಿದ್ದಾನೆ. ಇನ್ನೊಬ್ಬ ‘ಸರಕಾರಿ ಗಿಡಮರಗಳು ಸಹ ಸುರಕ್ಷಿತವಿಲ್ಲ’ ಎಂದು ಕಮೆಂಟ್ ಮಾಡಿದ್ದಾನೆ.