ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯ ನಂತರ ಪಾಕಿಸ್ತಾನದ ಆಟಗಾರರು ನೀಡಿದ ಪ್ರತಿಕ್ರಿಯೆ ಏನು? ನೋಡಿ ಈ ವಿಡಿಯೋದಲ್ಲಿ…..

ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ವಿಶ್ವ ಕಂಡ ಅಪರೂಪದ, ಅದ್ಭುತ ವ್ಯಕ್ತಿಯೆಂದರೆ ತಪ್ಪಾಗಲಾರದು. ಇವರು ಬರೀ ಭಾರತಕ್ಕೆ ಸೀಮಿತವಾಗಿಲ್ಲ. ಕ್ರಿಕೆಟ್ ಗೆ ಸಂಬಂಧಪಟ್ಟ ಪ್ರತಿಯೊಬ್ಬ ಮೇರು ಆಟಗಾರರು ಧೋನಿಯ ಬಗ್ಗೆ ವಿಶೇಷ ನುಡಿಗಳನ್ನು ಹೇಳುತ್ತಾರೆ.

ಇವರು ಭಾರತಕ್ಕೆ ಸಿಕ್ಕ ಅಮೂಲ್ಯ ರತ್ನ ಎಂದು ಹೇಳಬಹುದು. ಇವರ ನಾಯಕತ್ವದಲ್ಲಿ ಭಾರತವು ವಿಶ್ವದ ನಂಬರ್1 ತಂಡವಾಗಿ ಹೊರಹೊಮ್ಮಿದ್ದಲ್ಲದೆ ಐಸಿಸಿಯ ಅನೇಕ ಟ್ರೋಫಿಗಳನ್ನು ತನ್ನ ಮುಡಿಗೇರಿತು. ಇಂತಹ ಅದ್ಭುತ ಆಟಗಾರನನ್ನು ಪಡೆದ ಭಾರತ ನಿಜವಾಗಿಯೂ ಹೆಮ್ಮೆಯಿಂದ ಬೀಗಿತು.

ತಮ್ಮ ಶಾಂತ ಸ್ವಭಾವದಿಂದಾಗಿ ಕೂಲ್ ಕ್ಯಾಪ್ಟನ್ ಎಂದೇ ಹೆಸರು ಗಳಿಸಿದ ಮಹೇಂದ್ರ ಸಿಂಗ್ ಧೋನಿಯವರು ಕಳೆದ ವರ್ಷ ಆಗಸ್ಟ್ 15 ರಂದು ಕ್ರಿಕೆಟ್ ನಿಂದ ನಿವೃತ್ತಿ ಪಡೆದರು. ಇವರು ನಿವೃತ್ತರಾದ ನಂತರ ವಿಶ್ವದ ದೊಡ್ಡ ದೊಡ್ಡ ಕ್ರಿಕೆಟಿಗರು ಎಲ್ಲರೂ ಧೋನಿಯ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಮೀಡಿಯಾದ ಮುಂದೆ ಹೇಳಿದರು.

ಅದೇ ಪ್ರಕಾರ ಕ್ರಿಕೆಟ್ನಲ್ಲಿ ನಮ್ಮ ಬದ್ದ ಎದುರಾಳಿಯಾದ ಪಾಕಿಸ್ತಾನದ ಆಟಗಾರರು ಸಹ ಧೋನಿಯ ಬಗ್ಗೆ ತಮ್ಮ ಅನೇಕ ವಿಚಾರಗಳನ್ನು ಪ್ರತಿಕ್ರಿಯಿಸಿದ್ದಾರೆ. ಅವರಲ್ಲಿಯ ಕೆಲವು ಆಟಗಾರರು ಧೋನಿಯ ಬಗ್ಗೆ ನೀಡಿದ ಸ್ಟೇಟ್ಮೆಂಟ್ ಗಳನ್ನು ಈ ವಿಡಿಯೋದಲ್ಲಿ ನೀವು ನೋಡಬಹುದು.

ನೋಡಿ ಈ ವೀಡಿಯೋ…