24 ಕೋಟಿ ರೂಪಾಯಿಗಳ ಕೋಣ ನೋಡಿದ್ದೀರಾ? ಇದು ತಿನ್ನುವುದು ಬರೀ ಕಾಜು ಮತ್ತು ಬಾದಾಮ್! ತೂಕ ಇದೆ 1500 ಕೆಜಿ!
ಪುಷ್ಕರ್: ರಾಜಸ್ಥಾನದ ಪುಷ್ಕರನಲ್ಲಿ ನಡೆದ ಸಾಕುಪ್ರಾಣಿಗಳ ಪ್ರದರ್ಶನದಲ್ಲಿ ತುಂಬಾ ದುಬಾರಿ ಬೆಲೆಯ ಪ್ರಾಣಿಗಳು ಪಾಲ್ಗೊಂಡಿದ್ದವು. ಇದೇ ಪ್ರದರ್ಶನದಲ್ಲಿ ಒಂದು ಕೋಣವು ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಈ ಕೋಣವು ಬರೀ ದೇಹದಿಂದ ಅಷ್ಟೇ ದೊಡ್ಡದಾಗಿರಲಿಲ್ಲ ಅದರ ಬೆಲೆಯೂ ಸಹ ಸಾಕಷ್ಟು ದೊಡ್ಡದಾಗಿತ್ತು. ಭೀಮ್ ಹೆಸರಿನ ಕೋಣದ ಬೆಲೆ 24 ಕೋಟಿ ರೂಪಾಯಿಗಳಷ್ಟು. ಭೀಮ್ ಹೆಸರಿನ ಈ ಕೋಣ ಮೂರನೇ ಬಾರಿ ಈ ಪ್ರದರ್ಶನದಲ್ಲಿ ಪಾಲ್ಗೊಂಡಿತ್ತು. ಈ ಕೋಣಕ್ಕಾಗಿ 24 ಕೋಟಿ ರೂಪಾಯಿಗಳಿಗೆ ಬೇಡಿಕೆ ಇಟ್ಟರೂ ಸಹ ಅದರ ಮಾಲೀಕ ಅದನ್ನು ಮಾರಾಟ ಮಾಡಲು ಸ್ಪಷ್ಟವಾಗಿ ನಿರಾಕರಿಸಿದನು. ಇದು ನನಗೆ ಅಮೂಲ್ಯವಾಗಿದೆ ಮತ್ತು ಇದನ್ನು ಬರೀ ಪ್ರದರ್ಶನಕ್ಕಾಗಿ ಇಲ್ಲಿ ತಂದಿದ್ದೇನೆ ಮಾರಾಟ ಮಾಡಲಿಕ್ಕಾಗಿ ಅಲ್ಲ ಎಂದು ಮಾಲೀಕ ಹೇಳುತ್ತಾನೆ.
ಭೀಮ್ ಹೆಸರಿನ ಕೋಣದ ಮಾಲೀಕ ರಾಜಸ್ಥಾನದ ಜೋಧಪುರದ ನಿವಾಸಿ ಜವಾಹರ್ಲಾಲ್ ಜಾಂಗೀರ್ ಅವರು ಹೇಳುವ ಪ್ರಕಾರ, ಅಪಘಾನಿಸ್ತಾನದ ಕುಟುಂಬವೊಂದು ಈ ಕೋಣದ ಬೆಲೆ 24 ಕೋಟಿ ರೂಪಾಯಿ ಕಟ್ಟಿತ್ತು. ಆದರೆ ಮಾಲೀಕ ಮಾತ್ರ ಇದನ್ನು ಮಾರಾಟ ಮಾಡಲು ಸ್ಪಷ್ಟವಾಗಿ ನಿರಾಕರಿಸಿದ್ದಾನೆ. ಮುರ್ರಾ ತಳಿಯ ಈ ಪ್ರಜಾತಿಗಳನ್ನು ಸಂರಕ್ಷಿಸುವದು ಮತ್ತು ಬೆಳೆಸುವ ಸಲುವಾಗಿ ಭೀಮ್ ಇಡಲಾಗಿದೆ. ಅದರ ಜೊತೆಗೆ ಭೀಮನ ವೀರ್ಯ ದನಗಾಹಿಗಳಿಗೆ ನೀಡಿ ಈ ತಳಿಯನ್ನು ಹೆಚ್ಚಿಸುವ ಉದ್ದೇಶವಾಗಿದೆ ಎಂದು ಮಾಲೀಕ ಗರ್ವದಿಂದ ಹೇಳುತ್ತಾನೆ.
ಭೀಮನು ಅನೇಕ ಸ್ಪರ್ಧೆಗಳಲ್ಲಿ ಭಾಗ ತೆಗೆದುಕೊಂಡಿದ್ದಾನೆ.
ನಾನು 2018 ಮತ್ತು 2019 ರಲ್ಲಿ ಪುಷ್ಕರನ ಪ್ರಾಣಿಗಳ ಜಾತ್ರೆಯಲ್ಲಿ ಬಂದಿದ್ದೆ. ಇದರ ಹೊರತಾಗಿ ನಾಗೌರ್, ಬಲೋತ್ರಾ ಹಾಗೂ ಡೆಹ್ರಾಡೂನ್ ಹೀಗೆ ಅನೇಕ ಸ್ಥಳಗಳಲ್ಲಿ ಪ್ರಾಣಿಗಳ ಸ್ಪರ್ಧೆಯಲ್ಲಿ ಭೀಮನಿಗೆ ತೆಗೆದುಕೊಂಡು ಭಾಗವಹಿಸಿದ್ದೇನೆ. ಭೀಮನ ಉದ್ದ 14 ಅಡಿ ಇದ್ದು ಅಗಲ 6 ಅಡಿ ಇದೆ. ಇದರ ವ್ಯವಸ್ಥೆಗೆ ತಿಂಗಳಿಗೆ 1.5 ಯಿಂದ 2 ಲಕ್ಷ ರೂಪಾಯಿಗಳ ವರೆಗೆ ವೆಚ್ಚವಾಗುತ್ತದೆ.
ಭೀಮನ ಆಹಾರವೂ ಸಹ ಅಷ್ಟೇ ಆಶ್ಚರ್ಯಕರವಾಗಿದೆ. ಯಾಕೆಂದರೆ ಅದು ಸಾಮಾನ್ಯ ಎಮ್ಮೆ ಅಥವಾ ಕೋಣಗಳ ಹಾಗೆ ಆಹಾರ ತಿನ್ನುವುದಿಲ್ಲ. ಇದಕ್ಕೆ ದಿನವೊಂದಕ್ಕೆ 1 ಕೆಜಿ ತುಪ್ಪ, ಅರ್ಧ ಕಿಲೋ ಬೆಣ್ಣೆ, 200 ಗ್ರಾಂ ಜೇನುತುಪ್ಪ, 25 ಲೀಟರ್ ಹಾಲು, 1 ಕೆಜಿ ಕಾಜು ಅಥವಾ ಬದಾಮ್ ಬೇಕೇ ಬೇಕು.
ಮುರ್ರಾ ಪ್ರಜಾತಿಯ ದನಗಳಿಗೆ ಜಗತ್ತಿನಲ್ಲಿ ದೊಡ್ಡ ಬೇಡಿಕೆ ಇದೆ. ಇದರ ವೀರ್ಯದಿಂದ ಹುಟ್ಟಿದ ಎಮ್ಮೆಗಳ ತೂಕ ಜನ್ಮ ಪಡೆದಾಗಲೇ 40 ರಿಂದ 50 ಕೆಜಿ ಇರುತ್ತದೆ. ಒಂದು ಬಾರಿಗೆ 25 ರಿಂದ 30 ಲೀಟರ್ ಹಾಲನ್ನು ಕೊಡುತ್ತವೆ. ಈ ಕೋಣದ 0.25 ವೀರ್ಯದ ಬೆಲೆ ಸುಮಾರು 500 ರೂಪಾಯಿ ಅಷ್ಟಿದೆ. ಪೆನ್ನಿನ ರೀಫಿಲ್ ರೀತಿಯಲ್ಲಿ ಸ್ಟ್ರಾ ನಲ್ಲಿ 0.25 ಮಿಲಿ ವೀರ್ಯವನ್ನು ತುಂಬಲಾಗುತ್ತದೆ. ಇದರ ಮಾಲೀಕ ಜವಾಹರ್ಲಾಲ್ ವರ್ಷವೊಂದಕ್ಕೆ 10 ಸಾವಿರ ವೀರ್ಯದ ಸ್ಟ್ರಾಗಳನ್ನು ಮಾರಾಟ ಮಾಡುತ್ತಾರಂತೆ.