ಈ ಚಿತ್ರದಲ್ಲಿ ಹಿಮ ಚಿರತೆಯೊಂದು ಅಡಗಿದೆ, 99% ಜನರು ಫೇಲ್ ಆಗಿದ್ದಾರೆ. ಫೋಟೋ Zoom ಮಾಡಿ ನೋಡಿ ಉತ್ತರ ಗೊತ್ತಾಗುತ್ತೆ!
ಸದ್ಯ ಹಿಮ ಪ್ರದೇಶದಲ್ಲಿಯ ಕಣ್ಣಿಗೆ ಕಾಣದ ಚಿರತೆಯೊಂದು ನೇಟಿಜನ್ಸ್ ಗಳ ತಲೆ ತಿನ್ನುತ್ತಿದೆ. ನಿಸರ್ಗವು ನಿಜವಾಗಿಯೂ ಸುಂದರವಾದ ವರದಾನವಾಗಿದೆ. ಇದು ಮನುಷ್ಯನಿಗೆ ಸತತವಾಗಿ ಏನನ್ನಾದರೂ ನೀಡುತ್ತಲೇ ಇದೆ. ಎಷ್ಟೋ ಸಲ ನಿಸರ್ಗದ ಸುಂದರ ಮತ್ತು ಅಷ್ಟೇ ಚಿತ್ರವಿಚಿತ್ರವಾದ ಫೋಟೋಗಳು ಮನುಷ್ಯನ ವಿಚಾರ ವಿಸ್ಮಯಕ್ಕೆ ಲಗ್ಗೆ ಹಾಕುತ್ತವೆ.
ಇಂಟರ್ನೆಟ್ ಸೌಲಭ್ಯದಿಂದಾಗಿ ಮನೆಯಲ್ಲಿ ಕುಳಿತು ನಿಸರ್ಗದ ಆನಂದವನ್ನು ಲೂಟಿ ಮಾಡಲು ಬರುತ್ತದೆ. ಇಂತಹದ್ದೇ ಅನೇಕ ಜನಪ್ರಿಯ ಫೋಟೋಗಳನ್ನು ಮನೆಯಲ್ಲಿ ಕುಳಿತೇ ನಾವು ನೋಡಿ ಆನಂದ ಪಡೆದುಕೊಳ್ಳುತ್ತೇವೆ. ಎಷ್ಟೋ ಸಲ ಈ ಫೋಟೋಗಳಲ್ಲಿ ಕೆಲವೊಂದು ಪ್ರಶ್ನೆಗಳು ಉದ್ಭವಿಸುತ್ತವೆ. ಈಗ ಟ್ವಿಟರ್ನಲ್ಲಿ ವೈರಲ್ ಆದ ಹಿಮಾಚ್ಛಾದಿತ ಪ್ರದೇಶದ ಫೋಟೋ ಒಂದು ನೇಟಿಜನ್ಸ್ ಗಳ ತಲೆ ತುಂಬಾ ತಿನ್ನುತ್ತಿದೆ. ಹಿಮಾಚ್ಛಾದಿತ ಪ್ರದೇಶದಲ್ಲಿ ಹಿಮ ಚಿರತೆಯೊಂದು ಅಡಗಿ ಕುಳಿತಿದೆ. ಸುಮ್ಮನೆ ಸಹಜವಾಗಿಯೇ ನೋಡಿದಾಗ ಅದು ನೋಡುಗರ ಕಣ್ಣಿಗೆ ಕಾಣಿಸುತ್ತಿಲ್ಲ. ಅದಕ್ಕೆ ಬೇಕು ಸೂಕ್ಷ್ಮವಾಗಿ ನೋಡುವ ದೃಷ್ಟಿ ಹಾಗೂ ಶೋಧಿಸಿಯೇ ಬಿಡುತ್ತೇನೆಂಬ ಜಿದ್ದು. ಯಾಕೆಂದರೆ ಇದು ಸ್ವಲ್ಪ ಕಠಿಣವಾದ ಕೆಲಸವೇ ಆಗಿದೆ ಎಂದು ಹೇಳಬಹುದು. ಇದಕ್ಕೆ ಕಾರಣ 99% ನೇಟಿಜನ್ಸ್ ಗಳು ಫೇಲ್ ಆಗಿದ್ದಾರೆ. ಪ್ರಸ್ತುತ ಫೋಟೋವನ್ನು ಟ್ವಿಟರ್ ಮುಖಾಂತರ ಐಎಫ್ಎಸ್ ಅಧಿಕಾರಿ ರಮೇಶ್ ಪಾಂಡೆಯವರು ಶೇರ್ ಮಾಡಿದ್ದಾರೆ. ಇದರಲ್ಲಿ ಹಿಮಚಿರತೆಯನ್ನು ನೀವು ಶೋಧಿಸ ಬಲ್ಲಿರಾ? ಎಂದು ಕ್ಯಾಪ್ಷನ್ ನೀಡಿದ್ದಾರೆ.
ಮೊದಲ ದೃಷ್ಟಿಯಲ್ಲಿ ಚಿರತೆಯನ್ನು ಹುಡುಕುವುದು ಅಷ್ಟೊಂದು ಸರಳವಾದ ಕೆಲಸವಲ್ಲ. ಆದರೂ ಪ್ರಯತ್ನ ಮಾತ್ರ ಸಾಕಷ್ಟು ನೇಟಿಜನ್ಸ್ ಗಳು ಮಾಡಿದ್ದಾರೆ ಅದರಲ್ಲಿ ಕೆಲವೇ ಕೆಲವರು ಮಾತ್ರ ಯಶಸ್ವಿಯಾಗಿದ್ದಾರೆ. ಹಾಗಾದರೆ ಮಾಡಿ ನೋಡೋಣ ನೀವು ಪ್ರಯತ್ನ.
Phantom cat….!They are called ghost of the mountains.
— Ramesh Pandey (@rameshpandeyifs) July 13, 2021
If you can locate. @ryancragun pic.twitter.com/sG5nMyqM0S
ನೀವು ಪ್ರಯತ್ನ ಮಾಡಿದ ಮೇಲೂ ಇನ್ನೂವರೆಗೆ ನಿಮಗೆ ಆ ಚಿರತೆ ಕಾಣಿಸುತ್ತಿಲ್ಲವಾದರೆ ಅದಕ್ಕಾಗಿ ನಾವು ಸಹಾಯ ಮಾಡುತ್ತೇವೆ. ಈ ಫೋಟೋವನ್ನು ತುಂಬಾ ಸೂಕ್ಷ್ಮವಾಗಿ ನೋಡಿದಾಗ ಚಿರತೆಯು ಫೋಟೋದ ಬಲಭಾಗದ ಮೂಲೆಯಲ್ಲಿ ಕುಳಿತಿರುವುದು ಕಂಡುಬರುತ್ತದೆ.
Correct me if I am wrong. pic.twitter.com/VE3927mPTZ
— Deepika (@Deepika_3099) July 14, 2021
ರಮೇಶ್ ಪಾಂಡೆಯವರು ಟ್ವೀಟ್ ಮಾಡಿದ ಈ ಫೋಟೋಗೆ ಇಲ್ಲಿಯವರೆಗೆ ಅಸಂಖ್ಯ ಕಮೆಂಟುಗಳು ಬಂದಿವೆ. ಅದರ ಜೊತೆಗೆ ಈ ಟ್ವಿಟ್ ನ್ನು ನೂರಾರು ಜನರು ಶೇರ್ ಸಹ ಮಾಡಿದ್ದಾರೆ. ಕೆಲವರು ತಮ್ಮ ಟ್ವೀಟ್ ನಲ್ಲಿ ಆ ಚಿರತೆ ಎಲ್ಲಿದೆ ಎಂಬುದರ ಬಗ್ಗೆ ಪತ್ತೆ ಹಚ್ಚಿ ಸ್ಕ್ರೀನ್ ಶಾಟ್ ಸಹ ಕಳಿಸಿದ್ದಾರೆ.