ಅಬ್ಬಾ! ಗಡ್ಡದಿಂದ ಎತ್ತಿದನು 63 ಕೆಜಿ ತೂಕದ ಮಹಿಳೆಯನ್ನು! ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿತು ಈ ವೈರಲ್ ವಿಡಿಯೋ…

ಇಂದಿನ ಯುಗದಲ್ಲಿ ಪ್ರತಿಯೊಬ್ಬರು ಏನಾದರೂ ಹೊಸದೊಂದು ಸಾಧನೆ ಮಾಡಿ ತಮ್ಮ ಹೆಸರನ್ನು ಗಿನ್ನಿಸ್ ದಾಖಲೆ ಮಾಡಲು ತುಂಬಾನೇ ವಿಧ ವಿಧವಾದ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕೆಲವೊಬ್ಬರ ಪ್ರಯತ್ನ ಮಾತ್ರ ಯಶಸ್ಸು ಕಾಣುತ್ತದೆ. ಪ್ರಸಿದ್ದಿ ಪಡೆಯುವ ಸಲುವಾಗಿ ಕೆಲವು ಜನರು ಬೇಡವಾದ ಕಾರ್ಯ ಸಹ ಮಾಡುತ್ತಾರೆ. ಇಂತಹದೇ ಒಂದು ವಿಚಿತ್ರವಾದ ಸಾಧನೆ ಮಾಡಿರುವ ಈ ವ್ಯಕ್ತಿಯ ಹೆಸರು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್(Guinness book of World Record) ನಲ್ಲಿ ನೋಂದಾಯಿಸಲಾಗಿವೆ. ತದನಂತರ ಈ ವ್ಯಕ್ತಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರೋತ್ಸಾಹ ಸಹ ದೊರೆಯುತ್ತಿದೆ.

ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಿಂದ ಇದೀಗ ಒಂದು ವಿಡಿಯೋ ಬಿಡುಗಡೆಯಾಗಿದೆ. ಇದರಲ್ಲಿ ಒಬ್ಬ ವ್ಯಕ್ತಿ ತನ್ನ ಗಡ್ಡದ ಮೂಲಕ ಒಬ್ಬ ಮಹಿಳೆಯನ್ನು ಮೇಲಕ್ಕೆ ಎತ್ತುವದನ್ನು ನೀವು ನೋಡಬಹುದು. ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಈ ವಿಡಿಯೋ ಶೇರ್ ಮಾಡುವಾಗ ” ಅಂಟಾನಾಸ್ ಕಾಂಟ್ರಿಮಾಸ್ ಅವರು ತಮ್ಮ ಗಡ್ಡದಿಂದ ಇದುವರೆಗಿನ ಅತ್ಯಂತ ಭಾರೀ ತೂಕವನ್ನು ಎತ್ತಿದ್ದಾರೆ” ಎಂದು ಕ್ಯಾಪ್ಶನ್ ನಲ್ಲಿ ಬರೆದಿದ್ದಾರೆ. ಸದ್ಯಕ್ಕೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.

ವಿಡಿಯೋ ನೋಡಿ.

ಪ್ರಸ್ತುತ ವಿಡಿಯೋದಲ್ಲಿ ಅಂಟಾನಾಸ್ ಕಾಂಟ್ರಿಮಾಸ್ ಎಂಬ ವ್ಯಕ್ತಿ ತನ್ನ ಗಡ್ಡದ ಮುಖಾಂತರ ಒಬ್ಬ ಮಹಿಳೆಯನ್ನು ಮೇಲಕ್ಕೆ ಎತ್ತುತ್ತಾನೆ. ಆದರೆ ನಿಮಗಿದು ಗೊತ್ತಿರಲಿ ಆ ಮಹಿಳೆಯ ತೂಕ 63 ಕಿಲೊಗ್ರಾಮ್ ಕ್ಕಿಂತ ಹೆಚ್ಚು ಇದೆ ಎಂದು ತಿಳಿಸಲಾಗಿದೆ. ಎರಡು ಕೈಯಿದ್ದರು ಸಹ 50 ಕಿಲೋಗ್ರಾಮ್ ವಸ್ತು ಅಥವಾ ವ್ಯಕ್ತಿಯನ್ನೂ ಎತ್ತಲು ಸಾಧ್ಯವಾಗದು ಆದರೆ ಈ ವ್ಯಕ್ತಿ ಮಾತ್ರ ತನ್ನ ಗಡ್ಡದಿಂದ 63 ಕಿಲೋಗ್ರಾಮ ತೂಕ ಹೊಂದಿದ ಮಹಿಳೆಯನ್ನು ಮೇಲಕ್ಕೆ ಎತ್ತುತ್ತ ತನ್ನ ಹೆಸರನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನಲ್ಲಿ ಬರೆಸಿದ್ದಾರೆ.

ಪ್ರಸ್ತುತ ವಿಡಿಯೋ ತುಂಬಾನೇ ವೈರಲ್ ಆಗುತ್ತಿದ್ದು ಈ ವಿಡಿಯೋ ವೀಕ್ಷಿಸಿದ ಪ್ರತಿಯೊಬ್ಬ ನೆಟ್ಟಿಗರು ವಿವಿಧ ರೀತಿಯಾದ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪದೇ ಪದೇ ಅನೇಕ ವಿಡಿಯೋಗಳನ್ನು ಮಾಡುತ್ತಲಿದೆ ಅವರು ಶೇರ್ ಮಾಡಿರುವ ವಿಡಿಯೋಗಳಲ್ಲಿ ಅನೇಕ ವೀಡಿಯೋಗಳು ತುಂಬಾ ಭ#ಯಾನಕ ಮತ್ತು ವಿಚಿತ್ರವಾಗಿರುತ್ತವೆ. ಏಕೆಂದರೆ ಇಂದಿನ ಜನರು ಯಾವ ತರಹದ ವಿಡಿಯೋಮಾಡುತ್ತಾರೆ ಎಂಬುದು ಹೇಳಲು ಸಾಧ್ಯವಿಲ್ಲ.