ಗ್ರಾಹಕನು 1192 KM ದೂರದಿಂದ ಕೊಟ್ಟನು ಊಟದ ಆರ್ಡರ್! ಜೊತೆಗೆ ಇಟ್ಟನು ವಿಚಿತ್ರ ಶರ್ತು! ಡಿಲೆವರಿ ಬಾಯ್ ನೀಡಿದ ಅದ್ಭುತ ಉತ್ತರ…

ಜಗತ್ತಿನಲ್ಲಿ ಅನೇಕ ರೀತಿಯ ಜನರಿರುತ್ತಾರೆ. ಕೆಲವೊಂದು ಸಲ ಸ್ವಂತಕ್ಕೆ ಅಸಾಧ್ಯವಾದ ಕೆಲಸಗಳನ್ನು ಬೇರೆಯವರಿಂದ ಸಹಜವಾಗಿ ಅಪೇಕ್ಷಿಸುವ ಜನರು ಈ ಭೂಮಿಯ ಮೇಲೆ ತುಂಬಾ ಇದ್ದಾರೆ. ಇದೇ ರೀತಿಯ ತುಂಬಾ ವಿಶೇಷ ಮತ್ತು ವಿಚಿತ್ರವಾದ ಡಿಮಾಂಡ್ ಒಬ್ಬ ವ್ಯಕ್ತಿಯು ರೆಸ್ಟೋರೆಂಟ್ ನ ಡೆಲಿವರಿ ಬಾಯ್ ಕಡೆಗೆ ಮಾಡುತ್ತಾನೆ. ಆತ 1000 ಕಿಲೋಮೀಟರ್ ದೂರವಿರುವ ರೆಸ್ಟೋರೆಂಟ್ ನಿಂದ ಸ್ವಂತಕ್ಕಾಗಿ ಊಟವನ್ನು ಡಿಮಾಂಡ್ ಮಾಡಿದ. ರಾತ್ರಿಯ ಊಟ ಮನೆಗೆ ತಲುಪಬೇಕು ಎಂಬ ಬೇಡಿಕೆ ಇಟ್ಟನು.

ಡೆಲಿವರಿ ಬಾಯ್ ಗೆ ಯಾವಾಗ ಈ ಆರ್ಡರ್ ಸಿಕ್ಕಿತು ಇಷ್ಟೊಂದು ದೂರ ಈ ಆರ್ಡರ್ ಡಿಲೆವರಿ ಮಾಡುವುದು ಹೇಗೆ ಎಂಬ ವಿಚಾರ ಆ ಡಿಲೇವರಿ ಬಾಯ್ ಮಾಡ ಹತ್ತಿದನು. ಇಷ್ಟೊಂದು ದೂರ ಡೆಲಿವರಿ ಮಾಡಲು ಹೋದರೆ ಅದಕ್ಕೆ ಬೇಕಾಗುವ ಹಣವೆಷ್ಟು ಎಂದು ಚಿಂತಿಸತೊಡಗಿದನು. ಇದರ ಸಂಪೂರ್ಣ ಲೆಕ್ಕವನ್ನು ಮಾಡಿದ ನಂತರ ಡೆಲಿವರಿ ಬಾಯ್ ಊಟದ ಆರ್ಡರ್ ಕೊಟ್ಟ ಗ್ರಾಹಕನಿಗೆ ತುಂಬ ಮಾರ್ಮಿಕವಾಗಿ ಉತ್ತರ ನೀಡಿದನು. Kaelum Grant ಹೆಸರಿನ ಈ ಡೆಲಿವರಿ ಬಾಯ್ ಸ್ವತಃ ತಾನೇ TikTok ಮೇಲೆ ಜನರಿಗೆ ತನ್ನ ಜೊತೆಗೆ ನಡೆದ ವಿಶೇಷ ಸಂಗತಿಯ ವರದಿಯನ್ನು ನೀಡಿದ್ದಾನೆ.

ಸಾಮಾನ್ಯವಾಗಿ ಹತ್ತರಿಂದ ಹದಿನೈದು ಕಿಲೋಮೀಟರ್ ಅಂತರದೊಳಗೆ ಊಟವನ್ನು ಡೆಲಿವರಿ ಮಾಡಬಹುದು. ಆದರೆ ಅಮೆರಿಕೆಯ ಓಹಿಯಾದಲ್ಲಿ ಕೆಲಮ್ ಗ್ರಾಂಟ್ ಹೆಸರಿನ ವ್ಯಕ್ತಿಗೆ 741 ಮೈಲಿ ದೂರದಿಂದ ಊಟವನ್ನು ಡೆಲಿವರಿ ಮಾಡುವ ಆರ್ಡರ್ ಸಿಕ್ಕಾಗ ಆತ ನಿಜಕ್ಕೂ ಚಿಂತೆಯಲ್ಲಿ ಮುಳುಗಿದ್ದ. ಈ ಫುಡ್ ಆರ್ಡರನ್ನು ಆತನಿಗೆ ರೋಡೆ ಐಲ್ಯಾಂಡ್ ಗೆ ತಲುಪಿಸುವದಿತ್ತು. ಈ ಫುಡ್ ಆರ್ಡರ್ ಡೆಲಿವರಿ ಮಾಡುವ ಸಲುವಾಗಿ ಸಂಪೂರ್ಣ ದಿವಸವನ್ನು ಆತ ಖರ್ಚು ಮಾಡಿದರೂ ಅದರಿಂದ ಆತನಿಗೆ ಬರೀ 694 ರೂಪಾಯಿಗಳಷ್ಟೇ ಸಿಗುವದಿತ್ತು. ಆರ್ಡರ್ ಪ್ರಕಾರ ಕೇಲಮ್ ಗೆ ರಾತ್ರಿ ಸುಮಾರು 10 ಗಂಟೆಯವರೆಗೆ ಊಟ ತಲುಪಿಸುವುದಿತ್ತು. ಇದೇ ಸಂದರ್ಭದಲ್ಲಿ ಆತ ಗ್ರಾಹಕನಿಗೆ ಕೊಟ್ಟ ಉತ್ತರ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ. TikTok ಅಕೌಂಟ್ ಮುಖಾಂತರ ಕೆಲಮ್ ಐಲ್ಯಾಂಡ್ ಮೇಲಿರುವ ಗ್ರಾಹಕನಿಗೆ ಒಂದು ಸಲಹೆ ಹೀಗೆ ನೀಡಿದ್ದಾನೆ, ನೀನು ಸ್ವತಃ ಸ್ಯಾಂಡ್ ವಿಚ್ ಮಾಡುವದನ್ನು ಕಲಿತುಕೊ. ಯಾಕೆಂದರೆ ಇಲ್ಲಿಂದ ಊಟವೂ ನಿನಗೆ ತಲುಪಿಸುವುದು ಸಾಧ್ಯವಿಲ್ಲ. ನಿನಗಾಗಿ ಊಟ ಬರುತ್ತದೆ ಎಂದು ನೀನು ತಿಳಿದಿದ್ದರೆ ಅದನ್ನು ಮರೆತು ಬಿಡು. ನೀವು ನನಗೆ 625 ರೂಪಾಯಿಗಳಿಗಾಗಿ 1192 ಕಿಲೋಮೀಟರ್ ಪ್ರವಾಸಕ್ಕಾಗಿ ಕಳಿಸುತ್ತಿದ್ದೀರಿ ತಾನೇ? ಕೆಲಮ್ ಗ್ರಾಹಕನಿಗೆ ನೀಡಿದ ಈ ಉತ್ತರ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿದೆ. ಪ್ರಸ್ತುತ ಈ ವಿಡಿಯೋವನ್ನು 50 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ.