ನೆನೆಯಿಸಿದ ಬಾದಾಮಿಗಳನ್ನು ತಿನ್ನುವುದರಿಂದ ದೇಹಕ್ಕೆ ಆಗುವ ಅದ್ಭುತ ಪ್ರಯೋಜನಗಳು ಯಾವುವು? ಇಲ್ಲಿ ನೋಡಿ…..
ಬಾದಾಮಿಯ ಸೇವನೆ ದೇಹದ ಆರೋಗ್ಯಕ್ಕೆ ತುಂಬಾ ಪ್ರಯೋಜನ ನೀಡುವದು. ಇದರಲ್ಲಿ ಅನೇಕ ಪೋಷಕ ಘಟಕಗಳು ಇರುತ್ತವೆ. ಇದು ಆಂಟಿಆಕ್ಸಿಡೆಂಟ್ಸ್, ಆರೋಗ್ಯಕರ ಕೊಬ್ಬು, ವಿವಿಧ ಜೀವನಸತ್ವಗಳು, ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇದರ ಸೇವನೆಯಿಂದ ಮೆದುಳು ತೀಕ್ಷ್ಣ ಮತ್ತು ಎಲುಬುಗಳು ಸದೃಢವಾಗುತ್ತವೆ. ಬಾದಾಮಿಯ ಸೇವನೆಯಿಂದ ದೇಹಕ್ಕೆ ಅನೇಕ ಲಾಭಗಳು ಆಗುತ್ತವೆ. ಅದರಲ್ಲೂ ನೆನೆಯಿಸಿದ ಬಾದಾಮಿಯಿಂದ ದೇಹಕ್ಕೆ ಆಗುವ ಪ್ರಯೋಜನಗಳು ಈ ಕೆಳಗಿನಂತಿವೆ.
1) ದಿನಂಪ್ರತಿ ನೆನೆಸಿದ ಬಾದಾಮಿಯನ್ನು ತಿನ್ನುವುದರಿಂದ ಸೇವಿಸಿದ ಆಹಾರದ ಪಚನವು ಚೆನ್ನಾಗಿ ಆಗುತ್ತದೆ.
2) ದಿನಂಪ್ರತಿ ನೆನೆಯಿಸಿಟ್ಟ ಬಾದಾಮಿಗಳನ್ನು ತಿನ್ನುವುದರಿಂದ ಮೆದುಳಿನ ಕಾರ್ಯಕ್ಷಮತೆ ವೃದ್ಧಿಸುತ್ತದೆ. ಇದರ ಸೇವನೆಯಿಂದ ಸ್ಮರಣಶಕ್ತಿ ಹೆಚ್ಚುತ್ತದೆ.
3) ನೆನೆದ ಬಾದಾಮಿಯನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಲೇವಲ್ ನಿಯಂತ್ರಣದಲ್ಲಿರುತ್ತದೆ. ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ ಜೊತೆಗೆ ಹೃದಯ ರೋಗದ ಅಪಾಯ ಕಡಿಮೆಯಾಗುತ್ತದೆ.
4) ನೆನೆಯಿಸಿಟ್ಟ ಬಾದಾಮಿಗಳನ್ನು ತಿನ್ನುವುದರಿಂದ ರಕ್ತದೊತ್ತಡ ಕಡಿಮೆಯಾಗಲು ಸಹಾಯ ಮಾಡುತ್ತದೆ.
5) ನಿಮಗೆ ಒಂದು ವೇಳೆ ಶೀಘ್ರವಾಗಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕೆಂದರೆ ದಿನಂಪ್ರತಿ ನೆನೆಯಿಸಿದ ಬಾದಾಮಿಯನ್ನು ಆಹಾರದಲ್ಲಿ ಸಮಾವೇಶ ಮಾಡಬೇಕು. ಊಟದ ಸಮಯದಲ್ಲಿ ಬಾದಾಮಿ ತಿನ್ನುವುದರಿಂದ ಹಸಿವು ಕಡಿಮೆಯಾಗುವುದು.
6) ನೆನೆದ ಬಾದಾಮಿಯಲ್ಲಿ ವಿಟಮಿನ್ ಬಿ 17 ಸಮೃದ್ಧವಾಗಿರುತ್ತದೆ. ಇದು ವಿವಿಧ ಪ್ರಕಾರದ ಕ್ಯಾನ್ಸರ್ ಜೊತೆಗೆ ಹೋರಾಡಲು ತುಂಬಾ ಉಪಯುಕ್ತವಾಗಿದೆ.
7) ಗರ್ಭಧಾರಣೆಯ ಸಮಯದಲ್ಲಿ ನೆನೆಸಿಟ್ಟ ಬಾದಾಮಿಯನ್ನು ತಿನ್ನುವುದು ತುಂಬಾ ಪ್ರಯೋಜನಕಾರಿಯಾಗಿದೆ. ಬಾದಾಮಿಯಲ್ಲಿ ಫಾಲಿಕ್ ಆಸಿಡ್ ಹೇರಳವಾಗಿರುತ್ತದೆ. ಇದರಿಂದ ಹೆರಿಗೆಯು ತುಂಬಾ ಸುಲಭ ಹಾಗೂ ನೋವುಮುಕ್ತವಾಗಿರುತ್ತದೆ.
8) ಮಧುಮೇಹದ ರೋಗಿಗಳಿಗೆ ಈ ಬದಾಮಿ ತುಂಬಾ ಒಳ್ಳೆಯದು. ದಿನಪ್ರತಿ ನೆನೆಸಿದ ಬದಾಮಿ ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣವು ನಿಯಂತ್ರಣದಲ್ಲಿರಲು ಸಹಾಯವಾಗುತ್ತದೆ.
9) ಮಲಬದ್ಧತೆ ಸಮಸ್ಯೆ ಇರುವವರು ದಿನಂಪ್ರತಿ ನೆನೆಯಿಸಿದ ಬಾದಾಮಿಯನ್ನು ತಿನ್ನಬೇಕು. ಇದರಲ್ಲಿ ಫೈಬರ್ ಪ್ರಮಾಣವು ಹೆಚ್ಚಾಗಿರುವುದರಿಂದ ಮಲಬದ್ಧತೆಯ ಸಮಸ್ಯೆ ದೂರಮಾಡುತ್ತದೆ.
10) ಹಸಿವಾದಾಗ ಬಾದಾಮಿಯು ಒಳ್ಳೆಯ ಉಪಹಾರವಾಗಿದೆ. ಏಕೆಂದರೆ ಇದು ಬಹಳ ಹೊತ್ತಿನವರೆಗೆ ಹೊಟ್ಟೆಗೆ ಶಾಂತವಾಗಿ ಇಡುತ್ತದೆ.
11) ಬದಾಮಿಯಲ್ಲಿ ಮ್ಯಾಂಗನೀಸ್ ಪ್ರಮಾಣವು ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಇದರಿಂದ ದೇಹದಲ್ಲಿಯ ಎಲುಬುಗಳು ಸದೃಢವಾಗುತ್ತವೆ.
12) ನೆನೆಯಿಸಿಟ್ಟ ಬಾದಾಮಿಯಲ್ಲಿ ದೇಹಕ್ಕೆ ಅವಶ್ಯಕವಾದ ಜೀವನ ಸತ್ವಗಳು, ಖನಿಜಗಳು, ಫ್ಯಾಟಿ ಆಸಿಡ್ ಮತ್ತು ಪ್ರೋಟೀನ್ ಗಳು ಹೇರಳವಾಗಿ ತುಂಬಿವೆ. ಇವು ನಮ್ಮ ದೇಹಕ್ಕೆ ಸಂಪೂರ್ಣವಾಗಿ ಆರೋಗ್ಯದಿಂದ ಇರಲು ಸಹಾಯ ಮಾಡುತ್ತವೆ. ಬಾದಾಮಿಯ ಸೇವನೆ ತ್ವಚೆ ಹಾಗೂ ಕೂದಲಿಗಾಗಿ ಪ್ರಯೋಜನಕಾರಿಯಾಗಿದೆ. ಆದ್ದರಿಂದ ದೇಹದ ಆರೋಗ್ಯಕ್ಕಾಗಿ ನಿಮ್ಮ ಆಹಾರದಲ್ಲಿ ನೆನೆಯಿಸಿಟ್ಟ ಬಾದಾಮಿಯನ್ನು ಉಪಯೋಗಿಸಿರಿ.