ಚಿಕ್ಕ ಮಗುವಿನ ಕೈಯಲ್ಲಿ ಹುಲ್ಲುಕಡ್ಡಿ ನೋಡಿ ಜೀರಾಫ್ ಮಾಡಿದ ಆ ಕೃತಿ ನೇಟಿಜನ್ಸ್ ಗಳ ಮನಸ್ಸು ಹೇಗೆ ಗೆದ್ದಿತು ನೋಡಿ..
ಶೇರಿಂಗ್ ಈಜ್ ಕೇರಿಂಗ್ (Sharing is Caring) ಈ ಗಾದೆ ಮಾತನ್ನು ನೀವು ಕೇಳಿರಬಹುದು. ಇದೇ ಗಾದೆ ಮಾತಿನ ತಾಜಾ ಉದಾಹರಣೆಯನ್ನು ಒಂದು ವಿಡಿಯೋದ ಮಾಧ್ಯಮದಿಂದ ನಾವು ನಿಮಗೆ ತೋರಿಸಲಿದ್ದೇವೆ. ಚಿಕ್ಕ ಮಕ್ಕಳು ದೇವರ ಸ್ವರೂಪವಿದ್ದಂತೆ ಹೇಳಲಾಗುತ್ತದೆ. ಯಾಕೆಂದರೆ ಈ ಮಕ್ಕಳ ಮನಸ್ಸಿನಲ್ಲಿ ಯಾವುದೇ ರೀತಿಯ ಯಾರ ಬಗ್ಗೆಯೂ ಭೇದಭಾವ ಇರುವುದಿಲ್ಲ. ಅವರ ಮುಂದೆ ಮನುಷ್ಯನೇ ಇರಲಿ ಅಥವಾ ಯಾವುದೇ ಪ್ರಾಣಿಯಾಗಿರಲಿ ಬೇಧಭಾವ ತೋರುವುದಿಲ್ಲ. ಆದರೆ ನಾವು ಒಂದು ದೊಡ್ಡದಾದ ಪ್ರಾಣಿಯನ್ನು ನೋಡುತ್ತಲೇ ಅಲ್ಲಿಂದ ಓಡಿ ಹೋಗಲು ಯತ್ನಿಸುತ್ತೇವೆ. ಆದರಿಲ್ಲಿ ಈ ಪುಟ್ಟ ಮಗು ತನ್ನ ಕೃತಿಯಿಂದ ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಒಂದು ಚಿಕ್ಕ ಮಗು ಪ್ರಾಣಿಸಂಗ್ರಹಾಲಯದಲ್ಲಿ ತಿರುಗಾಡುತ್ತಿರುವಾಗ ಕೈಯಲ್ಲಿ ಹುಲ್ಲಿನ ಒಂದು ಕಡ್ಡಿಯನ್ನು ತೆಗೆದುಕೊಂಡಿರುತ್ತದೆ. ಹುಲ್ಲುಕಡ್ಡಿಯನ್ನು ತನ್ನ ಮುಂದಿರುವ ಅತೀ ಎತ್ತರವಾದ ಜಿರಾಫೆಗೆ ತಿನ್ನಲು ಕೊಡುವ ಸಲುವಾಗಿ ಯತ್ನಿಸುತ್ತದೆ.
ಜಿರಾಫೆಯು ಆ ಚಿಕ್ಕ ಮಗುವಿನ ಕೈಯಲ್ಲಿಯ ಹುಲ್ಲುಕಡ್ಡಿಯನ್ನು ತಿನ್ನಲು ಯತ್ನಿಸುವಾಗ ಮೊದಲು ಅಯಶಸ್ವಿಯಾಗುತ್ತದೆ. ಆದರೆ ಜಿರಾಫೆ ಮತ್ತೊಮ್ಮೆ ಪ್ರಯತ್ನಿಸಿ ಆ ಚಿಕ್ಕ ಮಗುವಿನ ಕೈಯಲ್ಲಿಯ ಹುಲ್ಲುಕಡ್ಡಿಯನ್ನು ತಿನ್ನುತ್ತದೆ. ಇದೇ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತಿದೆ.
ವಿಡಿಯೋ ನೋಡಿ
आप चाहे जितने छोटे हों, जितना बन पड़े, दिल से शेयर करें.
— Dipanshu Kabra (@ipskabra) November 24, 2021
और चाहे आप जितने बड़े हों हमेशा विनम्रता से स्वीकार करें. pic.twitter.com/9HY6Y8PHsa
ಈ ವಿಡಿಯೋವನ್ನು ಟ್ವಿಟರ್ನಲ್ಲಿ ಐಪಿಎಸ್ ಅಧಿಕಾರಿಯಾದ ದೀಪಂಶು ಕಾಬರಾ ಅವರು ಶೇರ್ ಮಾಡಿದ್ದಾರೆ. ಇಲ್ಲಿಯವರೆಗೆ ಈ ವಿಡಿಯೋ ಸುಮಾರು 50 ಸಾವಿರಕ್ಕಿಂತ ಹೆಚ್ಚು ಜನರು ನೋಡಿದ್ದಾರೆ. ಅನೇಕ ನೇಟಿಜನ್ಸ್ ಗಳು ತಮ್ಮ ಮನಸ್ಸಿಗೆ ಹಿಡಿಸಿದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬ ನೆಟ್ಟಿಗ “ನೀವು ಎಷ್ಟೇ ಚಿಕ್ಕವರಾಗಿರಲಿ ನಿಮ್ಮ ಮನಸ್ಸಿನಿಂದ ಅದನ್ನು ಶೇರ್ ಮಾಡಿ, ಮತ್ತು ನೀವು ಎಷ್ಟೇ ದೊಡ್ಡವರಾಗಿರಲಿ ನಮ್ರತೆಯಿಂದ ಅದನ್ನು ಸ್ವೀಕರಿಸಿ ಎಂದು ತನ್ನ ಪ್ರತಿಕ್ರಿಯೆಯನ್ನು ನೀಡಿದ್ದಾನೆ”.