VIRAL VIDEO : ಪಾಕಿಸ್ತಾನದ ಸಚಿವ ಫವಾದ್ ಚೌಧರಿ ಎನ್ನುತ್ತಾರೆ ಗಾರ್ಲಿಕ್ ಎಂದರೆ ಅದ್ರಕ್ (ಹಸಿ ಶುಂಠಿ) ನೇಟಿಜನ್ಸ್ ಗಳ ಪ್ರಶ್ನೆ; ಶಿಕ್ಷಣ ಯಾವ ಶಾಲೆಯಲ್ಲಿ?

ಸೋಶಿಯಲ್ ಮೀಡಿಯಾ ಮತ್ತು ಪಾಕಿಸ್ತಾನ… ಎರಡು ಘಟಕಗಳು ಟ್ರೋಲರ್ಸ್ ಗಳಿಗೆ ಏನಾದರೊಂದು ಹೊಸ ವಿಷಯ ತಂದು ಕೊಡುತ್ತಲೇ ಇರುತ್ತವೆ. ನಮ್ಮ ನೆರೆಯ ದೇಶ ಪಾಕಿಸ್ತಾನವು ಯಾವದಾದರೂ ಒಂದು ಕಾರಣಕ್ಕೆ ಟ್ರೋಲರ್ಸ್ ಗಳ ಟಾರ್ಗೆಟ್ ಆಗೇ ಆಗುತ್ತಾರೆ. ಕೆಲವೊಮ್ಮೆ ಆಟಗಾರರು ಹಾಗೂ ಕೆಲವೊಮ್ಮೆ ಇಲ್ಲಿಯ ರಾಜಕೀಯ ನಾಯಕರು ಯಾವುದಾದರೂ ಕಾರಣದಿಂದ ಟ್ರೋಲ್ ಆಗೇ ಆಗುತ್ತಾರೆ. ಸದ್ಯ ಹೊಸದಾಗಿ ಪಾಕಿಸ್ತಾನದ ಸಚಿವರಾದ ಪವಾದ್ ಚೌಧರಿ ಅವರ ಸರದಿ ಬಂದಿದೆ. ಇವರು ಗಾರ್ಲಿಕ್ ಎಂದರೆ ಅದ್ರಕ್ (ಹಸಿ ಶುಂಟಿ) ಎಂದು ದಾವೆ ಮಾಡುವ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನೇಟಿಜನ್ಸ್ ಗಳಿಗೆ ಟ್ರೋಲ್ ಮಾಡಲು ಇಷ್ಟೇ ವಿಷಯ ಸಾಕು. ಈ ವಿಷಯದ ಮೇಲೆ ಸಾಕಷ್ಟು ಮೀಮ್ಸ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಡುತ್ತಿದ್ದಾರೆ. ಇವುಗಳನ್ನು ಓದಿದಾಗ ನೀವು ಸಹಿತ ನಕ್ಕು ಸುಸ್ತಾಗುವಿರಿ.

ಪಾಕಿಸ್ತಾನದ ಸಚಿವರಾದ ಫವಾದ್ ಚೌಧರಿ ಸಂಪೂರ್ಣ ಪತ್ರಿಕಾಗೋಷ್ಠಿ ಮುಗಿಯುವವರೆಗೂ ಗಾರ್ಲಿಕ್ ಎಂದರೆ ಅದ್ರಕ್ ಎಂದೇ ಹೇಳುತ್ತಿದ್ದರು. ಹೀಗಾಗಿ ಟ್ರೋಲರ್ಸ್ ಗಳು ಇವರ ನಾಲೇಜ್ ಮೇಲೆಯೇ ಪ್ರಶ್ನೆ ಚಿಹ್ನೆಯನ್ನು ಹಾಕಿದ್ದಾರೆ.

ವಿಡಿಯೋ ನೋಡಿ

ಒಬ್ಬ ಯೂಸರ್ ತನ್ನ ಕಮೆಂಟ್ ನಲ್ಲಿ ಗಾರ್ಲಿಕ್ ಎಂದರೆ ಬೆಳ್ಳುಳ್ಳಿ ಎಂದು ಹೇಳಿದ್ದಾನೆ. ಇನ್ನೊಬ್ಬನಂತೂ ನೇರ ಬೆಳ್ಳುಳ್ಳಿಯ ಫೋಟೋವನ್ನೇ ಪೋಸ್ಟ್ ಮಾಡಿದ್ದಾನೆ. ಪತ್ರಿಕಾಗೋಷ್ಠಿಯ ಸಮಯದಲ್ಲಿ ಒಬ್ಬನು ಬೆಳ್ಳುಳ್ಳಿ ಎಂದು ಹೇಳಿದರೂ ಅತ್ತ ಗಮನ ನೀಡದೆ ಚೌಧರಿಯವರು ಅದ್ರಕ್ ಎಂತಲೇ ಮುಂದುವರಿಸಿದ್ದಾರೆ. ಒಬ್ಬ ಯೂಸರ್ ನಂತೂ ಇನ್ನಷ್ಟು ಮುಂದೆ ಹೋಗಿ ‘ಈತನನ್ನು ಮೊದಲು ಕ್ಲಾಸಿನಿಂದ ಹೊರಗೆ ಹಾಕಿ’ ಎಂದು ಹೇಳಿದ್ದಾನೆ. ‘ನೀವು ಯಾವ ಶಾಲೆಯಲ್ಲಿ ಶಿಕ್ಷಣ ತೆಗೆದುಕೊಂಡಿದ್ದೀರಾ’? ಎಂದು ಇನ್ನೊಬ್ಬ ನೆಟ್ಟಿಗ ಪ್ರಶ್ನಿಸಿದ್ದಾನೆ.