ಪರಾಗ್ ಅಗರ್ವಾಲ್ Twitter ನ ಹೊಸ CEO ಆಗುವುದು ಖಚಿತವಾದ ನಂತರ ಎಲನ್ ಮಸ್ಕ್ ಹೇಳುತ್ತಾರೆ, ಭಾರತೀಯರ ಕೌಶಲ್ಯ…
ಭಾರತೀಯ ಮೂಲದ ಪರಾಗ್ ಅಗರ್ವಾಲ್ ಟ್ವಿಟರ್ ನ ಸಿಇಓ ಆಗಲಿದ್ದಾರೆ ಎಂಬ ಘೋಷಣೆ ಈಗಾಗಲೇ ಆಗಿದೆ. ಜಗತ್ತಿನಲ್ಲಿ ಎಲ್ಲಕ್ಕೂ ಹೆಚ್ಚು ಚರ್ಚೆಯಲ್ಲಿರುವ ಮತ್ತು ಚರ್ಚೆಗೆ ಎದೆ ಮಾಡಿ ಕೊಡುವ ವೆಬ್ಸೈಟ್ ಎಂದು ನೋಡಲಾಗುವ ಟ್ವಿಟರ್ ಸೋಮವಾರದಂದು ತನ್ನ ಕಂಪನಿಯಲ್ಲಿ ಅನೇಕ ಪ್ರಮುಖ ಬದಲಾವಣೆಗಳ ಘೋಷಣೆ ಮಾಡಿತು. ಈ ಕಂಪನಿಯ ಸಹ ಸಂಸ್ಥಾಪಕರಾದ ಜಾಕ್ ಡಾರ್ಸಿ ಇವರು CEO ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದರು. ಇವರ ಉತ್ತರಾಧಿಕಾರಿಯಾಗಿ ಸದ್ಯ ಟ್ವಿಟರ್ ನ ಮುಖ್ಯ ತಂತ್ರಜ್ಞಾನ ಅಧಿಕಾರಿ ಪರಾಗ್ ಅಗರವಾಲ್ ಅವರನ್ನು ನೇಮಕ ಮಾಡಲಾಯಿತು. ಕಂಪನಿ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ ನಂತರ ಭಾರತೀಯ ಮೂಲದ ವ್ಯಕ್ತಿಯೊಬ್ಬ ಟ್ವಿಟರ್ ನ ಸರ್ವೋಚ್ಚ ಸ್ಥಾನಕ್ಕೆ ವಿರಾಜಮಾನವಾಗುತ್ತಿರುವದನ್ನು ಭಾರತೀಯರು ತುಂಬಾ ಸಂತೋಷ ವ್ಯಕ್ತ ಮಾಡುತ್ತಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಿಸಿ ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಹಾಗೂ ಸ್ಪೇಸ್ ಎಕ್ಸ್ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುವ ಟೆಸ್ಲಾ ಕಂಪನಿಯ ಮಾಲೀಕರಾದ ಎಲನ್ ಮಸ್ಕ ಅವರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಎಲನ್ ಮಸ್ಕ್ ಅವರು ನೀಡಿದ ತಮ್ಮ ಪ್ರತಿಕ್ರಿಯೆಯಲ್ಲಿ ಹೀಗೆ ಹೇಳುತ್ತಾರೆ, “ಭಾರತೀಯರಲ್ಲಿ ಇರುವ ಅದ್ಭುತ ಕೌಶಲ್ಯದಿಂದಾಗಿ ಅಮೆರಿಕಕ್ಕೆ ತುಂಬಾ ಲಾಭವಾಗುತ್ತಿದೆ” ಎಂದು ನಿಸ್ಸಂಕೋಚವಾಗಿ ಹೇಳಿದ್ದಾರೆ.