ಆತ ನನ್ನ ಮುಖದ ಮೇಲೆ ಮೂ#ತ್ರ… ಸುರೇಶ್ ರೈನಾ ತಮ್ಮ ‘Believe’ ಈ ಆತ್ಮಚರಿತ್ರೆಯಲ್ಲಿ ಬಹಿರಂಗ ಮಾಡಿದರು ಮಹತ್ವದ ವಿಷಯಗಳನ್ನು!
ಭಾರತದ ಬಿರುಸಿನ ಹೊಡೆತದ ಮಾಜಿ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಅವರು ‘Believe’ ಹೆಸರಿನ ಆತ್ಮಚರಿತ್ರೆಯಲ್ಲಿ ತಮ್ಮ ಜೀವನ ಹಾಗೂ ಕ್ರಿಕೆಟ್ ಬಗೆಗಿನ ಅನೇಕ ವಿಷಯಗಳ ಬಗ್ಗೆ ಖುಲಾಸೆ ಮಾಡಿದ್ದಾರೆ. ಸುರೇಶ್ ರೈನಾ ಭಾರತದ ಮಾಜಿ ತರಬೇತುದಾರ ಗ್ರೇಗ್ ಚಾಪಲ್ ಅವರ ಬಗ್ಗೆಯೂ ಅನೇಕ ವಿಷಯಗಳನ್ನು ತಮ್ಮ ಈ ಪುಸ್ತಕದಲ್ಲಿ ಮಂಡಿಸಿದ್ದಾರೆ. ಇದೇ ಪುಸ್ತಕದಲ್ಲಿ ರೈನಾ ಅವರು ಹಾಸ್ಟೆಲ್ ನಲ್ಲಿದ್ದಾಗ ಆಗಿರುವ ರ್ಯಾಗಿಂಗ್ ಭೀಕರತೆಯ ಬಗ್ಗೆ ನಮೂದಿಸಿದ್ದಾರೆ.
ಲಖನೌದ ಸ್ಪೋರ್ಟ್ಸ್ ಹಾಸ್ಟೆಲ್ ನಲ್ಲಿ ಇರುವುದಕ್ಕೆ ಅವಕಾಶ ನೀಡಿದ ನಂತರ ಹಾಸ್ಟೆಲ್ ನಲ್ಲಿಯೇ ಇರಲು ಶುರುಮಾಡಿದರು. ಅಲ್ಲಿ ಹೊಸದಾಗಿ ಅಡ್ಮಿಶನ್ ತೆಗೆದುಕೊಂಡ ವಿದ್ಯಾರ್ಥಿಗಳಿಗೆ ಸೀನಿಯರ್ಗಳು ಟಾರ್ಗೆಟ್ ಮಾಡುತ್ತಿದ್ದರು. ವಿಶೇಷವೆಂದರೆ ಅವರು ಅಭ್ಯಾಸ ಹಾಗೂ ಆಟಗಳಲ್ಲಿಯೂ ಸಹ ಜಾಣವಾಗಿರುತ್ತಿದ್ದರು. ಸೀನಿಯರ್ಸ್ ಗಳು ಜೂನಿಯರ್ಸ್ ಗಳಿಗೆ ತಮ್ಮ ಅನೇಕ ಕೆಲಸಗಳನ್ನು ಮಾಡಲು ಹೇಳುತ್ತಿದ್ದರು. ಅವರು ರ್ಯಾಗಿಂಗ್ ನ ವಿವಿಧ ಪದ್ಧತಿಗಳನ್ನು ಅನುಸರಿಸುತ್ತಿದ್ದರು. ಅವರು ನಮ್ಮ ಜೊತೆಗೆ ತಮ್ಮ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದರು. ಕೆಲವೊಂದು ಸಲ ಕೋಳಿಯಂತೆ ಬಾಗಿ ನಿಲ್ಲಲು ಹೇಳುತ್ತಿದ್ದರು, ಇನ್ನು ಕೆಲವು ಸಲ ಮುಖಕ್ಕೆ ತಣ್ಣೀರು ಎರಚುತ್ತಿದ್ದರು. ಬೇಸಿಗೆ, ಚಳಿ ಹೀಗೆ ಯಾವುದೇ ಋತು ಇರಲಿ ಅವರು ಚಹಾದ ಮಗ್ ನ್ನು ನನ್ನ ಬೆಡ್ ಕೆಳಗೆ ಇಡುತ್ತಿದ್ದರು. ಮುಂಜಾನೆಯ ಸಮಯದಲ್ಲಿ ನಾನು ಚಹಾ ಕುಡಿಯುವ ಮೊದಲು ಅವರಿಗೆ ಚಹಾ ನೀಡಲು ಅವರ ಕೋಣೆಗೆ ಹೋಗಬೇಕೆಂಬ ಆದೇಶವಿರುತ್ತಿತ್ತು. ಆ ಸಮಯದಲ್ಲಿ ನಾನು ಬರೀ 11-12 ವರ್ಷದವನಾಗಿದ್ದೆ. ಈ ಕೆಲಸಗಳನ್ನು ನಾನು ಅವರಿಗಾಗಿ ನಸುಕಿನ 4 ಅಥವಾ 4.30 ಗಂಟೆಗೆ ಮಾಡಬೇಕಾಗುತ್ತಿತ್ತು. ಅವರ ಕೊಳೆಯಾದ ಬಟ್ಟೆಗಳನ್ನು ನಮ್ಮಿಂದ ಸ್ವಚ್ಛ ಮಾಡಿಕೊಳ್ಳುತ್ತಿದ್ದರು. ಆ ಬಟ್ಟೆಗಳನ್ನು ಚೆನ್ನಾಗಿ ತೊಳೆದು ಮರಳಿ ಅವರಿಗೆ ಒಯ್ದು ಮುಟ್ಟಿಸುವುದು ನಮ್ಮ ಜವಾಬ್ದಾರಿಯಾಗಿತ್ತು. ಕೆಲವೊಂದು ಸಲವಂತೂ ಮೂರು ಗಂಟೆಯ ಸುಮಾರಿಗೆ ನಿದ್ರೆಯಲ್ಲಿದ್ದಾಗ ತುಂಬಾ ತಣ್ಣಗಿನ ನೀರನ್ನು ಮೈಮೇಲೆ ಹಾಕಿಬಿಡುತ್ತಿದ್ದರು.

ತಮ್ಮ ಆತ್ಮಚರಿತ್ರೆಯಲ್ಲಿ ಸುರೇಶ್ ರೈನಾ ಅವರು ಅನೇಕ ಘಟನೆಗಳನ್ನು ವಿವರಿಸಿದ್ದಾರೆ. ಒಂದು ಸಲ ಯಾವುದೋ ಒಂದು ಸ್ಪರ್ಧೆಯಲ್ಲಿ ಭಾಗ ತೆಗೆದುಕೊಳ್ಳಲು ಆಗ್ರಾಕ್ಕೆ ಹೋಗುವಾಗ ನಮ್ಮ ಜೊತೆಗೆ ಎಲ್ಲ ಸೀನಿಯರ್ಗಳು ಇದ್ದರು. ಎಲ್ಲರಿಗೂ ಕೂಡಲು ಸ್ಥಳವಿಲ್ಲದ ಕಾರಣದಿಂದ ನಾವು ಬಾಗಿಲ ಹತ್ತಿರ ಕುಳಿತಿದ್ದೆವು. ಆ ಸಂದರ್ಭದಲ್ಲಿ ಸೀನಿಯರ್ಸ್ ಗಳು ನಮಗೆ ಕಿರುಕುಳ ನೀಡಲು ಅಲ್ಲಿಗೆ ಬಂದರು. ಲೈಟ್ ತೆಗೆದು ನಮ್ಮ ಮೇಲೆ ಬೂಟು ಹಾಗೂ ಚಪ್ಪಲಿಗಳನ್ನು ಎಸೆದರು. ಅಷ್ಟರಲ್ಲೇ ಒಬ್ಬ ಎತ್ತರವಾದ ವಿದ್ಯಾರ್ಥಿ ನನ್ನ ಮೇಲೆ ಕುಳಿತು ನನ್ನ ಮುಖದ ಮೇಲೆ ಮೂ#ತ್ರ ಮಾಡಲು ಶುರುಮಾಡಿದ ಎಂದು ಹೇಳಿದ್ದಾರೆ.
ಹಾಸ್ಟೆಲ್ನಲ್ಲಿ ವಾಸಿಸುವಾಗ ಯಾರು ನನ್ನ ಜೀವನವನ್ನು ನರಕ ಮಾಡಿದ್ದರು, ಅವರು ಅನೇಕ ಸಲ ನನ್ನನ್ನು ಭೇಟಿಯಾಗಿದ್ದಾರೆ. ಈಗ ಅವರಿಗೆ ನನ್ನ ಜೊತೆ ಮಾತನಾಡಿದಾಗ ತುಂಬಾ ಖುಷಿಯಾಗುತ್ತದೆ. ಅವರು ನನ್ನ ಜೊತೆ ನಡೆದುಕೊಂಡ ಆಗಿನ ರೀತಿಯನ್ನು ಸಹಜವಾಗಿ ಮರೆತಿರಬಹುದು. ರ್ಯಾಗಿಂಗ್ ಇದು ಒಂದು ತುಂಬಾ ಕೆಟ್ಟ ವರ್ತನೆಯಾಗಿದೆ. ಇದನ್ನು ಬೇರುಸಹಿತ ಕಿತ್ತು ಬಿಸಾಕುವುದು ತುಂಬಾ ಅವಶ್ಯಕವಾಗಿದೆ. ಒಂದು ವೇಳೆ ನೀವು ಈ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದೇ ಆದರೆ ಅದರ ವಿರುದ್ಧ ಹೋರಾಡುವುದನ್ನು ಕಲಿಯಿರಿ ಎಂದು ರೈನಾ ಅವರು ತಮ್ಮ ಪುಸ್ತಕದಲ್ಲಿ ಹೇಳುತ್ತಾರೆ.
ಸುರೇಶ್ ರೈನಾ ಅವರು ಶ್ರೀಲಂಕಾದ ವಿರುದ್ಧ ಕ್ರಿಕೆಟ್ ನಲ್ಲಿ ಎಂಟ್ರಿ ಮಾಡಿದರು. ಇವರು ತಮ್ಮ ಕರಿಯರ್ ನಲ್ಲಿ ಭಾರತಕ್ಕಾಗಿ 226 ಏಕದಿನ ಪಂದ್ಯಗಳನ್ನು ಆಡಿ 5615 ರನ್ಗಳನ್ನು ಸೇರಿಸಿದ್ದಾರೆ. ಇದರ ಜೊತೆಗೆ 36 ವಿಕೆಟ್ಗಳನ್ನು ಸಹ ಪಡೆದಿದ್ದಾರೆ.