ಪತಿ ಬೇಕಾ? ಇಲ್ಲ ಮಾಂಸ? ಸಸ್ಯಾಹಾರಿ ಗಂಡ ಪ್ರಶ್ನಿಸಿದ ಹೆಂಡತಿಗೆ! ನೇಟಿಜನ್ಸ್ ಗಳು ನೀಡಿದರು ಸ್ವಾರಸ್ಯಕರ ಉತ್ತರ…

ಪತಿ-ಪತ್ನಿಯ ಮಧ್ಯೆ ಯಾವಾಗ ಯಾವ ವಿಷಯಕ್ಕೆ ಸಂಬಂಧಿಸಿ ಮನಸ್ತಾಪ ಉಂಟಾಗುತ್ತದೆ ಹೇಳಲು ಸಾಧ್ಯವಿಲ್ಲ. ಈಗ ಇಲ್ಲಿ ಪತಿ ಮತ್ತು ಪತ್ನಿಯ ವಿವಾದ ನೇರ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಕ್ಕೆ ಬಂದಿದೆ. ಪತ್ನಿಯು ಮಾಂಸ ತಿನ್ನದೆ ಇರಲು ನನ್ನಿಂದ ಸಾಧ್ಯವಾಗುವುದಿಲ್ಲವೆಂದು ಪತಿಯ ಸಸ್ಯಾಹಾರಿ ಆದೇಶಕ್ಕೆ ಸ್ಪಷ್ಟ ನಿರಾಕರಿಸಿದ್ದಾಳೆ. ಈ ವಿವಾದ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಮೋಜಿನ ಹಾಗೂ ಅಷ್ಟೇ ಚರ್ಚೆಯ ವಿಷಯವಾಗಿದೆ. ಒಂದು ವೈರಲ್ ಟ್ವೀಟ್ ನಲ್ಲಿ ಪತಿಯೊಬ್ಬ ಕಾಲ್ ಮಿಸ್ಟ್ ಕಡೆಗೆ ತನ್ನ ಪತ್ನಿಯ ನಾನ್ ವೆಜ್ ಸೇವನೆಯ ಬಗ್ಗೆ ಸಲಹೆಯನ್ನು ಕೇಳಿದ್ದಾನೆ.

ಕಾಲ್ ನಲ್ಲಿ ಪತಿಯು ತನ್ನ ಮದುವೆ ಹೇಗಾಯಿತು ಎಂಬುದರ ಬಗ್ಗೆ ಹೇಳಿದ್ದಾನೆ, ನಾನು ನನ್ನ ಹೆಂಡತಿಯ ಜೊತೆಗೆ ಮದುವೆಯಾಗುವ ಮೊದಲು ಆಕೆ ಸಸ್ಯಾಹಾರಿ ಆಗಿರಬಹುದು ಎಂದು ಅನಿಸುತ್ತಿತ್ತು. ಆಕೆಯ ಸಂಪೂರ್ಣ ಕುಟುಂಬ ಸಸ್ಯಾಹಾರಿ ಇದ್ದರೂ ಆಕೆಗೆ ಮಾಂಸ ತಿನ್ನಲು ಇಷ್ಟವಂತೆ. ಆದರೆ ಮದುವೆಯ ನಂತರ ಮಾಂಸ ತಿನ್ನುವುದನ್ನು ಬಿಟ್ಟು ಬಿಡುತ್ತೇನೆ ಎಂದು ಭಾಷೆ ಕೊಟ್ಟಿದ್ದಳು. ಆಕೆ ತುಂಬಾ ಸುಂದರವಾಗಿದ್ದಳೆಂದು ಬಿಡಲು ಮನಸ್ಸಾಗದೆ ಈ ಶರ್ತಿನ ಮೇಲೆ ಮದುವೆಯಾದೆ. ಆದರೆ ಇನ್ನುವರೆಗೆ ಆಕೆ ಕದ್ದುಮುಚ್ಚಿ ಮಾಂಸ ಸೇವನೆ ಮಾಡುತ್ತಿರುವದು ನನ್ನ ಗಮನಕ್ಕೆ ಬಂದಿದೆ. ನನಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ಆಕೆ ಇಲ್ಲಿಯವರೆಗೆ ಮಾಂಸ ತಿನ್ನುವ ರೂಢಿ ಚಾಲ್ತಿಯಲ್ಲಿ ಇಟ್ಟಿದ್ದಾಳೆ, ಇರಲಿ. ಆದರೀಗ ಆಕೆ, ನನಗೆ ಮಾಂಸ ತಿನ್ನಲು ತುಂಬಾ ಇಷ್ಟ ಅದರ ಹೊರತಾಗಿ ನಾನು ಜೀವಿಸಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾಳೆ. ನಾನು ಇನ್ನೊಮ್ಮೆ ಆಕೆಗೆ ಕ್ಷಮಿಸಲು ತಯಾರಿದ್ದೇನೆ, ಆಕೆಗೆ ಸದ್ಯ ಅಲ್ಟಿಮೇಟಮ್ ಕೊಟ್ಟಿದ್ದೇನೆ, ಪತಿ ಬೇಕಾ ಮಾಂಸ? ಇವೆರಡರಲ್ಲಿ ಒಂದನ್ನು ಆರಿಸಿಕೊ ಎಂದು. ಆದರೆ ನನಗೆ ಭಯವಾಗುತ್ತಿದೆ ಕಾರಣ ಆಕೆ ಮಾಂಸವನ್ನೇ ಆಯ್ಕೆ ಮಾಡಿದರೆ? ನಿಮಗೇನನ್ನಿಸುತ್ತೆ? ಎಂದು ಪ್ರಶ್ನೆ ಹಾಕಿದ್ದಾನೆ.

ಪತಿಯ ಈ ತಕರಾರಿನ ನಂತರ ನೇಟಿಜನ್ಸ್ ಗಳು ಅನೇಕ ತಮಾಷೆಯ ಉತ್ತರಗಳನ್ನು ನೀಡಿದ್ದಾರೆ. ಅನೇಕರಂತೂ ಮಾಂಸದ ಹೊರತಾಗಿ ಜೀವಿಸುವದೇ ಅಸಾಧ್ಯ ಎಂದಿದ್ದಾರೆ.

ನೋಡಿ ನೇಟಿಜನ್ಸ್ ಗಳು ನೀಡಿದ ಕೆಲವು ತಮಾಷೆಯ ಉತ್ತರಗಳು…

ಈಗ ಈ ಪತಿ- ಪತ್ನಿಯ ನಡುವಿನ ವಾದ ವಿವಾದ ಹೇಗೆ ಶಮನವಾಗುವುದು ಗೊತ್ತಿಲ್ಲ. ಯಾಕೆಂದರೆ ಇದಕ್ಕೆ ಹೊಂದಾಣಿಕೆ ಹಾಗೂ ಅರಿತು ಮಾಡಿದ ಚರ್ಚೆ ಪರಿಣಾಮಕಾರಿಯಾಗುತ್ತದೆ. ಒಂದು ವೇಳೆ ಸ್ವತಃ ನೀವೇ ಪತ್ನಿಯ ಸ್ಥಾನದಲ್ಲಿ ಇದ್ದರೆ ಯಾವುದನ್ನು ಆರಿಸಿ ಕೊಳ್ಳುತ್ತಿದ್ದೀರಿ? ನಿಮ್ಮ ಸಂಗಾತಿಗಾಗಿ ಮಾಂಸ ತಿನ್ನುವುದನ್ನು ಬಿಟ್ಟು ಬಿಡುತ್ತಿದ್ದೀರಾ? ಅಥವಾ ಸಸ್ಯಾಹಾರಿ ಪತಿಯ ಜೊತೆಗೆ ಮದುವೆಯಾಗುವುದಕ್ಕಿಂತ ಮಾಂಸವನ್ನೇ ಆರಿಸಿ ಕೊಳ್ಳುತ್ತಿದ್ದೀರಿ? ಹೇಳಿ ಫ್ರೆಂಡ್ಸ್ ಈ ಪ್ರಶ್ನೆಯನ್ನು ನೀವು ನಿಮ್ಮ ಮನಸ್ಸಿಗೆ ಕೇಳಿ ಉತ್ತರವನ್ನು ಕಾಮೆಂಟ್ ಮಾಡಿರಿ.