ಎಲ್ಲರಂತಲ್ಲ ಈ ಕಾಗೆ; ಇದು ಹಾಯ್ ಪ್ರೊಫೈಲ್ ಕಾಗೆ! ಮಲಗಲು ಮೆತ್ತನೆಯ ವೂಲ್ ಹಾಸಿಗೆಗಾಗಿ..! ನೋಡಿ ಕಾಗೆಯ ಈ ಐಡಿಯಾ ವಿಡಿಯೋದಲ್ಲಿ….

ನಿಸರ್ಗದಲ್ಲಿ ಎಲ್ಲರಿಗೂ ಜೀವಿಸುವ ಸಮನಾದ ಹಕ್ಕಿದೆ. ಆದರೆ ಮಾನವ ಮಾತ್ರ ತನ್ನ ಬುದ್ಧಿಯ ಬಲದಿಂದ ನಿಸರ್ಗದಲ್ಲಿಯ ಎಲ್ಲ ಪ್ರಾಣಿಜೀವಿಗಳ ಮೇಲೆ ದಬ್ಬಾಳಿಕೆ ಮಾಡುತ್ತಾ ಬಂದಿದ್ದಾನೆ. ನಿಸರ್ಗ ನೀಡುವ ಪ್ರತಿಯೊಂದು ಘಟಕ ತನಗೆ ಮಾತ್ರ ಬೇಕು ಎಂಬ ಅಟ್ಟಹಾಸ ಮೆರೆದಿದ್ದಾನೆ.

ಆದರೆ ಇಲ್ಲಿ ಕಾಗೆಯೊಂದು ಮಾನವನಿಗೆ ತನ್ನ ಕೃತಿಯ ಮೂಲಕ ಪ್ರಶ್ನೆ ಹಾಕಿದಂತಿದೆ. ನೈಸರ್ಗಿಕ ಸಂಪನ್ಮೂಲಗಳ ಮೇಲೆ ನಮ್ಮದು ಹಕ್ಕಿದೆ ಮತ್ತು ಅದರಲ್ಲಿ ನಮಗೂ ಪಾಲಿದೆ ಎಂಬ ಅಂಶ ಈ ಕಾಗೆ ಹೇಳುವಂತಿದೆ.

ವಿಡಿಯೋದಲ್ಲಿ ಕಂಡು ಬರುವ ಕಾಗೆಯು ಮರದ ನೆರಳಿಗೆ ಕುಳಿತ ಉಣ್ಣೆಗುರಿಯ ಉಣ್ಣೆಯನ್ನು ತನ್ನ ಚುಂಚಿನಿಂದ ಉಣ್ಣೆಗುರಿಗೆ ಗೊತ್ತಾಗದಂತೆ ಬಾಯಿಯಲ್ಲಿಯೇ ಹೇಗೆ ಸಂಗ್ರಹಿಸುತ್ತಿದೆ ನೋಡಿ. ಇದರ ಮೇಲಿಂದ ಮನ್ನುಷ್ಯನೆ ಎಲ್ಲವೂ ನಿನಗಷ್ಟೇ ಅವಶ್ಯಕತೆ ಇಲ್ಲ, ಅದರಲ್ಲಿ ನಮಗೂ ಸ್ವಲ್ಪ ಹಕ್ಕಿದೆ, ನಮಗೂ ಸ್ವಲ್ಪ ಕೊಡುತ್ತಿರು ಎಂದು ಹೇಳುವಂತಿದೆ, ಈ ವಿಡಿಯೋದಲ್ಲಿಯ ಕಾಗೆಯ ಕೃತಿ.

ವಿಡಿಯೋ ನೋಡಿ

ಪ್ರಸ್ತುತ ವಿಡಿಯೋ ನೋಡಿ ಕೆಲವು ನೆಟ್ಟಿಗರು ಈ ಕಾಗೆ ಎಲ್ಲಾ ಕಾಗೆಯಂತೆ ಇರಲಿಕ್ಕಿಲ್ಲ, ಇದು ಬಹುಶಃ ಹಾಯ್ ಪ್ರೊಫೈಲ್ ಕಾಗೆ ಇರಬಹುದೇನೋ ಎನ್ನುತ್ತಿದ್ದಾರೆ.