ಇಮ್ರಾನ್ ಖಾನ್ ಹಣಗಳಿಕೆಯ ಹೊಸ ಮಂತ್ರವನ್ನು ನೀಡಿದ್ದಾರೆ, ಏನದು ಒಮ್ಮೆ ನೀವು ಓದಿ, ಬೆಚ್ಚಿ ಬಿದ್ದೀರಿ ಜೋಕೆ!

ಲಾಹೋರ್: ಪಾಕಿಸ್ತಾನದಲ್ಲಿ ಕೊರೊನ ರೋಗ ಹೆಚ್ಚಾಗುತ್ತಿರುವ ಬೆನ್ನಲ್ಲೇ ಮಿಡತೆಗಳ ಹಾವಳಿಯೂ ಹೆಚ್ಚಾಗಿದೆ. ಸುದ್ದಿ ಮೂಲಗಳ ಪ್ರಕಾರ ಮಿಡತೆಗಳು ರೈತರ ಸಂಪೂರ್ಣ ಬೆಳೆಗೆ ಬೆಳೆಯೇ ತಿಂದು ನಾಶಮಾಡಿವೆಯಂತೆ. ಒಂದು ಕಡೆ ಮಿಡತೆಗಳ ಹಾವಳಿಯಿಂದ ರೈತರು ಚಿಂತೆಯಲ್ಲಿದ್ದರೆ ಇನ್ನೊಂದು ಕಡೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಮಿಡತೆಗಳ ಸಂದರ್ಭ ತೆಗೆದುಕೊಂಡು ವಿಚಿತ್ರ ಹೇಳಿಕೆಯೊಂದನ್ನು ನೀಡಿದ್ದಾರೆ. ಅದನ್ನು ಕೇಳಿದ ಪಾಕಿಸ್ತಾನದ ಪ್ರಜೆಗಳು ಮತ್ತಷ್ಟು ಚಿಂತಾಕ್ರಾಂತರಾಗಿದ್ದಾರೆ. ಪ್ರಧಾನಿಯ ಪ್ರಕಾರ ಮಿಡತೆಗಳ ಆಕ್ರಮಣ ದೇಶದ ಪ್ರಜೆಗಳಿಗೆ ಸುವರ್ಣ ಅವಕಾಶ ಒದಗಿಸಿದೆ. ಜನರು ಮಿಡತೆಗಳನ್ನು ಹಿಡಿದು ಕುಕ್ಕುಟಪಾಲನೆ ಮಾಡುವವರಿಗೆ ಮಾರಾಟ ಮಾಡಿ ಹಣಗಳಿಸಬಹುದಾಗಿದೆ ಎಂದಿದ್ದಾರೆ.

ದೇಶ ಈ ಸಮಯ ಹೊಸ ಹೊಸ ಸಮಸ್ಯೆಗಳಿಗೆ ತುತ್ತಾಗುತ್ತಿದೆ. ದೇಶದಲ್ಲಿ ಸದ್ಯಕ್ಕೆ ಮಿಡತೆಗಳ ಆಕ್ರಮಣ ತುಂಬಾ ಹೆಚ್ಚಿದೆ. ಇದೆ ಯೋಗ್ಯ ಸಮಯ, ಜನರು ಇವುಗಳನ್ನು ಹಿಡಿದು ಮಾರಾಟ ಮಾಡಿ ಹಣವನ್ನು ಗಳಿಸಬೇಕು. ಜನ ಒಂದು ವೇಳೆ ಮಿಡತೆಗಳನ್ನು ಹಿಡಿದು ಕುಕ್ಕುಟಪಾಲನೆ ಮಾಡುವವರಿಗೆ ಮಾರಾಟ ಮಾಡಿದರೆ ಹಣ ಗಳಿಕೆಯ ಹೊಸ ಮಾರ್ಗ ಶೋಧಿಸಿದಂತಾಗುತ್ತದೆ. ಕುಕ್ಕುಟಪಾಲನೆ ಮಾಡುವವರು 15 ರೂಪಾಯಿ ಪ್ರತಿ ಕಿಲೋ ದರದಂತೆ ಖರೀದಿಸಿ ಅವರು ತಮ್ಮ ಕೋಳಿಗಳಿಗೆ ಆಹಾರದ ರೂಪದಲ್ಲಿ ಕೊಡುವರು.

ಕ್ಯಾಬಿನೆಟ್ ಮೀಟಿಂಗ್ ನ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುವಾಗ ಈ ಮೇಲಿನ ಉಪಾಯವನ್ನು ನೀಡಿದರು. ಮಿಡತೆಗಳ ವಿರುದ್ಧ ಹೋರಾಡಲು ಈ ಪ್ರಸ್ತಾವನೆಯ ಸಮರ್ಥನೆ ಮಾಡಿ ನಂತರ ಜನರಿಗೆ ಮಿಡತೆಗಳನ್ನು ಹಿಡಿಯಲು ಆರ್ಥಿಕವಾಗಿ ಸಹಾಯ ಮಾಡುವ ಮಾತನ್ನು ಹೇಳಲು ಪ್ರಧಾನಿ ಮರೆತಿಲ್ಲ.

P tv ನ್ಯೂಜ್ ಚಾನೆಲ್ ಪ್ರಕಾರ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತದಲ್ಲಿ ಮಿಡತೆಗಳ ಆಕ್ರಮಣ ಜೋರಾಗುತ್ತ ಮುನ್ನಡೆದಿದೆ. ಇಲ್ಲಿಯ 31 ಜಿಲ್ಲೆಗಳಲ್ಲಿ ಮಿಡತೆಗಳ ದಾಳಿ ವಿಪರೀತವಾಗಿ ಬೆಳೆಯು ಸಿಕ್ಕಾಪಟ್ಟೆ ನಾಶವಾಗಿದೆ. ಖೈಬರ್ ಪಕ್ತೂನಕ್ವಾದ 10, ಪಂಜಾಬ್ ಪ್ರಾಂತದ 4, ಮತ್ತು ಸಿಂಧ ಪ್ರಾಂತದ 7 ಜಿಲ್ಲೆಗಳು ಮಿಡತೆಯ ಹಾವಳಿಯಿಂದ ಕಂಗೆಟ್ಟಿವೆ.