ಸಾವಿನ ದವಡೆಯಲ್ಲಿದ್ದ ಬೆಕ್ಕುಗಳನ್ನು ಉಳಿಸಲು ಈ ದೇಶಿ ಐಡಿಯಾ ವರ್ಕ್ ಔಟ್! ನೋಡಿ ವೈರಲ್ ವಿಡಿಯೋ
ಪ್ರಾಣಿಗಳ ಮೇಲೆ ದಯೆ ತೋರಬೇಕು, ಅಗತ್ಯ ಬಿದ್ದವರಿಗೆ ಸಹಾಯ ಮಾಡಬೇಕು ಎಂಬ ಮಾತಗಳನ್ನು ಶಾಲೆಯಿಂದಲೇ ಎಲ್ಲರೂ ಕಲಿತುಕೊಂಡು ಬರುತ್ತೇವೆ. ಈ ರೀತಿಯ ವಿಚಾರಗಳು ಕೆಲವೊಮ್ಮೆ ವಿವಿಧ ಪ್ರಾಣಿಗಳ ಜೀವಗಳನ್ನು ಉಳಿಸಲು ಸಹಾಯವಾಗುತ್ತದೆ.
ಈ ವಿಡಿಯೋ ಚರ್ಚೆಯಲ್ಲಿ ಬರುವ ಕಾರವೇನೆಂದರೆ, ವ್ಯಕ್ತಿಯೊಬ್ಬನು ಸಾವಿನ ದವಡೆಯಲ್ಲಿ ಸಿಲುಕಿದ ಎರಡು ಬೆಕ್ಕುಗಳನ್ನು ಉಳಿಸುವ ಸಲುವಾಗಿ ಮಾಡಿದ ಪ್ರಯತ್ನ ಗಮನಾರ್ಹ ಎನ್ನಬಹುದು. ಇದನು ನೋಡಿದಾಗ ಆತನ ಐಡಿಯಾಕ್ಕೆ ನೀವೂ ಸಹ ಬೆಲೆ ನೀಡೆ ನೀಡುತ್ತೀರಾ.
ಎರಡು ಬೆಕ್ಕುಗಳು ಎತ್ತರದ ಮೇಲಿರುವ ವಾಯರ್ ಗೆ ನೇತಾಡುತ್ತಿವೆ. ಎತ್ತರದ ಮೇಲಿರುವ ವಾಯರನಿಂದ ಕೆಳಗೆ ಬೀಳುವ ಭೀತಿಯಲ್ಲಿ ಎರಡು ಬೆಕ್ಕುಗಳು ಪ್ರಾಣ ಭಯದಿಂದ ವಾಯರಿಗೆ ನಾಲ್ಕು ಕಾಲುಗಳಿಂದ ಗಟ್ಟಿಯಾಗಿ ಹಿಡಿದಿವೆ. ಇದನ್ನು ನೋಡಿದ ವ್ಯಕ್ತಿಯೊಬ್ಬ ಅವುಗಳನ್ನು ರಕ್ಷಿಸಲು ಮುಂದಾಗುತ್ತಾನೆ. ಅದಕ್ಕಾಗಿ ಆತ ಉಪಯೋಗಿಸಿದ ಐಡಿಯಾ ಶುದ್ಧ ದೇಸಿ ಆಗಿದೆ. ಒಂದು ಬಕೆಟ್ ತೆಗೆದುಕೊಂಡು ಅದಕ್ಕೆ ಕೋಲನ್ನು ಕಟ್ಟಿದ್ದಾನೆ. ವಿಶೇಷವೆಂದರೆ ಈ ಎರಡು ಬೆಕ್ಕುಗಳು ನೇತಾಡುವದನ್ನು ನೋಡಿದ ನಂತರ, ಅವುಗಳು ಕೆಳಗೆ ಬೀಳುವ ಮೊದಲು ಥಟ್ಟನೆ ಅದನ್ನು ತಯಾರಿಸಿದ್ದಾನೆ. ಮತ್ತು ಈ ಟಾಸ್ಕ್ ಲ್ಲಿ ಆತ ಯಶಸ್ವಿಯೂ ಆಗಿದ್ದಾನೆ. ನಿಜವಾಗಿಯೂ ಈತ ಹೊಗಳಿಕೆಗೆ ಪಾತ್ರ ನಾಗಿದ್ದಾನೆ. ಇನ್ನೊಂದು ಗಮನ ಹರಿಸಬೇಕಾದ ವಿಷಯವೆಂದರೆ ಬೆಕ್ಕುಗಳು ಸಹ ಜಾಣವಾಗಿದ್ದವು. ಕಾರಣ ಎರಡು ಬೆಕ್ಕುಗಳು ಸರಿಯಾಗಿ ಬಕೆಟ್ ನಲ್ಲಿಯೇ ಬಿದ್ದಿವೆ.
ನೋಡಿ ಈ ವಿಡಿಯೋ….
“Be kind whenever possible.
— Susanta Nanda (@susantananda3) December 3, 2021
It’s always possible “ pic.twitter.com/q8LQWAC4ux