ಒಳ್ಳೆಯದಕ್ಕೆ ಪ್ರತಿಫಲ ಒಳ್ಳೆಯದೇ ಸಿಗುತ್ತದೆ; ಅಜ್ಜಿಯಿಂದಾಗಿ ಉಳಿಯಿತು ಈ ಜೋಡಿಯ ಜೀವ? ನೋಡಿ ಈ ಅದ್ಭುತ ವೈರಲ್ ವಿಡಿಯೋ!

ಜೀವನದಲ್ಲಿ ನಾವು ಇನ್ನೊಬ್ಬರಿಗಾಗಿ ಏನಾದರೂ ಒಳ್ಳೆಯದನ್ನು ಮಾಡಿದರೆ ಅಥವಾ ನೀಡಿದರೆ ಪ್ರತಿಫಲವಾಗಿ ನಮಗೂ ಸಹ ಒಳ್ಳೆಯದೇ ಆಗುತ್ತದೆ ಎಂಬ ಮಾತುಗಳು ಹಿರಿಯರಿಂದ, ಅನುಭವಿಗಳಿಂದ ಎಷ್ಟೋ ಸಲ ಕೇಳಿದ್ದೇವೆ. ಇದಕ್ಕೆ ಸರಿಯಾದ ಉದಾಹರಣೆಯಂತೆ ತೋರುವ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಯಾರಿಗಾದರೂ ಮಾಡಿದ ಸಹಾಯ ಯಾವಾಗ ಉಪಯೋಗಕ್ಕೆ ಬರುತ್ತದೆ ಎಂಬುದು ಗೊತ್ತಾಗುವುದಿಲ್ಲ.

ವಿಡಿಯೋದಲ್ಲಿ ಒಂದು ಜೋಡಿ ಮತ್ತು ಅಜ್ಜಿ ಇದ್ದಾಳೆ. ಜೋಡಿಯು ರಸ್ತೆಯ ಬದಿಗೆ ನಿಂತು ತಮ್ಮ ತಮ್ಮಲ್ಲೇ ವಾದ ಮಾಡುತ್ತಿದ್ದಾರೆ. ಅಷ್ಟರಲ್ಲಿ ಒಬ್ಬಳು ವೃದ್ಧ ಮಹಿಳೆ ಕೋಲಿನ ಸಹಾಯದಿಂದ ಅಲ್ಲಿಗೆ ಬರುತ್ತಾಳೆ. ಆಗ ಆಕೆಯ ಕೈಯಲ್ಲಿರುವ ತರಕಾರಿಯ ಕೈ ಚೀಲವು ಕೆಳಗೆ ಬಿದ್ದು ಕೈಚೀಲದಲ್ಲಿರುವ ತರಕಾರಿ ರಸ್ತೆಯ ಮೇಲೆ ಹರಡುತ್ತದೆ. ಅಜ್ಜಿಯಿಂದ ಸ್ವಲ್ಪವೇ ಅಂತರದಲ್ಲಿ ಈ ಜೋಡಿಯು ತಮ್ಮತಮ್ಮಲ್ಲಿ ವಿವಾದ ಮಾಡುತ್ತಿರುತ್ತಾರೆ. ಆಗ ಹುಡುಗಿಯ ಗಮನ ಅಜ್ಜಿಯ ಕಡೆಗೆ ಹೋದಾಗ ಆಕೆ ಅಜ್ಜಿಗೆ ಸಹಾಯ ಮಾಡಲು ಮುಂದೆ ಸರಿಯಬೇಕೆಂದಾಗ ಆಕೆಯ ಪಾರ್ಟ್ನರ್ ಆಕೆಯನ್ನು ಮುಂದೆ ಹೋಗಲು ಬಿಡುವುದಿಲ್ಲ. ಆದರೂ ಹುಡುಗಿಯು ಆತನಿಂದ ಬಿಡಿಸಿಕೊಂಡು ಅಜ್ಜಿಗೆ ಸಹಾಯ ಮಾಡಲು ಮುಂದೆ ಸರಿಯುತ್ತಾಳೆ. ಆಗ ಹುಡುಗನು ಸಹ ಆಕೆಯ ಹಿಂದೆ ಹೋಗುತ್ತಾನೆ. ಅವರಿಬ್ಬರು ಯಾವ ಕಂಬದ ಕೆಳಗೆ ನಿಂತು ಜಗಳ ಆಡುತ್ತಿದ್ದರು ಸರಿಯಾಗಿ ಅದರ ಕೆಳಗೆ ಮೇಲಿನಿಂದ ಒಂದು ದೊಡ್ಡದಾದ ಆಡ್ ಬೋರ್ಡ್ (ಜಾಹೀರಾತು ಫಲಕ) ದೊಪ್ಪೆಂದು ಕೆಳಗೆ ಬೀಳುತ್ತದೆ. ಮೊದಲು ಹುಡುಗಿ ಆಮೇಲೆ ಹುಡುಗ ಇಬ್ಬರು ಅದೃಷ್ಟವಶಾತ್ ಅಲ್ಲಿಂದ ಪಾರಾಗಿದ್ದರು. ಇಷ್ಟಾದ ಮೇಲೆ ಹುಡುಗನಿಗೆ ತನ್ನ ತಪ್ಪಿನ ಅರಿವಾಗಿ ಆತ ಅಜ್ಜಿಯ ಹಣೆಯ ಮೇಲೆ ಮುತ್ತು ಕೊಟ್ಟಿದ್ದಾನೆ.

ಈ ಸುಂದರ ಹಾಗೂ ಅದ್ಭುತವಾದ ವಿಡಿಯೋವನ್ನು ಐಎಎಸ್ ಅಧಿಕಾರಿಯಾದ ಅವನೀಶ್ ಶರಣ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ಶೇರ್ ಮಾಡಿದ್ದಾರೆ. ‘ಒಬ್ಬರಿಗೆ ಒಳ್ಳೆಯದನ್ನು ಮಾಡಿದರೆ ಬದಲಿಗೆ ಒಳ್ಳೆಯದೇ ಸಿಗುತ್ತದೆ’ ಎಂಬ ಕ್ಯಾಪ್ಶನ್ ನೀಡಿದ್ದಾರೆ. ಪ್ರಸ್ತುತ ವಿಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಜನರು ನೋಡಿದ್ದಾರೆ ಮತ್ತು ಸಾಕಷ್ಟು ಜನರು ಲೈಕ್ಸ್ ಮಾಡಿದ್ದಾರೆ.

ನೋಡಿ ಈ ವಿಡಿಯೋ…