ಹಸೆಮಣೆಯಲ್ಲೇ ‘ಮದುವೆ ಯಾಕೆ ಬೇಕು?’ ವಧು ಕೇಳಿದ ಪ್ರಶ್ನೆಗೆ ವರ ನೀಡಿದ ಉತ್ತರ ಕತರ್ನಾಕ್! ಮುಕ್ತವಾಗಿ ನಕ್ಕ ನೇಟಿಜನ್ಸ್ ಗಳು! ನೋಡಿ ವೈರಲ್ ವಿಡಿಯೋ…

ಸದ್ಯ ಮದುವೆ ಸಮಾರಂಭಗಳು ತುಂಬಾ ಜೋರಾಗಿ ನಡೆದಿವೆ. ಅದರ ಜೊತೆಗೆ ಮದುವೆಯಲ್ಲಿಯ ಕೆಲವು ವಿಡಿಯೋಗಳು ಸಹ ವಿವಿಧ ಕಾರಣಕ್ಕಾಗಿ ವೈರಲ್ ಆಗುತ್ತಿವೆ. ಹಾಗೂ ನೇಟಿಜನ್ಸ್ ಗಳ ಮನಸ್ಸನ್ನು ಗೆಲ್ಲುತ್ತಿವೆ.

ಈಗ ಇನ್ನೊಂದು ಮದುವೆಯ ಸಮಾರಂಭದಲ್ಲಿಯ ವರ ವಧುವಿನ ವಿಡಿಯೋ ಒಂದು ಸದ್ಯ ತುಂಬಾ ವೈರಲ್ ಆಗುತ್ತಿದೆ. ಕಲ್ಯಾಣ ಮಂಟಪದಲ್ಲಿ ವಧು ವರನಿಗೆ ಕೇಳಿದ ಪ್ರಶ್ನೆ ಮತ್ತು ಅದಕ್ಕೆ ವರ ನೀಡಿದ ತಮಾಷೆಯ ಉತ್ತರ ಕೇಳಿ ನಿಮಗೂ ನಗು ಬರುತ್ತದೆ.

ಪ್ರಸ್ತುತ ವಿಡಿಯೋವನ್ನು ‘ದ ವೆಡ್ಡಿಂಗ್ ಬ್ರಿಗೇಡ್’ ಹೆಸರಿನ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಇಲ್ಲಿಯವರೆಗೆ ಸಾವಿರಾರು ಜನರು ಈ ವಿಡಿಯೋವನ್ನು ನೋಡಿದ್ದಾರೆ.

ಕಲ್ಯಾಣ ಮಂಟಪದಲ್ಲಿ, ವಧು ವರನಿಗೆ ‘ಮದುವೆ ಯಾಕೆ ಮಾಡಿಕೊಳ್ಳುತ್ತಿದ್ದೀರಿ’? ಎಂದು ಕೇಳಿದ್ದಾಳೆ. ಅದಕ್ಕೆ ಉತ್ತರವಾಗಿ ವರನು ಮುಕ್ತವಾಗಿ, ‘ಕಾರಣ ನನಗೆ ಶಾಂತತೆ ಬೇಡವಾಗಿದೆ’ ಎಂದು ಉತ್ತರಿಸಿದ್ದಾನೆ. ವರ ನೀಡಿದ ಈ ಉತ್ತರ ಕೇಳಿ ಅಲ್ಲಿ ನೆರೆದವರು ಎಲ್ಲರೂ ಹಾಸ್ಯದ ಕಡಲಲ್ಲಿ ತೇಲಿದ್ದಾರೆ. ಜೊತೆಗೆ ವಧು-ವರ ಇಬ್ಬರೂ ಸಹ ನಕ್ಕಿದ್ದಾರೆ.

ನೋಡಿ ಈ ವಿಡಿಯೋ…