Video: ತಾನು ಸಾಕಿದ ಮಂಗನನ್ನು ಕಟಿಂಗ್ ಮಾಡಿಸಲು ಸಲೂನ್ ಗೆ ಕರೆದೊಯ್ದ ಮಾಲೀಕ, ಕಟಿಂಗ್ ಶಾಪ್ ನಲ್ಲಿ ಮಂಗ ಮಾಡಿದ್ದೇನು? ನೀವೇ ನೋಡಿ!
ಇಂದಿನ ಯಾಂತ್ರಿಕ ಯುಗದಲ್ಲಿ ಪ್ರತಿಯೊಬ್ಬರು ಸಮಾಜಿಕ ಜಾಲತಾಣಗಳಲ್ಲಿ ಸದಾ ನಿರತರಾಗಿರುತ್ತಾರೆ. ಇಂದಿನ ಜನರು ತಮ್ಮ ಮನೋರಂಜನೆಗಾಗಿ ಸಮಾಜಿಕ ಜಾಲತಾಣಗಳ ಉಪಯೋಗ ಮಾಡುತ್ತಾರೆ ಇನ್ನೂ ಕೆಲವರು ತಮ್ಮ ಜ್ಞಾನದ ವೃದ್ಧಿಗಾಗಿ ಈ ಜಾಲತಾಣಗಳ ಉಪಯೋಗ ಮಾಡುತ್ತಾರೆ. ಇಂದಿನ ಜನರು ಮಿಡಿಯಾಗಳು ಯಾವ ಕಾರಣಕ್ಕಾಗಿ ಉಪಯೋಗ ಮಾಡುತ್ತಾರೆ ಎಂಬುದು ಹೇಳಲು ಸಾಧ್ಯವಿಲ್ಲ ಏಕೆಂದರೆ ಪ್ರತಿಯೊಬ್ಬರ ಉದ್ದೇಶ ಬೇರೆ ಬೇರೆ ಯಾಗಿರುತ್ತದೆ.
ಸದ್ಯದ ಯುಗದಲ್ಲಿ ಪ್ರಾಣಿ ಸಾಕುವದು ಇದು ಸಹ ಒಂದು ಹವ್ಯಾಸ ವಾಗಿದೆ. ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಒಂದಲ್ಲ ಒಂದು ಪ್ರಾಣಿ ಸಾಕಿರುತ್ತಾರೆ. ಕೆಲವರು ಬೆಕ್ಕು, ನಾಯಿ, ಇಲಿ, ಕುರಿ ಸಾಕಿದ್ದರೆ ಇನ್ನೂ ಕೆಲವರು ಸಿಂಹ, ಹುಲಿ, ಚಿರತೆ, ನರಿ ಮುಂತಾದ ಪ್ರಾಣಿಗಳು ಸಾಕುತ್ತಾರೆ. ಇದಲ್ಲದೆ ಕೆಲವರು ಪ್ರಾಣಿ ಸಾಕಾಣಿಕೆ ಮಾಡಿ ಇದೊಂದು ಉದ್ಯೋಗದಲ್ಲಿ ಸಹ ರೂಪಾಂತರ ಮಾಡುತ್ತಾರೆ. ಎಮ್ಮೆ, ಕುರಿ, ಆಕಳು ಈ ರೀತಿಯ ಪ್ರಾಣಿಗಳನ್ನು ದೊಡ್ಡ ಪ್ರಮಾಣದಲ್ಲಿ ಸಾಕಿ ಅವುಗಳಿಂದ ಆದಾಯ ಪಡೆಯುತ್ತಾರೆ.
ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೇ. ಪ್ರಸ್ತುತ ವಿಡಿಯೋ ಒಂದು ಮಂಗದ ವಿಡಿಯೋ ಆಗಿದ್ದು ಆ ವಿಡಿಯೋ ನೋಡಿದರೆ ನೀವು ಸಹ ನಗದೆ ಇರಲಾರಿರಿ. ಈ ವಿಡಿಯೋದಲ್ಲಿ ಒಬ್ಬ ಮಾಲೀಕ ತನ್ನ ಗಡ್ಡ ಮತ್ತು ಕೂದಲು ಕಟಿಂಗ್ ಮಾಡಿಕೊಳ್ಳಲು ಬಳಿಯಲ್ಲಿದ ಸಲೂನ್ ಅಂಗಡಿಗೆ ಹೋಗುತ್ತಾನೆ ಹೋಗುವಾಗ ತಾನು ಸಾಕಿದ ಮಂಗನನ್ನು ಸಹ ಕರೆದುಕೊಂಡು ಹೋಗುತ್ತಾನೆ. ತಾನು ಸೆವಿಂಗ್ ಮಾಡಿಕೊಂಡ ನಂತರ ಆತನಿಗೆ ತಲೆಯಲ್ಲಿ ಒಂದು ವಿಚಾರ ಬರುತ್ತೆ ತನ್ನ ಜೊತೆಗೆ ಕರೆದುಕೊಂಡು ತಂದ ಮಂಗನನ್ನು ಸಹ ಸೆವಿಂಗ್ ಮಾಡಿಸಿದರೆ ಹೇಗಿರುತ್ತೆ? ಅಂತ ವಿಚಾರ ಮಾಡಿ ಆ ಸೆವಿಂಗ್ ಮಾಡುವ ವ್ಯಕ್ತಿಗೆ ಮಂಗನನ್ನು ಸಹ ಸೆವಿಂಗ್ ಮಾಡಲು ಹೇಳುತ್ತಾನೆ. ಮಾಲೀಕನ ಆದೇಶದ ಮೇರೆಗೆ ಸೆವಿಂಗ್ ಮಾಡುವ ವ್ಯಕ್ತಿ ಮಂಗನನ್ನು ಚೇರ್ ಮೇಲೆ ಕೂಡಿಸಿ ಕೈಯಲ್ಲಿ ಕತ್ತರಿ ಮತ್ತು ಬಾಚಣಿಕೆ ತಗೆದುಕೊಂಡು ಮಂಗನ ಕೂದಲು ಕತ್ತರಿಸಲು ಹೋಗುತ್ತಾನೆ ಅಷ್ಟರಲ್ಲಿ ಮಂಗ ಮಾಡಿದ್ದೇನು?
ವಿಡಿಯೋ ನೋಡಿ….
View this post on Instagram
ಇನ್ನೇನು ಕೈಯಲ್ಲಿ ಕತ್ತರಿ ಮತ್ತು ಬಾಚಣಿಕೆ ಹಿಡಿದುಕೊಂಡು ಕೂದಲು ಕತ್ತರಿಸಲು ಹೋದಾಗ ಮಂಗ ಕತ್ತರಿಯ ಧ್ವನಿ ಕೇಳಿ ಕೋಪಗೊಳ್ಳುತ್ತೇ ಕೋಪಗೊಂಡು ಆತನನ್ನು ಕಚ್ಚಲು ಹೋಗುತ್ತೆ ಇದನ್ನರಿತ ವ್ಯಕ್ತಿ ಮಂಗನಿಂದ ದೂರ ಹೋಗುತ್ತಾನೆ. ತದನಂತರ ಅಲ್ಲಿದ್ದ ಮಾಲೀಕ ಆತನಿಗೆ ಒಂದು ಸಲಹೆ ನೀಡುತ್ತಾನೆ. ಕತ್ತರಿಯಲ್ಲಿ ಕತ್ತರಿಸದೆ ಮಷಿನ್ ಮೂಲಕ ಸೆವಿಂಗ್ ಮಾಡಲು ಸಲಹೆ ನೀಡುತ್ತಾನೆ. ಆಗ ಸೆವಿಂಗ್ ಮಾಡುವ ವ್ಯಕ್ತಿ ಸಾವಕಾಶವಾಗಿ ಮಷಿನ್ ನಿಂದ ಸೆವಿಂಗ್ ಮಾಡಲು ಶುರು ಮಾಡುತ್ತಾನೆ ಆದರೂ ಸಹ ಮಂಗ ತನ್ನ ಹಲ್ಲನ್ನು ತೋರುತ್ತಾ ಆತನ ಮೇಲೆ ಸಿಟ್ಟಿಗೆ ಬರುತ್ತದೆ ಆದರೆ ಅಲ್ಲಿದ್ದ ಮಾಲೀಕ ಅದಕ್ಕೆ ಸುಮ್ಮನಿರಲು ತಿಳಿಸುತ್ತಾನೆ ಮಾಲೀಕನ ಆದೇಶದ ಮೇರೆಗೆ ಮಂಗ ಸುಮ್ಮನ್ನಿದ್ದು ಸೆವಿಂಗ್ ಮಾಡಿಕೊಳ್ಳುತ್ತದೆ.