ಈ ಸ್ವೇಟರ್ ಖರೀದಿಸಬೇಕಾದರೆ ಎಣಿಸಬೇಕಾಗುವುದು ಇಷ್ಟೊಂದು ಲಕ್ಷ ರೂಪಾಯಿಗಳನ್ನು! ನೋಡಿ ಈ ಬೆಲೆಬಾಳುವ ಸ್ವೇಟರ್ ವಿಶೇಷತೆ….
ಕ್ರಿಸ್ಮಸ್ ಹಬ್ಬದ ತಯಾರಿಯು ಎಲ್ಲೆಡೆ ಜೋರಾಗಿ ನಡೆದಿದೆ. ಈ ಹಬ್ಬಕ್ಕಾಗಿ ಅನೇಕ ಹೊಸ ಹೊಸ ಉಡುಪುಗಳು ಮಾರ್ಕೆಟಿನಲ್ಲಿ ಈಗಾಗಲೇ ಬಂದು ಗ್ರಾಹಕರನ್ನು ತಮ್ಮೆಡೆಗೆ ಆಕರ್ಷಿಸುತ್ತಿವೆ. ಹಬ್ಬಕ್ಕಾಗಿ ಅಥವಾ ಹಬ್ಬದ ನೆನಪಿಗಾಗಿ ಕೆಲವರಂತೂ ಅನೇಕ ವಿಶೇಷ ವಸ್ತುಗಳನ್ನು ಅಥವಾ ಉಡುಪುಗಳನ್ನು ಎಷ್ಟೇ ಬೆಲೆ ನೀಡಿ ಖರೀದಿಸಬೇಕಾಗಿ ಬಂದರೂ ವಿಚಾರ ಮಾಡದೆ ಅದನ್ನು ಖರೀದಿಸಿ ಬಿಡುತ್ತಾರೆ. ಇಂಥವರಿಗಾಗಿ ಕಂಪನಿಯೊಂದು ವಿಶೇಷ ಸ್ವೆಟರ್ ನಿರ್ಮಿತಿ ಮಾಡಿದೆ. ಈ ಸ್ವೇಟರ್ ವಿಶೇಷತೆಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಈ ಸ್ವೇಟರ್ ಮೇಲೆ ಬೆಲೆಬಾಳುವ ರತ್ನಗಳನ್ನು ಜಡೆಯಲಾಗಿದೆ. ಇದು ಜಗತ್ತಿನ ಎಲ್ಲಕ್ಕೂ ದುಬಾರಿಯಾದ ಸ್ವೇಟರ್ ಆಗಿದೆ ಎಂದು ಹೇಳಲಾಗುತ್ತಿದೆ. 33 ವರ್ಷದ ಎಡಿನ್ ಲಿಬನ್ ಹೆಸರಿನ ವ್ಯಕ್ತಿಯೊಬ್ಬ ಈ ಸ್ವೇಟರ್ ತಯಾರಿಸಲು 3000 ಗಂಟೆಗಳನ್ನು ತೆಗೆದುಕೊಂಡು ತುಂಬಾ ಪರಿಶ್ರಮದಿಂದ ತಯಾರಿಸಿದ್ದಾನೆ. ಇದನ್ನು ತಯಾರಿಸಲು ತಾನು ಜೀವನದಲ್ಲಿ ಗಳಿಸಿದ ಎಲ್ಲ 7 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾನೆ. ಈ ಸ್ವೇಟರ್ ಮೇಲೆ ರೇನ್ ಡಿಯರ್ ಆರ್ಟ್ ಹೆಣೆದು ಅದರ ಸುತ್ತಮುತ್ತ ಬೆಲೆಬಾಳುವ ವಜ್ರಗಳ ಎನ್ ಕ್ರಿಸ್ಟೆಡ್ ಸಿಲ್ವರ್ ಸ್ಟಾರನಿಂದ ಸುಶೋಭಿಸಿದ್ದಾನೆ. ಇಟಾಲಿಯನ್ ಸಿಲ್ಕ್ ಮೇಲೆ 24 ಕ್ಯಾರೆಟ್ ನ ಚಿನ್ನದ ದಾರವನ್ನು ಉಪಯೋಗಿಸಿ ಹೆಣೆದಿದ್ದಾನೆ. ಇದರ ಮೇಲೆ ಸಾವಿರಾರು ಸ್ವಾರೋಸ್ಕಿ ಕ್ರಿಸ್ಟಲ್ಸ್ ಸಹ ಉಪಯೋಗಿಸಿದ್ದಾನೆ. ಇದು ಅತ್ಯಂತ ಸಾಫ್ಟ್ ಹಾಗು ಶೈನಿ ಆಗಿದೆ. ಇದಕ್ಕೂ ಮೊದಲು ಟಿಪ್ಸಿ ಎಲ್ಬ್ಸ್ ಹೆಸರಿನ ವ್ಯಕ್ತಿಯೊಬ್ಬ ತಯಾರಿಸಿದ ಸ್ವೇಟರ್ ಬೆಲೆ 25 ಲಕ್ಷ ರೂಪಾಯಿ ಹೊಂದಿತ್ತು. ಎಡನ್ ಗೆ 2020ರಲ್ಲಿ ಈ ರೀತಿಯ ಸ್ವೇಟರ್ ತಯಾರಿಸುವ ಕಲ್ಪನೆ ಬಂದಿತ್ತು. 2020 ಡಿಸೆಂಬರ್ ನಲ್ಲಿ ಶುರು ಮಾಡಿದ ಈ ಕೆಲಸ ನವೆಂಬರ್ 2021ರಲ್ಲಿ ಮುಗಿದಿದೆ. ಇದನ್ನು ಸಂಪೂರ್ಣವಾಗಿ ಕೈಯಿಂದಲೇ ಹೆಣೆದು ತಯಾರಿಸಿದ್ದಾನೆ. ಈ ಕ್ರಿಸ್ಮಸ್ ಸ್ವೇಟರ್ ಬೆಲೆ 30 ಸಾವಿರ ಯುರೋ ಎಂದರೆ ಸುಮಾರು ಭಾರತದ 30 ಲಕ್ಷ ರೂಪಾಯಿಗಳು. ಈ ಸ್ವೇಟರ್ ಮಾರಾಟದಿಂದ ಬಂದ ಹಣವನ್ನು ನ್ಯಾಷನಲ್ ಹೆಲ್ತ್ ಸರ್ವಿಸ್ ಗೆ ದೇಣಿಗೆಯ ಸ್ವರೂಪದಲ್ಲಿ ನೀಡಲಾಗುವುದೆಂದು ಹೇಳಲಾಗಿದೆ.