ನನ್ನ ಧರ್ಮವನ್ನು ತ್ಯಜಿಸುತ್ತಿದ್ದೇನೆ, ಟ್ರೋಲರ್ಸ್ ಗಳಿಂದಾಗಿ ಮಲಯಾಳಿ ನಿರ್ಮಾಪಕ ಅಲಿ ಅಕ್ಬರ್ ರೋಷ! ಹಿಂದೂ ಧರ್ಮ ಸ್ವೀಕರಿಸುವ ಘೋಷಣೆ…
ಭಾರತದ ಸಿಡಿಎಸ್ ಬಿಪಿನ್ ರಾವತ್ ಅವರು ಹುತಾತ್ಮರಾದ ಕಾರಣಕ್ಕೆ ಅಲಿ ಅಕ್ಬರ್ ಅವರು ಫೇಸ್ ಬುಕ್ ಲೈವ್ ನಲ್ಲಿ ಬಂದಿದ್ದರು. ಆ ಸಂದರ್ಭದಲ್ಲಿ ಕೆಲವು ಧರ್ಮಾಂಧರು ನಗುತ್ತಿರುವ ಇಮೋಜಿಗಳನ್ನು ಪೋಸ್ಟ್ ಮಾಡಿದ್ದರು.
ಸಿಡಿಎಸ್ ಜನರಲ್ ಬಿಪಿನ್ ರಾವತ್ ಸಹಿತ 13 ಜವಾನರ ವೀರ ಮರಣದಿಂದಾಗಿ ಸಂಪೂರ್ಣ ದೇಶವು ದುಃಖದಲ್ಲಿ ಮುಳುಗಿತ್ತು. ಒಂದು ಕಡೆ ಇಡೀ ದೇಶವೇ ತಮ್ಮದೇ ಆದ ರೀತಿಯಲ್ಲಿ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿರುವಾಗ ಇನ್ನೊಂದು ಕಡೆ ದುಷ್ಟಶಕ್ತಿಗಳು ಹಾಗೂ ಮೂಲಭೂತವಾದಿಗಳು ಬಿಪಿನ್ ರಾವತ್ ಅವರ ನಿಧನದ ನಂತರ ಸಂತೋಷವನ್ನು ವ್ಯಕ್ತ ಮಾಡುತ್ತಿದ್ದರು. ಪ್ರಸ್ತುತ ಈ ವರ್ತನೆ ಮಲಯಾಳಂ ಚಲನಚಿತ್ರ ನಿರ್ಮಾಪಕರಾದ ಅಲಿ ಅಕ್ಬರ್ ಅವರಿಗೆ ಸರಿ ಎನಿಸಿಲ್ಲ. ಈ ಪ್ರಕರಣದಿಂದ ಅವರ ಮನಕ್ಕೆ ತುಂಬಾ ನೋವೆನಿಸಿದೆ. ಇಂತಹ ಪರಿಸ್ಥಿತಿಯಿಂದಾಗಿ ಅಲಿ ಅಕ್ಬರ್ ಅವರು ತಮ್ಮ ಮುಸ್ಲಿಂ ಧರ್ಮವನ್ನು ತ್ಯಜಿಸುವ ಬಗ್ಗೆ ಘೋಷಣೆ ಮಾಡಿದ್ದಾರೆ. ಜೊತೆಗೆ ತಮ್ಮ ಪತ್ನಿಯ ಸಮೇತವಾಗಿ ಹಿಂದೂ ಧರ್ಮವನ್ನು ಸ್ವೀಕರಿಸುವ ಬಗ್ಗೆ ಹೇಳಿಕೆ ನೀಡಿದ್ದಾರೆ. ನಿರ್ಮಾಪಕ ಅಲಿ ಅಕ್ಬರ್ ಅವರು ಫೇಸ್ ಬುಕ್ ಲೈವ್ ನಲ್ಲಿ ಇಸ್ಲಾಮನ್ನು ತ್ಯಾಗ ಮಾಡುತ್ತಿರುವುದಾಗಿ ಹೇಳಿದ್ದಾರೆ.

ಅಲಿ ಅಕ್ಬರ್ ಅವರು ಇದಕ್ಕೂ ಮೊದಲು ಬಿಪಿನ್ ರಾವತ್ ಅವರು ವೀರಗತಿ ಪ್ರಾಪ್ತವಾದ ಕಾರಣಕ್ಕಾಗಿ ಫೇಸ್ ಬುಕ್ ಲೈವ್ ನಲ್ಲಿ ಬಂದಿದ್ದರು. ಆ ಸಂದರ್ಭದಲ್ಲಿ ಕೆಲವು ಧರ್ಮಾಂಧರು ನಗುತ್ತಿರುವ ಇಮೋಜಿಗಳನ್ನು ಪೋಸ್ಟ್ ಮಾಡಿದ್ದರು. ಅದೇ ಸಂದರ್ಭದಲ್ಲಿ ಜನರಲ್ ಬಿಪಿನ್ ರಾವತ್ ಅವರ ಬಗ್ಗೆ ಹಗುರವಾದ ಭಾಷೆಯಲ್ಲಿ ಟೀಕೆ ಮಾಡಿದ್ದರು. ಜನರ ಈ ಕೀಳು ಮಟ್ಟದ ವೃತ್ತಿಯಿಂದಾಗಿ ಅಲಿ ಅಕ್ಬರ್ ಅವರ ಭಾವನೆಗೆ ತುಂಬಾ ಪೆಟ್ಟುಬಿದ್ದಿತ್ತು. ಫೇಸ್ ಬುಕ್ ಲೈವ್ ನಲ್ಲಿ ಅವರು ಈ ಬಗ್ಗೆ ಚರ್ಚೆ ಮಾಡಿದರು. ಜನರಲ್ ಬಿಪಿನ್ ರಾವತ್ ಅವರಿಗೆ ಶ್ರದ್ಧಾಂಜಲಿ ನೀಡುವಾಗ, ‘ನಾನು ಇದನ್ನು ಎಂದಿಗೂ ಸ್ವೀಕರಿಸುವುದಿಲ್ಲ, ಅದಕ್ಕಾಗಿ ನಾನು ನನ್ನ ಧರ್ಮವನ್ನು ತ್ಯಾಗ ಮಾಡುತ್ತಿದ್ದೇನೆ, ಇಂದಿನಿಂದ ನಾನು ಮುಸ್ಲಿಂ ಅಲ್ಲ ನಾನೊಬ್ಬ ಭಾರತೀಯನಾಗಿದ್ದೇನೆ’, ಎಂದು ಹೇಳಿದ್ದಾರೆ.
ಯಾರು ಒಬ್ಬ ಶೂರ ಮತ್ತು ವೀರ ಸೈನ್ಯ ಅಧಿಕಾರಿಯ ಅವಮಾನ ಮಾಡಿದ್ದಾರೆ ಅಂಥ ದೇಶದ್ರೋಹಿಗಳ ಈ ಕೃತ್ಯಕ್ಕೆ ನಾನು ವಿರೋಧಿಸುತ್ತೇನೆ. ಇಸ್ಲಾಂನ ಸರ್ವೋಚ್ಚ ಧಾರ್ಮಿಕ ನಾಯಕರು ಮತ್ತು ರಾಜಕೀಯ ನಾಯಕರು ಸಹ ಇದಕ್ಕೆ ವಿರೋಧಿಸಿಲ್ಲ, ಇದು ನನಗೆ ಎಳ್ಳಷ್ಟೂ ರುಚಿಸಿಲ್ಲ. ಹೀಗಾಗಿ ನನಗೆ ನನ್ನ ಧರ್ಮದ ಮೇಲೆ ವಿಶ್ವಾಸ ಉಳಿದಿಲ್ಲ. ಇಂದು ನಾನು ನನ್ನ ಜನನದಿಂದ ದೊರೆತ ಬಟ್ಟೆಗಳನ್ನು ಬಿಸಾಕುತ್ತೇನೆ. ಈಗಿನಿಂದಲೇ ನಾನು ಮುಸ್ಲಿಂ ಇಲ್ಲ, ನಾನೊಬ್ಬ ಬರೀ ಭಾರತೀಯ. ನನ್ನ ಈ ನಿರ್ಣಯವು ಭಾರತದ ವಿರೋಧದಲ್ಲಿ ಇಮೋಜಿಗಳನ್ನು ಪೋಸ್ಟ್ ಮಾಡಿದವರಿಗೆ ಉತ್ತರವಾಗಿದೆ, ಎಂದು ಅಲಿ ಅಕ್ಬರ್ ಹೇಳಿದ್ದಾರೆ.

ತಮ್ಮ ಫೇಸ್ ಬುಕ್ ಲೈವ್ ನಲ್ಲಿ ಬಿಪಿನ್ ರಾವತ್ ಅವರನ್ನು ಹಗುರವಾಗಿ ಮತ್ತು ಅವಮಾನದ ರೀತಿಯಲ್ಲಿ ಭಾಷೆಯನ್ನು ಉಪಯೋಗಿಸಿದ ಮುಸ್ಲಿಂ ಯೂಸರ್ಸ್ ಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲವರು ಅಲಿ ಅಕ್ಬರ್ ಅವರು ತೆಗೆದುಕೊಂಡ ಈ ನಿರ್ಣಯವನ್ನು ಪ್ರಶಂಸಿಸಿದ್ದಾರೆ.
ಬೇರೆ ಪೋಸ್ಟ್ನಲ್ಲಿ ಅಲಿ ಅಕ್ಬರ್ ಅವರು ದೇಶದ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಸಾವಿಗೆ ಸಂತೋಷವನ್ನು ವ್ಯಕ್ತ ಮಾಡಿದವರಿಗೆ ಗುರುತಿಸಿ ಅವರಿಗೆ ಚೆನ್ನಾಗಿ ಶಿಕ್ಷೆ ನೀಡಬೇಕೆಂದು ಸಹ ವಿನಂತಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಅನೇಕ ರೀತಿಯ ದೇಶವಿರೋಧಿ ಕಾರ್ಯಕಲಾಪಗಳು ನಡೆಯುತ್ತಿವೆ. ಬಿಪಿನ್ ರಾವತ್ ಅವರ ಸಾವಿಗೆ ನಗುತ್ತಿರುವುದು ಎಂದರೆ ಅದರ ತಾಜಾ ಉದಾಹರಣೆಯಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ದ ಜೊತೆ ಸಂದರ್ಶನದಲ್ಲಿ ಹೇಳುತ್ತಾರೆ. ಯಾರು ನಗುತ್ತಿರುವ ಇಮೋಜಿಗಳನ್ನು ಪೋಸ್ಟ್ ಮಾಡುತ್ತಿದ್ದಾರೆ ಹಾಗೂ ಬಿಪಿನ್ ರಾವತ್ ಅವರ ಸಾವನ್ನು ಆನಂದದಿಂದ ಆಚರಣೆ ಮಾಡುತ್ತಿದ್ದಾರೆ ಬಹುಶಃ ಅವರು ಮುಸ್ಲಿಮರಾಗಿದ್ದಾರೆ ಎಂದು ಅಲಿ ಅಕ್ಬರ್ ಹೇಳಿದ್ದಾರೆ.

ಬಿಪಿನ್ ರಾವತ್ ಅವರು ಪಾಕಿಸ್ತಾನ ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಅನೇಕ ಕಠಿಣ ಕ್ರಮಗಳನ್ನು ಜರುಗಿಸಿದರು. ಶೂರ ಹಾಗೂ ಧೀರ ಸೈನ್ಯಾಧಿಕಾರಿಗಳಿಗೆ ಮತ್ತು ದೇಶದ ಅವಮಾನ ಮಾಡುವ ಪೋಸ್ಟ್ಗಳನ್ನು ನೋಡಿದ ನಂತರ ಒಬ್ಬನೂ ಮುಸ್ಲಿಂ ನಾಯಕ ಈ ಬಗ್ಗೆ ಪ್ರತಿಕ್ರಿಯಿಸಿಲಿಲ್ಲ. ಹೀಗಾಗಿ ನಾನು ಇಂಥ ಧರ್ಮದ ಭಾಗವಾಗಲು ಸಾಧ್ಯವಿಲ್ಲ ಎಂದು ಅಲಿ ಅಕ್ಬರ್ ಅವರು ಹೇಳುತ್ತಾರೆ.