ಮದುವೆಯಲ್ಲಿ ಊಟ ಮಾಡುವಾಗ ಮದುಮಗಳು ತನ್ನ ಮುಂದಿಟ್ಟ ಅನ್ನವನ್ನು ಕಸಿದುಕೊಂಡಳು ಎಂದು ಸಿಟ್ಟಿಗೆದ್ದ ಮದುಮಗ, ಮುಂದೆ ಮಾಡಿದ್ದೇನು ನೀವೇ ನೋಡಿ!

ಸದ್ಯದಲ್ಲಿ ನಮ್ಮ ಸುತ್ತಮುತ್ತಲೂ ಅನೇಕ ಮದುವೆ ಸಮಾರಂಭಗಳು ನಡೆಯುತ್ತಿವೆ. ನವೆಂಬರ್, ಡಿಸೆಂಬರ್ ತಿಂಗಳು ಬಂದರೆ ಸಾಕು ಮದುವೆಯ ಕಾರ್ಯಗಳು ಶುರುವಾಗುವವು. ಇಂದಿನ ಕರೊನಾ ಕಾಲದಲ್ಲಿ ಮತ್ತೆ ಲಾಕ್ಡೌನ್ ಕಾರ್ಯಾಚರಣೆಯಲ್ಲಿ ತರಬಹುದು ಎಂಬ ಆಲೋಚನೆ ಮಾಡಿ ಪ್ರತಿಯೊಬ್ಬರೂ ತಮ್ಮ ಮದುವೆಯನ್ನು ಆದಷ್ಟು ಬೇಗ ಮಾಡಿಕೊಳ್ಳುತ್ತಿದ್ದಾರೆ. ಮದುವೆಯ ಸಮಾರಂಭದಲ್ಲಿ ಎಲ್ಲೆಡೆಗೆ ಸಂಭ್ರಮದ ವಾತಾವರಣ ನಿರ್ಮಾಣವಾಗಿರುತ್ತದೆ.

ಮದುವೆಯ ಸಮಯದಲ್ಲಿ ಏನೆಲ್ಲ ಘಟನೆಗಳು ನಡೆಯುತ್ತವೆ ಎಂಬುದು ಹೇಳಲು ಸಾಧ್ಯವೇ ಆಗುವದಿಲ್ಲ. ಕೆಲವೊಮ್ಮೆ ಈ ಘಟನೆಗಳು ಮದುವೇ ಯಾಗುವ ವ್ಯಕ್ತಿಗಳೊಂದಿಗೆ ಸಹ ನಡೆಯುವವು. ಆದರೆ ಆಕಸ್ಮಿಕವಾಗಿ ನಡೆಯುವ ಈ ವಿಚಿತ್ರವಾದ ಘಟನೆಗಳನ್ನು ಕೆಲವೊಮ್ಮೆ ಕ್ಯಾಮೆರಾದಲ್ಲಿ ಸೆರೆಯಾಗಿರುತ್ತವೆ. ಈ ಸೆರೆಯಾದ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತವೆ.

ಸದ್ಯಕ್ಕೆ ಮದುವೆಯಲ್ಲಿ ನಡೆದ ಒಂದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಪ್ರಸ್ತುತ ವಿಡಿಯೋ ಮದುಮಗ ಮತ್ತು ಮದುಮಗಳು ಇಬ್ಬರ ನಡುವೆ ನಡೆದ ಒಂದು ಪ್ರಸಂಗದ ವಿಡಿಯೋ ಇದಾಗಿದ್ದು ಇದನ್ನು ನೋಡಿದ ಪ್ರತಿಯೊಬ್ಬರು ಮದುಮಗನ ಕೋಪವನ್ನು ಅರಿತುಕೊಂಡಿದ್ದಾರೆ. ಪ್ರಸ್ತುತ ವಿಡಿಯೋ ಕೇರಳ ರಾಜ್ಯದಲ್ಲಿ ನಡೆದ ಘಟನೆಯ ವಿಡಿಯೋ ಇದಾಗಿದೆ. ವಿಡಿಯೋದಲ್ಲಿ ನೀವು ನೋಡಬಹುದು ಮದುವೆಯ ಎಲ್ಲ ಕಾರ್ಯಗಳು ಮುಗಿದ ಮೇಲೆ ಕೊನೆಯಲ್ಲಿ ಮದುಮಕ್ಕಳಿಗೆ ಊಟ ಮಾಡಿಸುವ ವಾಡಿಕೆ ಇರುತ್ತದೆ.

ಎಲ್ಲರೂ ಸೇರಿಕೊಂಡು ಮದುಮಕ್ಕಳಿಗೆ ಊಟ ಬಡಿಸಲು ಊಟ ಮಾಡುವ ಸ್ಥಳದಲ್ಲಿ ಕರೆದುಕೊಂಡು ಹೋಗಿ ಅವರನ್ನು ಊಟ ಮಾಡಲು ಅಲ್ಲಿದ್ದ ಚೇರ್ ಗಳ ಮೇಲೆ ಕೂಡಲು ಹೇಳುತ್ತಾರೆ. ತದನಂತರ ಅವರಿಗೆ ಊಟ ಬಡಿಸಲು ಒಂದು ಬಾಳೆಹಣ್ಣಿನ ಎಲೆಯನ್ನು ಅವರ ಮುಂದೆ ಇಡುತ್ತಾರೆ. ನಮಗೆಲ್ಲ ಗೊತ್ತಿರುವ ಹಾಗೆ ಮದುವೆಯ ದಿನದಂದು ಮದುಮಗ ಮತ್ತು ಮದುಮಗಳು ಇಬ್ಬರು ಒಂದೇ ತಟ್ಟೆಯಲ್ಲಿ ಊಟ ಮಾಡಬೇಕು ಎಂಬ ರಿವಾಜು ನಮ್ಮ ಸಂಪ್ರದಾಯದಲ್ಲಿದೆ.

ಸಂಪ್ರದಾಯದಂತೆ ಇಬ್ಬರನ್ನು ಒಟ್ಟಿಗೆ ಕೂಡಿಸಿ ಊಟ ಬಡಿಸುತ್ತಾರೆ. ಊಟ ಬಡಿಸುವಾಗ ಆ ಮದುವೆಯ ಸಮಾರಂಭದಲ್ಲಿ ಮಾಡಿರುವ ಎಲ್ಲ ಪದಾರ್ಥಗಳನ್ನು ಒಂದೊಂದಾಗಿ ಆ ಬಾಳೆ ಎಲೆಯ ಮೇಲೆ ಹಚ್ಚುತ್ತಾರೆ ಆದರೆ ಕೊನೆಗೆ ಅನ್ನವನ್ನು ಗಂಡನ ಎದುರುಗಡೆ ಹಚ್ಚುತ್ತಾರೆ. ಇದನ್ನು ಕಂಡ ಮದುಮಗ ತುಂಬಾ ಖುಷಿ ಪಡುತ್ತಾನೆ ಇನ್ನೇನು ಅನ್ನದ ಮೇಲೆ ಸಾರು ಹಾಕಿದ ಕೂಡಲೇ ಊಟ ಮಾಡಬೇಕು ಅನ್ನೋ ಹೊತ್ತಿನಲ್ಲಿ ಬದಿಗಿದ್ದ ಹೆಂಡತಿ ಅಂದರೆ ಮದುಮಗಳು ಆ ಎಲೆಯ ಮೇಲಿದ್ದ ಅನ್ನವನ್ನು ತನ್ನ ಬದಿಗೆ ಸರಿಸಿಕೊಂಡು ಬಿಡುತ್ತಾಳೆ. ಇದನ್ನು ನೋಡಿದ ಮದುಮಗ ಒಂದು ವೇಳೆ ಖುಷಿ ಪಡುತ್ತ ಕೊನೆಗೆ ಸಿಟ್ಟಿಗೆ ಬರುತ್ತಾನೆ. ಸಿಟ್ಟಿಗೆ ಬಂದ ನಂತರ ಆತ ಮಾಡಿದ್ದೇನು? ಎಂಬುದು ನೀವೇ ವಿಡಿಯೋದಲ್ಲಿ ನೋಡಿ.

ವಿಡಿಯೋ ನೋಡಿ.

ಹೆಂಡತಿ ತನ್ನ ಮುಂದಿಟ್ಟ ಅನ್ನವನ್ನು ಕಸಿದುಕೊಂಡಳು ಎಂದು ಭಾವಿಸಿ ಗಂಡ ತುಂಬಾ ಸಿಟ್ಟಿಗೆ ಬರುತ್ತಾನೆ. ಸಿಟ್ಟಿಗೆ ಬರಲು ಕಾರಣ ಅಲ್ಲಿದ್ದ ಜನರು ಏಕೆಂದರೆ ಮದುಮಗಳು ತನ್ನ ಬದಿಗೆ ಅನ್ನವನ್ನು ಸರಿಸಿಕೊಂಡ ನಂತರ ಅಲ್ಲಿದ್ದ ಜನರು ನಗಲು ಪ್ರಾರಂಭ ಮಾಡುತ್ತಾರೆ. ಆಗ ಇದನ್ನು ನೋಡಿದ ಗಂಡ ಮಾತ್ರ ಸಿಟ್ಟಿಗೆದ್ದು ಆತನು ಕುಳಿತಿದ್ದ ಚೇರ್ ಮೇಲಿಂದ ಎದ್ದುನಿಂತು ತನ್ನ ಮುಂದಿದ್ದ ಊಟದ ಟೇಬಲ್ ನ್ನು ದೂರ ತಳ್ಳುತ್ತಾನೆ ಅಂದರೆ ಟೇಬಲ್ ಮೇಲಿದ್ದ ಊಟವನ್ನು ಕೆಳಗೆ ಚೆಲ್ಲುತ್ತಾನೆ. ಆಗ ಅಲ್ಲಿದ್ದ ಜನರು ಮತ್ತು ಮದುಮಗಳು ತುಂಬಾನೇ ಗಾಬರಿಯಾಗುತ್ತಾರೆ. ಇಷ್ಟೊಂದು ಕೋಪ ಒಳ್ಳೆಯದಲ್ಲ ನಮ್ಮ ಸಿಟ್ಟು ಅನ್ನದ ಮೇಲೆ ಯಾವಾಗಲೂ ತೋರಿಸಬಾರದು ಏಕೆಂದರೆ ಕೆಲವೊಬ್ಬರಿಗೆ ತಿನ್ನಲು ಅನ್ನವೇ ಸಿಗುವದಿಲ್ಲ ಆದ್ದರಿಂದ ನಿಮ್ಮ ಕೋಪ ಎಂತಹದೇ ಇದ್ದರೂ ಸಹ ಅನ್ನದ ಮೇಲೆ ತೋರಿಸಬೇಡಿ.