ನಿಮ್ಮ ಆಧಾರ್ ಕಾರ್ಡ್ ಮೂಲಕ ಬೇರೆ ಯಾರಾದರೂ ಸಿಮ್ ಬಳಸುತ್ತಾರೆಯೇ? ಎರಡೇ ನಿಮಿಷಗಳಲ್ಲಿ ಚೆಕ್ ಮಾಡಿ ನೋಡಿ……!
ನಮಗೆ ಗೊತ್ತಿರದ ವ್ಯಕ್ತಿ ನಮ್ಮ ಆಧಾರ ಕಾರ್ಡ್ ಮೂಲಕ ಸಿಮ್ ತಗೆದುಕೊಂಡು ನಮಗೆ ಗೊತ್ತಿರದ ಹಾಗೆ ಆ ಮೊಬೈಲ್ ಸಿಮ್ ಕಾರ್ಡ್ ನ್ನು ಉಪಯೋಗ ಮಾಡುತ್ತಾರೆ. ಆದರೆ ನಮ್ಮ ಆಧಾರ ಸಂಖ್ಯೆಗೆ ಎಷ್ಟು ಸಿಮ್ ಕಾರ್ಡ್ ನೋಂದಣಿಯಾಗಿದೆ ಎಂಬುದು ಬಹಳಷ್ಟು ಕಡಿಮೆ ಜನರಿಗೆ ಮಾತ್ರ ಗೊತ್ತಿರುತ್ತೆ. ನಿಮಗೂ ಸಹ ಗೊತ್ತಿಲ್ಲದಿದ್ದರೆ ಚಿಂತೆ ಪಡಬೇಡಿ ಏಕೆಂದರೆ ಇಂದು ನಾವು ನಿಮಗೆ ನಿಮ್ಮ ಆಧಾರ ಸಂಖ್ಯೆಗೆ ಎಷ್ಟು ಸಿಮ್ ಲಿಂಕ್ ಆಗಿವೆ ಎಂಬುದು ತಿಳಿದುಕೊಳ್ಳುವದು ಹೇಗೆ ಎಂಬುದು ತಿಳಿಸುವವರಿದ್ದೇವೆ. ಒಂದು ವೇಳೆ ನಿಮ್ಮ ಆಧಾರ್ ಲಿಂಕ್ ಇರುವ ಸಿಮ್ ಕಾರ್ಡ್ ನೀವು ಉಪಯೋಗ ಮಾಡದೆ ಬೇರೆ ಯಾರೇ ಉಪಯೋಗ ಮಾಡುತ್ತಿದ್ದರೆ ಅದನ್ನು ಬಂದ್ ಸಹ ಹೇಗೆ ಮಾಡಬಹುದು ಎಂಬುದು ಈ ಲೇಖನದಲ್ಲಿ ತಿಳಿಸಲಿದ್ದೇವೆ.
ನಿಮ್ಮ ಆಧಾರ್ ಸಂಖ್ಯೆಯಲ್ಲಿ ಎಷ್ಟು ಸಿಮ್‌ಗಳು ಸಕ್ರಿಯವಾಗಿವೆ ಎಂಬುದನ್ನು ತಿಳಿಯಲು ಸರ್ಕಾರವು ಒಂದು ಹೊಸ ಪೋರ್ಟಲ್ ಅನ್ನು ರಚಿಸಿದೆ. ದೂರಸಂಪರ್ಕ ಇಲಾಖೆ (DoT) ಇತ್ತೀಚೆಗೆ ಒಂದು ಹೊಸ ಪೋರ್ಟಲ್ ರಚನೆ ಮಾಡಿದೆ. ಪೋರ್ಟಲ್ ‘ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್ಮೆಂಟ್ ಆಂಡ್ ಕನ್ಸ್ಯೂಮರ್ ಪ್ರೊಟೆಕ್ಷನ್’ (TAFCOP) ಅನ್ನು ಪ್ರಾರಂಭಿಸಿದೆ.
TAFCOP ಈ ವೆಬ್ಸೈಟ್ ಮೂಲಕ ನೀವು ನಿಮ್ಮ ಆಧಾರ ಕಾರ್ಡ್ ಮೂಲಕ ಇದುವರೆಗೆ ಎಷ್ಟು ಸಿಮ್ ಸಕ್ರಿಯವಾಗಿದೆ ಎಂಬುದು ಸಹಜವಾಗಿ ಶೋಧಿಸಬಹುದು. ನಿಮಗೆ ಗೊತ್ತಿರದ ಹಾಗೆ ಬೇರೆ ಯಾವುದೇ ಮೊಬೈಲ್ ಕ್ರಮಾಂಕ ಜೋಡಣೆ ಯಾಗಿದ್ದರೆ ಅದರ ಕುರಿತು ನೀವು ತಕರಾರು ಸಹ ಮಾಡಬಹುದು. ಅದಲ್ಲದೆ ನೀವು ಉಪಯೋಗಿಸಿ ಬಿಟ್ಟ ಹಳೆಯ ಮೊಬೈಲ್ ನಂಬರ್ ಗಳನ್ನು ಆಧಾರ ಲಿಂಕ್ ನಿಂದ ಸಹಜವಾಗಿ ಬೇರೆ ಮಾಡಬಹುದು.
◆ನಿಮ್ಮ ಆಧಾರ ಲಿಂಕ್ ಮಾಡಿರುವಮೊಬೈಲ್ ಸಿಮ್ ಕುರಿತು ತಿಳಿದುಕೊಳ್ಳಲು, ಮೊದಲು https://tafcop.dgtelecom.gov.in/ ವೆಬ್ಸೈಟ್ ಗೆ ಹೋಗಬೇಕು.
◆ಇಲ್ಲಿ ನಿಮ್ಮ ಮೊಬೈಲ್ ನಂಬರ ಟೈಪ್ ಮಾಡಬೇಕಾಗುವದು.
◆ತದನಂತರ ‘Request OTP’ ಈ ಬಟನ್ ಮೇಲೆ ಕ್ಲಿಕ್ ಮಾಡಿ.
◆ ನಿಮ್ಮ ಮೊಬೈಲ್ ನಲ್ಲಿ ಪ್ರಾಪ್ತವಾಗಿರುವ OTP ಯನ್ನು ಟೈಪ್ ಮಾಡಿ.
◆ ಇಷ್ಟು ಮಾಡಿದ ಕೂಡಲೇ ಸ್ಕ್ರೀನ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಹೊಂದಿರುವ ಎಲ್ಲ ಮೊಬೈಲ್ ಸಂಖ್ಯೆಗಳು ಕಾಣುವವು.
◆ ಇಲ್ಲಿ ನೀವು ಉಪಯೋಗ ಮಾಡದ ಮೊಬೈಲ್ ನಂಬರ್ ಅಥವಾ ಮುಂದೆ ಉಪಯೋಗ ವಿರದ ಮೊಬೈಲ್ ನಂಬರ್ ಹಾಗೂ ನಿಮಗೆ ಗೊತ್ತಿರದ ಮೊಬೈಲ್ ನಂಬರಗಳನ್ನು ಬ್ಲಾಕ್ ಮಾಡಬಹುದು ಅಥವಾ ಆ ಕುರಿತು ದೂರು ಸಹ ನೀಡಬಹುದು.