ಅಂಬಾನಿಯ ಡ್ರೈವರ್ ರಿಂದ ಹಿಡಿದು ಅಮಿತಾಬ್ ಬಚ್ಚನ್ ಅವರ ಬಾಡಿಗಾರ್ಡ್ ವರೆಗೆ, IAS IPS ಅಧಿಕಾರಿಗಳಿಗಿಂತ ಹೆಚ್ಚಾಗಿದೆ ಇವರ ಸಂಬಳ!
ಪ್ರತಿ ವ್ಯಕ್ತಿಯ ಒಂದು ಆಸೆ ಇದ್ದೆ ಇರುತ್ತದೆ ಅದೇನೆಂದರೆ ತನಗೆ ಒಂದು ಉತ್ತಮ ನೌಕರಿ ಸಿಗಬೇಕು ಅಲ್ಲದೆ ಅದರಲ್ಲಿ ಉತ್ತಮವಾದ ಸಂಬಳ ಇರಬೇಕು. ಪ್ರತಿಯೊಬ್ಬರು ಉತ್ತಮ ಜೀವನ ನಡೆಸುವದಕ್ಕಾಗಿ ಎಷ್ಟೋ ಕಷ್ಟಪಟ್ಟು ದುಡಿದು ಹಣ ಸಂಗ್ರಹ ಮಾಡುತ್ತಾರೆ. ಅಲ್ಲದೆ ಕೆಲವೊಬ್ಬರು ಐಎಎಸ್ , ಐಪಿಎಸ್ ಮತ್ತು ಡಾಕ್ಟರ್ ಎಂಜಿನಿಯರಿಂಗ್ ಆಗಬೇಕು ಅದರಿಂದ ಒಳ್ಳೆಯ ಸಂಬಳ ಪಡೆಯಬೇಕು ಎಂಬುದು ಎಲ್ಲರ ಕನಸಾಗಿರುತ್ತದೆ. ಆದರೆ ಇಂದಿನ ಕಾಲದಲ್ಲಿ ಯಾವ ಕೆಲಸವು ಕಡಿಮೆ ಮಟ್ಟದಲ್ಲ ಎಂಬುದು ತಿಳಿದು ಬರುತ್ತಿದೆ ಅದು ಹೇಗೆಂದರೆ ಒಬ್ಬ ಐಎಎಸ್ ಅಧಿಕಾರಿಯು ಎಷ್ಟೋ ಸಂಬಳ ಪಡೆಯುವನೋ ಅಷ್ಟೇ ಕೆಲವು ಪ್ರತಿಷ್ಠಿತ ವ್ಯಕ್ತಿಗಳ ಕಾರ್ ಡ್ರೈವರ್ ಸಹ ಅಷ್ಟೇ ಸಂಬಳ ಪಡೆಯುವರು ಕೇಳಿ ಆಶ್ಚರ್ಯವಾಯಿತಲ್ಲವೇ ಹೌದು ನಾವಿಂದು ಕೆಲವು ಪ್ರತಿಷ್ಠಿತ ವ್ಯಕ್ತಿಗಳ ಡ್ರೈವರ್ , ಬಾದಿಗಾರ್ಡ್ ಮತ್ತು ಅವರ ಮನೆಯಲ್ಲಿ ಕೆಲಸ ಮಾಡುವ ವ್ಯಕ್ತಿಗಳ ಸಂಬಳದ ಬಗ್ಗೆ ತಿಳಿಸುವವರಿದ್ದೇವೆ.

ಸಲಾಮಾನ್ ಖಾನ್ ತಮ್ಮ ಬಾಡಿಗಾರ್ಡ್ ರಾದ ಶೇರಾ ಅವರಿಗೆ ಪ್ರತಿ ತಿಂಗಳು 16 ಲಕ್ಷ ರೂಪಾಯಿ ಅಂದರೆ ವರ್ಷಕ್ಕೆ ಸುಮಾರು 2 ಕೋಟಿ ರೂಪಾಯಿ ಸಂಬಳ ನೀಡುವರು.

ಸೈಫ್ ಅಲಿ ಖಾನ್ ಹಾಗೂ ಕರೀನಾಕಪೂರ್ ಇವರು ತಮ್ಮ ಮಗನಾದ ತೈಮೂರ್ ನನ್ನು ಪಾಲನೆ ಮಾಡಲು ಒಬ್ಬ ಮಹಿಳೆಯನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ ಆಕೆಯ ಹೆಸರು ಸವಿತಾ. ಮೀಡಿಯಾ ರಿಪೋರ್ಟ್ ನುಸರಾ ಪಾಲನೆ ಮಾಡುವ ಮಹಿಳೆಯ ಒಂದು ತಿಂಗಳಿನ ಸಂಬಳ 1.5 ಲಕ್ಷ ರೂಪಾಯಿ ಇದೆ. ಅವಳು ಒಂದು ವೇಳೆ ಓವರ್ ಟೈಮ್ ಕೆಲಸ ಮಾಡಿದರೆ ಅವಳಿಗೆ 1.75 ಲಕ್ಷ ರೂಪಾಯಿ ಪಡೆಯುವಳಂತೆ.

ಬಾಲಿವುಡ್ ಸುಪ್ರಸಿದ್ಧ ನಟ ಶಾರೂಖ್ ಖಾನ್ ಅವರ ಬಾಡಿಗಾರ್ಡ್ ಅಜಯ ಸಿಂಹ ಅವರು ಕಳೆದ ಎಷ್ಟೋ ವರ್ಷಗಳಿಂದ ಅವರ ರಕ್ಷಣೆಯ ಕಾರ್ಯ ಮಾಡುತ್ತಿದ್ದಾರೆ. ಶಾರೂಖ್ ಖಾನ್ ಆವರು ತಮ್ಮ ಬಾಡಿಗಾರ್ಡ್ ಗೆ ಪ್ರತಿ ವರ್ಷ 2.5 ಕೋಟಿ ರೂಪಾಯಿ ಸಂಬಳ ನೀಡುತ್ತಾರೆ. ಇದರಿಂದ ಅಜಯ್ ಸಿಂಹ ಅವರು ಬಾಲಿವುಡ್ ಸೆಲೆಬ್ರಿಟಿಗಳ ರಕ್ಷಣೆ ಮಾಡುವವರಲ್ಲಿ ಎಲ್ಲಕ್ಕಿಂತ ದುಬಾರಿ ಬಾಡಿಗಾರ್ಡ್ ಆಗಿದ್ದಾರೆ.

ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ ಅವರ ವೈಯಕ್ತಿಕ ಬಾಡಿಗಾರ್ಡ್ ಹೆಸರು ಜಿತೇಂದ್ರ ಶಿಂದೆ ಇದೆ. ಶಿಂದೆಯವರಿಗೆ ಬಚ್ಚನ್ ಪ್ರತಿವರ್ಷಕ್ಕೆ 1.5 ಕೋಟಿ ಸಂಬಳ ನೀಡುವರು.

ನಮ್ಮ ದೇಶದ ಅತ್ಯಂತಶ್ರೀಮಂತ ವ್ಯಕ್ತಿ ಅಂಬಾನಿಯವರ ಕಾರಿನ ಡ್ರೈವರ್ ಆಗುವದು ಅಷ್ಟೊಂದು ಸುಲಭವಲ್ಲ ಏಕೆಂದರೆ ಇವರ ಡ್ರೈವರ್ ಆಯ್ಕೆ ಮಾಡಲು ಕೆಲವು ಉತ್ತಮ ಕಂಪನಿಗಳಿಗೆ ಅನುಮತಿ ನೀಡಿದೆ. ಆ ಕಂಪನಿಗಳು ಡ್ರೈವರ್ ಗಳ ಪರೀಕ್ಷಣೆ ಮಾಡಿ ತದನಂತರ ಅಂಬಾನಿಯವರ ಕಾರು ಚಾಲಕನೆಂದು ನೇಮಕ ಮಾಡುವರು. ಸದ್ಯಕ್ಕೆ ಕಾರ್ಯರತವಾಗಿದ್ದ ಅಂಬಾನಿಯವರ ಡ್ರೈವರ್ ಗೆ ಪ್ರತಿ ತಿಂಗಳಿಗೆ 2 ಲಕ್ಷ ರೂಪಾಯಿಗಿಂತ ಹೆಚ್ಚು ಸಂಬಳ ವಿದೆ.