ಬಾಲಿವುಡ್ ಸ್ಟಾರ್ ಕತ್ರಿನಾ ಕೈಫ್ ಮತ್ತು ವಿಕಿ ಕೌಶಲ್ ಮದುವೆಯಲ್ಲಿಯ 10 ದುಬಾರಿ ಗಿಫ್ಟ್ ಗಳು! ಯಾರು? ಏನು ಕೊಟ್ಟರು?
ಸದ್ಯ ಬಾಲಿವುಡ್ ನಲ್ಲಿ ಕತ್ರಿನಾ ಕೈಫ್ ಮತ್ತು ವಿಕಿ ಕೌಶಲ್ ಅವರ ಮದುವೆಯ ಸುದ್ದಿಗಳೇ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಅನೇಕ ದಿನಗಳಿಂದ ಇವರಿಬ್ಬರಿಗೂ ಸಂಬಂಧಿಸಿದ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇವೆ. ಈಗ ಇವರಿಬ್ಬರ ವಿವಾಹವು ತುಂಬ ವಿಜ್ರಂಭಣೆಯಿಂದ ನೆರವೇರಿತು. ಇವರ ಮದುವೆಗೆ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಹಾಜರಿ ಹಚ್ಚಿದ್ದಾರೆ. ಮತ್ತು ತಮ್ಮ ಪ್ರೀತಿಯ ಗೆಳೆಯ ಗೆಳತಿಯಾದ ಕತ್ರಿನಾ ಹಾಗೂ ವಿಕಿ ಕೌಶಲ್ ಅವರಿಗೆ ಅನೇಕ ದುಬಾರಿ ಗಿಫ್ಟ್ ಗಳನ್ನು ನೀಡಿದ್ದಾರೆ. ಅವುಗಳಲ್ಲಿ ಹತ್ತು ದುಬಾರಿ ಗಿಫ್ಟ್ ಗಳನ್ನು ಎಷ್ಟೊಂದು ಬೆಲೆಯ ಮತ್ತು ಯಾರು ನೀಡಿದ್ದಾರೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

1 ) ವಿಕಿ ಕೌಶಲ್ – ಮೀಡಿಯಾ ರಿಪೋರ್ಟ್ ಪ್ರಕಾರ ವಿಕಿ ಕೌಶಲ್ ಅವರು ತಮ್ಮ ಪತ್ನಿ ಯಾಗುತ್ತಿರುವ ಕತ್ರಿನಾ ಕೈಫ್ ಅವರಿಗೆ 90 ಲಕ್ಷ ರೂಪಾಯಿ ಬೆಲೆಬಾಳುವ ಲಂಡನ್ ನಲ್ಲಿ ಡಿಸೈನ್ ಮಾಡಿದ ವಿಶೇಷ ಡೈಮಂಡ್ ರಿಂಗ್ ಗಿಫ್ಟ್ ನೀಡಿದ್ದಾರೆ. ಇದರ ಜೊತೆಗೆ ವಿಕಿ ಕೌಶಲ್ ಅವರು ಕತ್ರಿನಾ ಕೈಫ್ ಅವರಿಗೆ ದುಬೈನಲ್ಲಿ 50 ಕೋಟಿ ರೂಪಾಯಿ ಬೆಲೆಯ ಅಪಾರ್ಟ್ಮೆಂಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

2 ) ಬೀನಾ ಕೌಶಲ್ – ವಿಕಿ ಕೌಶಲ್ ಅವರ ತಾಯಿಯಾಗಿರುವ ಬೀನಾ ಕೌಶಲ್ ಅವರು ತಮ್ಮ ಸೊಸೆ ಯಾಗುತ್ತಿರುವ ಕತ್ರಿನಾ ಕೈಫ್ ಅವರಿಗೆ 60 ಲಕ್ಷ ರೂಪಾಯಿ ಬೆಲೆಯ ಚಿನ್ನದ ನೆಕ್ಲೆಸ್ ನ್ನು ಉಡುಗೊರೆ ಸ್ವರೂಪದಲ್ಲಿ ನೀಡಿದ್ದಾರೆ.

3 ) ಸಲ್ಮಾನ್ ಖಾನ್ – ಕತ್ರಿನಾ ಕೈಫ್ ಅವರನ್ನು ಬಾಲಿವುಡ್ನಲ್ಲಿ ಲಾಂಚ್ ಮಾಡಿದವರು ಸಲ್ಮಾನ್ ಖಾನ್. ಹೀಗಾಗಿ ಕತ್ರಿನಾ ಅವರಿಗೆ ಮದುವೆಯ ನೆನಪಿಗಾಗಿ ಎರಡು ಕೋಟಿ ರೂಪಾಯಿಯ ರೇಂಜ್ ರೋವರ್ ಕಾರನ್ನು ಸಲ್ಮಾನ್ ಖಾನ್ ಅವರು ಗಿಫ್ಟ್ ರೂಪದಲ್ಲಿ ನೀಡಿದ್ದಾರೆ.

4 ) ರಣಬೀರ್ ಕಪೂರ್ – ಕತ್ರಿನಾ ಕೈಫ್ ಅವರ ಎಕ್ಸ್ ಬಾಯ್ಫ್ರೆಂಡ್ ರಣಬೀರ್ ಕಪೂರ್ ಅವರು ಕತ್ರಿನಾ ಹಾಗೂ ವಿಕಿ ಕೌಶಲ್ ಇವರಿಗೆ ಹತ್ತು ಲಕ್ಷ ರೂಪಾಯಿ ಬೆಲೆಯ ಪರ್ಫ್ಯೂಮ್ ಬಾಸ್ಕೆಟ್ ನ್ನು ಉಡುಗೊರೆಯಾಗಿ ನೀಡಿದ್ದಾರೆ.

5 ) ಆಲಿಯಾ ಭಟ್ – ಆಲಿಯಾ ಭಟ್ ಅವರು ವಿಕಿ ಕೌಶಲ್ ಅವರಿಗೆ ಪ್ಯೂರ್ ಲೆದರ್ ಜಾಕೆಟ್ ನ್ನು ಗಿಫ್ಟ್ ರೂಪದಲ್ಲಿ ನೀಡಿದ್ದಾರೆ. ಇದರ ಬೆಲೆ 7 ಲಕ್ಷ ರೂಪಾಯಿಗಳು.

6 ) ಶಾರುಖ ಖಾನ್ – ಕತ್ರಿನಾ ಮತ್ತು ಶಾರುಖ್ ಖಾನ್ ಅನೇಕ ಸಲ ಒಂದೇ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಹೀಗಾಗಿ ಇಬ್ಬರೂ ಒಳ್ಳೆಯ ಫ್ರೆಂಡ್ಸ್ ಇದ್ದಾರೆ. ಕತ್ರಿನಾ ಅವರ ಈ ಮದುವೆಯ ಸಂದರ್ಭದಲ್ಲಿ ಶಾರುಖ್ ಖಾನ್ ಅವರು ಮಿನಿ ಕೂಪರ್ ಕಾರ್ ನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರ ಬೆಲೆ 40 ಲಕ್ಷ ರೂಪಾಯಿಗಳು.

7 ) ಹೃತೀಕ್ ರೋಷನ್ – ಕತ್ರಿನಾ ಕೈಫ್ ಅವರ ಒಳ್ಳೆಯ ಗೆಳೆಯರಲ್ಲಿ ಹೃತಿಕ್ ರೋಷನ್ ಅವರು ಸಹ ಒಬ್ಬರಾಗಿದ್ದಾರೆ. ಕತ್ರಿನಾ ಅವರ ಮದುವೆಗೆ ಹೃತಿಕ್ ಅವರು 8 ಲಕ್ಷ ರೂಪಾಯಿಗಳ ಪ್ಯಾರಿಸ್ಸಿನ ಹ್ಯಾಂಡ್ ಕ್ರಾಫ್ಟೆಡ್ ಫ್ಲವರ್ ವೇಸ್ ಉಡುಗೊರೆಯಾಗಿ ನೀಡಿದ್ದಾರೆ.

8 ) ಅಕ್ಷಯ್ ಕುಮಾರ್ – ಕತ್ರಿನಾ ಮತ್ತು ಅಕ್ಷಯ್ ಕುಮಾರ್ ಇಬ್ಬರು ಅನೇಕ ಚಲನಚಿತ್ರಗಳಲ್ಲಿ ಯಶಸ್ವಿಯಾಗಿ ಅಭಿನಯಿಸಿದ್ದಾರೆ. ಇತ್ತೀಚೆಗೆ ತೆರೆಕಂಡ ಸೂರ್ಯವಂಶಿಯು ಸಹ ದಾಖಲೆಯ ಹಣಗಳಿಸುವಲ್ಲಿ ಯಶಸ್ವಿಯಾಯಿತು. ಇವರ ಮದುವೆಗೆ ಅಕ್ಷಯ್ ಕುಮಾರ್ ಅವರು 6 ಕೋಟಿ ರೂಪಾಯಿಗಳ ಲ್ಯಾಂಬೋರ್ಗಿನಿ ಕಾರನ್ನು ಉಡುಗೊರೆಯ ಸ್ವರೂಪದಲ್ಲಿ ನೀಡಿದ್ದಾರೆ.

9 ) ಅಮೀರ್ ಖಾನ್ – ಅಮೀರ್ ಖಾನ್ ಅವರು ಕತ್ರಿನಾ ಕೈಫ್ ಅವರಿಗೆ ಹರ್ಮಸ್ ಕಂಪನಿಯ ಐದು ಲಕ್ಷ ರೂಪಾಯಿಯ ಬೆಲೆಬಾಳುವ ಹ್ಯಾಂಡ್ ಬ್ಯಾಗ್ ನೀಡಿದ್ದಾರೆ. ಮತ್ತು ವಿಕಿ ಕೌಶಲ್ ಅವರಿಗೆ ರೋಲೆಕ್ಸ್ ಕಂಪನಿಯ 4 ಲಕ್ಷ ರೂಪಾಯಿಗಳ ಗಡಿಯಾರ ಗಿಫ್ಟ್ ರೂಪದಲ್ಲಿ ನೀಡಿದ್ದಾರೆ.

10 ) ಅಭಿಷೇಕ್ ಬಚ್ಚನ್ – ತಮ್ಮ ಗೆಳತಿಯಾದ ಕತ್ರಿನಾ ಕೈಫ್ ಅವರಿಗೆ ಅಭಿಷೇಕ್ ಬಚ್ಚನ್ ಅವರು ಡೈಮಂಡ್ ಇಯರಿಂಗ್ಸ್ ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರ ಬೆಲೆ 20 ಲಕ್ಷ ರೂಪಾಯಿಗಳೆಂದು ಹೇಳಲಾಗುತ್ತಿದೆ.