Video: ರಸ್ತೆಯಲ್ಲಿ ಸ#ತ್ತು ಬಿದ್ದ ಮಂಗದ ಮರಿಯನ್ನು ಈ ವ್ಯಕ್ತಿ ಮಾಡಿದ್ದೇನು? ‘ಇನ್ನೂ ಕೆಲವರಲ್ಲಿ ಮಾನವೀಯತೆ ಉಳಿದಿದೆ’ ಎಂದ ಐಎಫ್ಎಸ್ ಅಧಿಕಾರಿ!!

ಸದ್ಯಕ್ಕೆ ಸಮಾಜಿಕ ಜಾಲತಾಣಗಳಲ್ಲಿ ವಿಡಿಯೋ ತುಂಬಾನೇ ವೈರಲ್ ಆಗುತ್ತಿವೆ ಅದರಲ್ಲಿ ಕೆಲವು ವಿಡಿಯೋಗಳ ನೇರವಾಗಿ ಮನಸ್ಸಿಗೆ ಮುಟ್ಟುವ ವಿಡಿಯೋಗಳಂತೂ ತುಂಬಾನೇ ವೈರಲ್ ಆಗುತ್ತವೆ. ಪ್ರಸ್ತುತ ವಿಡಿಯೋ ಸಹ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಕೂಡಲೇ ‘ಇನ್ನೂ ಕೆಲವರ ಹತ್ತಿರ ಮಾನವೀಯತೆಯ ಮೌಲ್ಯ ಉಳಿದುಕೊಂಡಿದೆ” ಎಂದು ನೀವು ಹೇಳುವಿರಿ.

ಪ್ರಸ್ತುತ ವಿಡಿಯೋದಲ್ಲಿ ನೀವು ನೋಡಬಹುದು, ರಸ್ತೆಯ ಬದಿಯಲ್ಲಿ ಓಡಾಡುತ್ತಿದ್ದ ಮಂಗದ ಮರಿಯನ್ನು ಅಲ್ಲಿಯ ಕೆಲವು ನಾಯಿಗಳ ಗುಂಪೊಂದು ಈ ಸಣ್ಣ ಮರಿಗೆ ಗೆರೆ ಹಾಕುತ್ತವೆ. ಅಲ್ಲದೆ ಅದಕ್ಕೆ ಕಚ್ಚಲು ಸಹ ಹೋಗುತ್ತವೆ ಇದನ್ನು ಕಂಡು ಮರಿ ಜಾಗದಲ್ಲೇ ಹೆ#ದರಿಕೊಂಡು ಬೀಳುತ್ತದೆ. ಆದರೆ ಅಲ್ಲಿಂದ ಹೋಗುತ್ತಿದ್ದ ವ್ಯಕ್ತಿ ಈ ಘಟನೆ ನೋಡಿ ನಾಯಿಗಳನ್ನು ಹೊಡೆದು ಓಡಿಸುತ್ತಾನೆ. ಆದರೆ ಮಂಗದ ಮರಿಯನ್ನು ಏನಾಗಿದೆ ಎಂದು ನೋಡುವಷ್ಟರಲ್ಲಿ ಅದು ತನ್ನ ಉಸಿರಾಟ ನಿಲ್ಲಿಸಿತ್ತು. ಆಗ ಈತನ ತಲೆಯಲ್ಲಿ ಒಂದು ಉಪಾಯ ಸೂಚಿಸಿತು. ಮೊದಲು ನೆಲದ ಮೇಲೆ ಬಿದ್ದ ಮಂಗನನ್ನು ತನ್ನ ಕೈಯಲ್ಲಿ ತಗೆದುಕೊಂಡು ಮುಂದೆ ಮಾಡಿದ್ದೇನು ನೀವೇ ನೋಡಿ.

ವಿಡಿಯೋ ನೋಡಿ.

ಉಸಿರಾಟ ಬಿಟ್ಟ ಮಂಗನನ್ನು ಹೇಗಾದರೂ ಮಾಡಿ ಉಳಿಸಿಕೊ ಬೇಕು ಎಂದು ಆ ವ್ಯಕ್ತಿ ಯೋಚಿಸಿದ. ತದನಂತರ ನಾವು ಯಾವುದೇ ವ್ಯಕ್ತಿಗೆ ಉಸಿರಾಟ ತೊಂದರೆ ಯಾದರೆ ಪ್ರಥಮ ಚಿಕಿತ್ಸೆ ಎಂದು ಆ ವ್ಯಕ್ತಿಯ ಎದೆಯನ್ನು ಒತ್ತುತ್ತೇವೆ ಅದೇ ಕ್ರಿಯೆ ಈ ವ್ಯಕ್ತಿಗೆ ನೆನಪಾಗಿ ಆ ಮಂಗನ ಎದೆಯನ್ನು ತಿಕ್ಕುತ್ತ, ಆ ಮಂಗನ ಎದೆಯ ಭಾಗದ ಮೇಲೆ ಜೋರಾಗಿ ಒತ್ತುತ್ತಾನೆ ಹೀಗೆ ಹಲವಾರು ಬಾರಿ ಮಾಡಿದರು ಸಹ ಮಂಗ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಕೊನೆಗೆ ಆತ ಆ ಮಂಗನನ್ನು ತನ್ನ ಕೈಯಲ್ಲಿ ತಗೆದುಕೊಂಡು ಬಾಯಿಗೆ ಬಾಯಿ ಹಚ್ಚಿ ಆ ಮಂಗಕ್ಕೆ ಶ್ವಾಸ ಕೊಡಲು ಪ್ರಯತ್ನ ಮಾಡುತ್ತಾನೆ.

ಇಂದಿನ ಕಾಲದಲ್ಲಿ ನಮ್ಮ ಪರಿಚಯವಿದ್ದ ವ್ಯಕ್ತಿ ನಾವು ಸಂಕಟ ಸಮಯದಲ್ಲಿ ಸಿಕ್ಕಾಗ ನಮಗೆ ಸಹಾಯ ಮಾಡುವದು ತುಂಬಾ ವಿರಳ, ಆದರೆ ಈ ವ್ಯಕ್ತಿ ಒಂದು ಚಿಕ್ಕ ಪ್ರಾಣಿ ಉಸಿರಾಟ ನಿಲ್ಲಿಸಿದೆ ಎಂದು ಅರಿತಕೂಡಲೇ ತನ್ನ ಬಾಯಿಂದ ಆ ಮಂಗನಿಗೆ ಶ್ವಾಸ ಕೊಡಲು ಪ್ರಯತ್ನ ಮಾಡುವ ದೃಶ್ಯ ನೋಡಿದರೆ ನಿಜಕ್ಕೂ ಆ ವ್ಯಕ್ತಿಯ ಮಾನವೀಯತೆ ಹೊಗಳಿಕೆಗೆ ಸಾಲದು. ನಾಲ್ಕೈದು ಸಲ ಶ್ವಾಸ ನೀಡಿದಾಗ ಆ ಮಂಗ ಎಚ್ಚೆತ್ತುಕೊಂಡು ಕಣ್ಣು ಮಿಟುಕಿಸಿ ಕೈ ಕಾಲು ಅಲುಗಾಡಿಸಲು ಶುರು ಮಾಡುತ್ತೆ ಇದನ್ನು ಕಂಡು ಆ ವ್ಯಕ್ತಿ ತುಂಬಾ ಖುಷಿ ಪಡುತ್ತಾನೆ. ಕೊನೆಗೂ ಈ ಮಂಗನನ್ನು ನಾನು ಉಳಿಸಿದೆ ಎಂದು ಮನದಲ್ಲೇ ಸಂತಸ ಪಡುತ್ತಾನೆ. ಈ ಜೀವ ಉಳಿಸಿದ ಸಾಹಸಿ ವ್ಯಕ್ತಿಯ ಹೆಸರು ಪ್ರಭು ಇದೆ.

ಪ್ರಸ್ತುತ ವಿಡಿಯೋ ಐಎಫ್ಎಸ್ ಅಧಿಕಾರಿ ಸುಧಾ ರಮಣ ಅವರು ತಮ್ಮ ಟ್ವಿಟ್ಟರ್ ಮೂಲಕ ಶೇರ್ ಮಾಡಿದ್ದಾರೆ. ಇದುವರೆಗೆ ಈ ವಿಡಿಯೋವನ್ನು ಎಂಟು ಲಕ್ಷಕ್ಕಿಂತಾ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಹನ್ನೊಂದು ಸಾವಿರಕ್ಕೂ ಹೆಚ್ಚು ಜನರು ರಿಟ್ವಿಟ್ ಮಾಡಿದ್ದಾರೆ. ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.