ಶಿಕ್ಷಕನ ಈ ಡ್ಯಾನ್ಸ್ ನೋಡಿ ಹಾಲಿವುಡ್ ಸ್ಟಾರಗಳು ಸಹ ಬೆರಗಾಗಬೇಕು. ನೋಡಿ 2 ಕೋಟಿ ಜನರು ವೀಕ್ಷಿಸಿದ ಈ ವೈರಲ್ ವಿಡಿಯೋ.

ಸೋಶಿಯಲ್ ಮೀಡಿಯಾದಲ್ಲಿ ದಿನಂಪ್ರತಿ ಬೇರೆಬೇರೆ ವಿಡಿಯೋಗಳು ಶೇರ್ ಆಗುತ್ತಿರುತ್ತವೆ. ಇವುಗಳಲ್ಲಿ ಕೆಲವು ವಿಡಿಯೋಗಳು ತುಂಬಾನೇ ತಮಾಷೆಯಾಗಿರುತ್ತವೆ. ವೈರಲ್ ಆಗುವ ವಿಡಿಯೋಗಳಲ್ಲಿ ಕೆಲವು ವಿಡಿಯೋಗಳು ಪ್ರಾಣಿ, ಪಕ್ಷಿ ಹಾಗೆ ಕೆಲವು ವಿಡಿಯೋಗಳು ಮನುಷ್ಯರ ಕಲೆಗೆ ಸಂಬಂಧಿತವಾಗಿರುತ್ತವೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಒಂದು ಶಾಲೆಯಲ್ಲಿಯ ಶಿಕ್ಷಕನ ಡ್ಯಾನ್ಸ್ ಮಾಡುವ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ…
ಈ ವಿಡಿಯೋದಲ್ಲಿ ಶಿಕ್ಷಕನು ವಿದ್ಯಾರ್ಥಿಯ ಜೊತೆಗೆ ಅದ್ಭುತವಾದ ಸ್ಟೆಪ್ಸ್ ಹಾಕುವದು ಕಂಡುಬರುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಅಮೇರಿಕಾದ ಪ್ರೋಸ್ನೋ ಪಟ್ಟಣದಲ್ಲಿಯ ತೆನಾಯಾ ಶಾಲೆಯಲ್ಲಿಯದಿದೆ. ಈ ವಿಡಿಯೋ ಬರೀ ನೆಟ್ಟಿಗರಿಗೆ ಅಷ್ಟೇ ಅಲ್ಲ ಸೆಲೆಬ್ರಿಟಿಗಳಿಗೂ ತುಂಬಾನೇ ಇಷ್ಟವಾಗಿದೆ. ಈ ವೈರಲ್ ವಿಡಿಯೋದಲ್ಲಿ ಭರ್ಜರಿ ಡಾನ್ಸ್ ಮಾಡಿದ ಶಿಕ್ಷಕನ ಹೆಸರು ಆಸ್ಟಿನ್ ಲೇಮೆ ಇದೆ. ಈ ಶಿಕ್ಷಕನ ಡ್ಯಾನ್ಸ್ ಪರ್ಫಾರ್ಮೆನ್ಸ್ ನೋಡಿ ಎಲ್ಲರೂ ಆತನ ಫ್ಯಾನ್ ಆಗಿದ್ದಾರೆ. ಶಾಲೆಯ ಒಂದು ಸಾಮೂಹಿಕ ಸಮಾರಂಭದಲ್ಲಿ ಎಲ್ಲ ವಿದ್ಯಾರ್ಥಿಗಳು ಡ್ಯಾನ್ಸ್ ಮಾಡುವಾಗ ಶಿಕ್ಷಕನ ಸಮಯದಲ್ಲಿಯ ಹಿಟ್ ಆದ ಹಾಡೊಂದು ಹಚ್ಚಲಾಗಿತ್ತು. ಆಗ ಈ ಶಿಕ್ಷಕನಿಗೆ ಕಂಟ್ರೋಲ್ ಮಾಡಿಕೊಳ್ಳಲು ಆಗಲಿಲ್ಲ. ನಂತರ ವಿದ್ಯಾರ್ಥಿಗಳ ಜೊತೆ ಈ ಶಿಕ್ಷಕನು ಕೂಡ ತನಗೆ ಇಷ್ಟವಾದ ಈ ಹಾಡಿನ ಮೇಲೆ ಡ್ಯಾನ್ಸ್ ಮಾಡಲು ಶುರುಮಾಡಿದನು.

ವಿಡಿಯೋ ನೋಡಿ

ಶಾಲೆಯಲ್ಲಿ ದಿನಂಪ್ರತಿ ಪಾಠವನ್ನು ಹೇಳಿಕೊಡುತ್ತಿದ್ದ ಶಿಕ್ಷಕರು ಕೂಡ ತಮ್ಮ ಜೊತೆಗೆ ಡ್ಯಾನ್ಸ್ ಮಾಡುವುದನ್ನು ನೋಡಿ ಶಾಲೆಯಲ್ಲಿಯ ವಿದ್ಯಾರ್ಥಿಗಳು ಸಹ ಅವರ ಜೊತೆಗೆ ಡ್ಯಾನ್ಸ್ ಮಾಡಲು ಶುರುಮಾಡಿದರು. ಈ ವೈರಲ್ ವಿಡಿಯೋದಲ್ಲಿ ತಮ್ಮ ಶಿಕ್ಷಕರ ಡ್ಯಾನ್ಸ್ ಸ್ಟೆಪ್ ನ್ನು ನೋಡಿ ಅದ್ಭುತವೆನಿಸಿ ವಿದ್ಯಾರ್ಥಿಗಳು ಅವರ ಕಾಪಿ ಮಾಡಲು ಶುರುಮಾಡಿದರು.