ಹಸು ಚಿನ್ನದ ಸರ ನುಂಗಿತು, ಆಭರಣ ಮರಳಿ ಪಡೆಯುವ ಸಲುವಾಗಿ ಈ ಕುಟುಂಬದವರು ಮಾಡಿದ್ದೇನು……?

ಹಸು ಇದು ಹಿಂದೂ ಸಂಸ್ಕೃತಿಯಲ್ಲಿ ಅತ್ಯಂತ ಪವಿತ್ರವಾದ ಪ್ರಾಣಿ ಎಂದು ಪರಿಗಣಿಸಲಾಗಿದೇ. ಅಷ್ಟೇ ಅಲ್ಲ ಗೋವಿನ ಶರೀರದಲ್ಲಿ ಮೂವತ್ಮುರು ಕೋಟಿ ದೇವತೆಗಳು ವಾಸ ಮಾಡುತ್ತಾರೆ ಎಂದು ಸಹ ಹೇಳಲಾಗುತ್ತದೆ. ಆದ್ದರಿಂದ ಹಸುವನ್ನು ಒಂದು ದೇವರ ರೂಪದಲ್ಲಿ ಪೂಜೆ ಮಾಡಲಾಗುತ್ತದೆ. ನಾವು ಎಲ್ಲೇ ಹಸು ಕಂಡರೆ ಸಾಕು ಅದರ ಬೆನ್ನ ಹಿಂದೆ ಮುಟ್ಟಿ ಅಥವಾ ಅದರ ಶರೀರಕ್ಕೆ ಸ್ಪರ್ಶ ಮಾಡಿ ನಮಸ್ಕಾರ ಮಾಡುತ್ತೇವೆ. ಮುಂಜಾನೆಯ ಸಮಯದಲ್ಲಿ ಹಸುವಿನ ದರ್ಶನ ಮಾಡುವದು ತುಂಬಾ ಪವಿತ್ರ ಎಂದು ಪರಿಗಣಿಸಲಾಗುತ್ತದೆ.

ಎಲ್ಲ ಜನರು ಹೇಗೆ ಪ್ರೀತಿಯಿಂದ ಹಸುವನ್ನು ಪೂಜೆ ಮಾಡುತ್ತಾರೆಯೋ ಹಾಗೆ ಈ ಕುಟುಂಬದವರು ಸಹ ಹಸುವನ್ನು ಪೂಜೆ ಮಾಡುತ್ತಿದ್ದರು. ಅವರು ಗೋವನ್ನು ಚೆನ್ನಾಗಿ ಶೃಂಗಾರ ಮಾಡಿ ಅದಕ್ಕೆ ತಿನ್ನಲು ನೈವೇದ್ಯ ಸಹ ತೋರಿಸಿದರು. ಅಷ್ಟೇ ಅಲ್ಲ ಅವರು ಹಸುವಿನ ಸಲುವಾಗಿ ಬೆಳ್ಳಿ ಬಂಗಾರದ ಆಭರಣ ಸಹ ಹಾಕಿದರು. ಆದರೆ ಈ ಹಸು ನೈವೇದ್ಯ ಎಂದು ಭಾವಿಸಿ ಚಿನ್ನದ ಅಭರಣವನ್ನು ನುಂಗಿತು.

ಈ ವಿಚಿತ್ರವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಶಿ ತಾಲೂಕಿನಲ್ಲಿಯ ಹರಪನಹಳ್ಳಿ ಎಂಬಲ್ಲಿ ಈ ಘಟನೆ ನಡೆದಿದೆ. ಈ ಪ್ರದೇಶದಲ್ಲಿ ಹಸುವನ್ನು ಪೂಜಿಸುವದು ತುಂಬಾ ಪವಿತ್ರವೆಂದು ತಿಳಿಯುತ್ತಾರೆ.ಇಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಹಸು ಸಾಕಿರುವದು ಕಂಡು ಬರುವದು. ಹಸು ಸಾಕಿರದಿದ್ದರೆ ರಸ್ತೆಯ ಮೇಲಿರುವ ಹಸುವನ್ನು ಕರೆದು ಅದಕ್ಕೆ ಚೆನ್ನಾಗಿ ಶೃಂಗಾರ ಮಾಡಿ, ಆಭರಣಗಳನ್ನು ಹಾಕಿ ಅವುಗಳನ್ನು ಪೂಜೆ ಮಾಡಿ, ಕೊನೆಗೆ ನೈವೇದ್ಯ ರೂಪದಲ್ಲಿ ಆಹಾರ ನೀಡುತ್ತಾರೆ. ಈ ಸಂಪ್ರದಾಯ ಬಹಳಷ್ಟು ಹಿಂದಿನ ಕಾಲದಿಂದಲೂ ಬಂದಿದೆ. ಆಕಳನ್ನು ಪೂಜೆ ಮಾಡುವದರಿಂದ ಆರೋಗ್ಯ, ಸಂಪತ್ತಿನಲ್ಲಿ ಹೆಚ್ಚಳವಾಗುವದು ಎಂಬುದು ಇಲ್ಲಿಯ ಸಂಪ್ರದಾಯವಾಗಿದೆ. ಈ ಹಳ್ಳಿಯ ಹೆಗಡೆ ಕುಟುಂಬದವರು ಸಹ ತಮ್ಮ ಮನೆಯಲ್ಲಿದ್ದ ಹಸುವನ್ನು ಚೆನ್ನಾಗಿ ಶೃಂಗಾರ ಮಾಡಿ, ಪೂಜೆ ಮಾಡಿ ಅದಕ್ಕೆ ನೈವೇದ್ಯ ತೋರಿಸಲು ಮುಂದಾದರು ನೈವೇದ್ಯ ನೀಡುವದಕ್ಕಿಂತ ಮುಂಚೆ ಹೆಗಡೆ ಪರಿವಾರದ ಮುಖ್ಯಸ್ಥರು ಹಸುವಿನ ಬಾಯಲ್ಲಿ 20 ಗ್ರ್ಯಾಂ ತೂಕದ ಚಿನ್ನದ ಸರವನ್ನು ಇಟ್ಟರು. ಹೀಗೆ ಮಾಡುವದರಿಂದ ಬಂಗಾರದ ಚಿನ್ನದ ಸಂಪತ್ತಿನಲ್ಲಿ ಹೆಚ್ಚಳ ವಾಗುವದು ಎಂಬುದು ಇಲ್ಲಿಯ ನಂಬಿಕೆಯಾಗಿದೆ. ಆದರೆ ಹಸು ತನ್ನ ಬಾಯಲ್ಲಿ ಇಟ್ಟ ಚಿನ್ನದ ಸರವನ್ನು ಆಕಸ್ಮಿಕವಾಗಿ ನುಂಗಿ ಬಿಟ್ಟಿತು.

ಆ ಆಭರಣ ಸುಮಾರು 20 ಗ್ರ್ಯಾಂ ನಷ್ಟಿತ್ತು. ಇದನ್ನು ಕಂಡ ಕುಟುಂಬದ ವ್ಯಕ್ತಿಗಳು ಹಸುವಿನ ಸಗಣಿಯಲ್ಲಿ ಆಭರಣ ಮರಳಿ ಬರಬಹುದು ಎಂದು ಊಹಿಸಿ ದಿನಾಲೂ ಹಸುವಿನ ಸಗಣಿಯನ್ನು ತಪಾಸಣೆ ಮಾಡುತ್ತಿದ್ದರು. ಹೀಗೆ ಸುಮಾರು 35 ದಿವಸಗಳ ವರೆಗೆ ಕಾದರು ಆದರೆ ಸಗಣಿಯ ಮುಖಾಂತರ ಯಾವುದೇ ಪ್ರಕಾರದ ಆಭರಣ ಅಥವಾ ಅದರ ಒಂದು ತುಂಡು ಸಹ ಹೊರಗೆ ಬರಲಿಲ್ಲ. ಹೀಗಾಗಿ ಬೇಸರಗೊಂಡ ಕುಟುಂಬದವರು ಚಿನ್ನದ ಆಭರಣ ಹೊರಗಡೆ ತಗೆಯುವ ಸಲುವಾಗಿ ಬೇರೆ ಮಾರ್ಗವೊಂದನ್ನು ಅನುಸರಿಸಿದರು.

ಸುಮಾರು 35 ದಿವಸಗಳ ವರೆಗೆ ಕಾದು ನೋಡಿದ ನಂತರ ಇವರಿಗೆ ಯಾವುದೇ ಪ್ರಕಾರದ ಚಿನ್ನ ದೊರೆಯಲಿಲ್ಲ. ಆಗ ಇವರು ಕೊನೆಯ ಪರ್ಯಾಯವೆಂದು ಪಶುವೈದ್ಯರ ಮೊರೆ ಹೋದರು. ಪ್ರಾರಂಭದಲ್ಲಿ ಈ ಘಟನೆ ಕೇಳಿ ಪಶುವೈದ್ಯರು ಸಹ ಆಶ್ಚ#ರ್ಯ ಪಟ್ಟರು. ಆದರೆ ಇವರು ಹೇಳಿರುವ ಹೇಳಿಕೆ ಸರಿ ಇದೆಯೋ ಇಲ್ಲವೋ ಎಂಬುದನ್ನು ಪರೀಕ್ಷೆ ಮಾಡಲು ತಮ್ಮ ಬಳಿಯಲಿದ್ದ ಮೆಟಲ್ ಡಿಟೆಕ್ಟರ್ ಉಪಯೋಗ ಮಾಡಿ ಹಸುವಿನ ಹೊಟ್ಟೆಯಲ್ಲಿ ಚಿನ್ನದ ಸರ ಇದೆಯೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಿದರು. ತದನಂತರ ಹಸುವಿನ ಹೊಟ್ಟೆಯಲ್ಲಿ ಚಿನ್ನದ ಸರ ಇದೆ ಎಂದು ಖಚಿತವಾದಾಗ ಹಸುವಿನ ಮೇಲೆ ಶಸ್ತ್ರಚಿಕಿತ್ಸೆ ಮಾಡಿ ಹೊಟ್ಟೆಯಲಿದ್ದ ಸರವನ್ನು ಹೊರಗಡೆ ತಗೆದರು.

ವಿಚಿತ್ರ ವೇನೆಂದರೆ ಚಿನ್ನದ ಸರ ಹೊರಗಡೆ ತಗೆದಾಗ ಅದರ ತೂಕ ಮಾತ್ರ ಕಡಿಮೆಯಾಗಿತ್ತು ಅಂದರೆ ಮೊದಲು 20 ಗ್ರ್ಯಾಂ ಇದ್ದ ಆಭರಣ ಹಸುವಿನ ಹೊಟ್ಟೆಯಿಂದ ಹೊರಗೆ ತಗೆದಾಗ ಅದರ ತೂಕ 18 ಗ್ರಾಮ್ ಆಗಿತ್ತು. ಅಷ್ಟೇ ಅಲ್ಲದೆ ಆ ಸರ ತುಂಡಾಗಿದ್ದು ಸಹ ಕಂಡು ಬಂದಿತು. ಆದ್ದರಿಂದ ಎರಡು ಗ್ರಾಮ್ ಚಿನ್ನ ಕಳೆದು ಹೋಗಿದ್ದರು ಸಹ ಚಿನ್ನದ ಸರ ಸಿಕ್ಕಿತು ಎಂದು ಕುಟುಂಬದವರು ಖುಷಿ ಪಟ್ಟರು.