Viral Video: ಹುಡುಗಿಯು ಸ್ಕೂಟಿ ಸ್ಟಾರ್ಟ್ ಮಾಡುತ್ತಲೇ ಸ್ಕೂಟಿಗೆ ಏನಾಯಿತೆಂಬುದು ಹುಡುಗಿಗೂ ಗೊತ್ತಾಗಲಿಲ್ಲ! ಮುಂದಿನದನ್ನು ನೀವೇ ನೋಡಿ….
ಸೋಶಿಯಲ್ ಮೀಡಿಯಾ ನಿಜವಾಗಿಯೂ ಕೆಲವೊಮ್ಮೆ ತಮಾಷೆಯ ಮಹಾಸಾಗರವಾಗಿದೆ ಎಂದು ಅನಿಸುತ್ತದೆ. ಏಕೆಂದರೆ ಇಲ್ಲಿ ತಮಾಷೆಯ ಅನೇಕ ವಿಡಿಯೋಗಳು ನೇಟಿಜನ್ಸ್ ಗಳ ಮನಸೂರೆಗೊಳ್ಳುತ್ತದೆ. ಹಾಗೂ ಇಂತ ವಿಡಿಯೋಗಳು ಸಾಕಷ್ಟು ವೈರಲ್ ಸಹ ಆಗುತ್ತವೆ. ಇಂಥ ತಮಾಷೆಯ ವಿಡಿಯೋಗಳನ್ನು ನೋಡಿದಾಗ ಪ್ರತಿಯೊಬ್ಬರಿಗೂ ತಮ್ಮ ನಗು ತಡೆಯುವದು ಅಸಾಧ್ಯವಾಗಿ ಬಿಡುತ್ತದೆ.
ಈ ವಿಡಿಯೋ ಒಂದು ಹುಡುಗಿಯು ಸ್ಕೂಟಿ ನಡೆಸುವ ಸಂದರ್ಭದಲ್ಲಿಯದು ಇದೆ. ಅದೃಷ್ಟವೆಂದರೆ ಈ ಹುಡುಗಿಗೆ ಬಹುಶಃ ಏನು ಆಗಿಲ್ಲ. ಆದರೆ ಸ್ಕೂಟಿ ನಡೆಸುವ ಸಂದರ್ಭದ ವಿಡಿಯೋ ನೋಡಿದಾಗ ಮಾತ್ರ ನಕ್ಕು ನಕ್ಕು ಹೊಟ್ಟೆ ಹುಣ್ಣಾಗುತ್ತದೆ.
ಕೆಲವೇ ಸೆಕೆಂಡುಗಳ ಈ ವಿಡಿಯೋದಲ್ಲಿ ಸ್ಕೂಟಿ ಮನೆಯ ಅಂಗಳದಲ್ಲಿ ನಿಂತದ್ದು ಕಂಡು ಬರುತ್ತದೆ. ಅಲ್ಲೇ ಬಟ್ಟೆಗಳನ್ನು ಒಣಗಿಸಲು ಹಾಕಿದಂತಿದೆ. ಅಷ್ಟರಲ್ಲಿ ಒಂದು ಹುಡುಗಿಯು ಆ ಸ್ಕೂಟಿ ನಡೆಸಲು ಅಲ್ಲಿಗೆ ಬರುತ್ತಾಳೆ. ಮುಂದೆ ನಡೆದದ್ದು ಮಾತ್ರ ತುಂಬಾ ಬೆರಗುಗೊಳಿಸುವಂತದ್ದು ಜೊತೆಗೆ ತಮಾಷೆಯದ್ದು ಆಗಿದೆ. ಯಾಕೆಂದರೆ ಹುಡುಗಿಯು ಸ್ಕೂಟಿ ಸ್ಟಾರ್ಟ್ ಮಾಡಿದ ನಂತರ ತಕ್ಷಣ ಎಕ್ಸಲೇಟರ್ ಅಥವಾ ಫುಲ್ ರೇಸ್ ಮಾಡಿದ್ದಾಳೆ. ಇದರಿಂದಾಗಿ ಸ್ಕೂಟಿ ಮೇಲೆ ಕುಳಿತ ಹುಡುಗಿಯ ಬ್ಯಾಲೆನ್ಸ್ ತಪ್ಪಿ ಬಿಸಿಲಲ್ಲಿ ಬಟ್ಟೆಗಳನ್ನು ಒಣಗಿಸಲು ಇಟ್ಟ ಸ್ಟ್ಯಾಂಡ್ ಜೊತೆಗೆ ಮುನ್ನುಗ್ಗಿದ್ದಾಳೆ. ಹಾಗೆಯೇ ಸ್ವಲ್ಪ ಮುಂದೆ ಹೋದ ನಂತರ ಹುಡುಗಿಯು ಸ್ಕೂಟಿ ಜೊತೆಗೆ ಕೆಳಗೆ ಬಿದ್ದಿದ್ದಾಳೆ.
ವೀಡಿಯೋ ನೋಡಿ
ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ black_lover__ox ಹೆಸರಿನ ಪೇಜಿನಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋ ದಿಂದ ತಿಳಿದುಬರುವ ಮಹತ್ವದ ವಿಷಯವೇನೆಂದರೆ ಅತಿಯಾದ ಆತ್ಮವಿಶ್ವಾಸದಿಂದ ಯಾವುದೇ ವಾಹನವನ್ನು ನಡೆಸಲು ಹೋಗಬಾರದು. ಏಕೆಂದರೆ ವಾಹನಕ್ಕಿಂತ ಪ್ರಾಣ ಅಮೂಲ್ಯವಾದದ್ದು.