VIRAL VIDEO : ಈ ಹಾವಿನ ಆಕ್ಟಿಂಗ್ ಮುಂದೆ ದೊಡ್ಡ ದೊಡ್ಡ ನಟರ ಆಕ್ಟಿಂಗ್ ಸಹ ಮಟಾಶ್! ಬೆರಳು ಟಚ್ ಮಾಡುತ್ತಿದ್ದಂತೆ ಮಾಡುತ್ತದೆ ಸತ್ತಂತೆ ನಾಟಕ..

ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ವಿವಿಧ ಪ್ರಾಣಿ, ಪಕ್ಷಿಗಳ ಚಾಣಕ್ಷತನದ ಬಗ್ಗೆ ಹಾಗೂ ಅವುಗಳ ವಿವಿಧ ಬುದ್ಧಿವಂತಿಕೆಯ ಬಗ್ಗೆ ಅನೇಕ ವಿಡಿಯೋಗಳು ಶೇರ್ ಆಗುತ್ತಿರುತ್ತದೆ. ಈ ಮಾಧ್ಯಮದಿಂದ ಪ್ರಾಣಿಗಳು ಸಹ ಎಷ್ಟೊಂದು ಜಾಣವಾಗಿರುತ್ತವೆ ಎಂಬದು ಸೋಶಿಯಲ್ ಮೀಡಿಯಾ ಮುಖಾಂತರ ನಮಗೆಲ್ಲರಿಗೂ ತಿಳಿದುಬರುತ್ತಿದೆ.

ಪ್ರತಿಯೊಂದು ಪ್ರಾಣಿಗಳು ತಮ್ಮಷ್ಟಕ್ಕೆ ತಾವು ತುಂಬಾ ಚಾಣಾಕ್ಷ ಹಾಗು ಜಾಣ ವಾಗಿರುತ್ತವೆ. ಪ್ರತಿಯೊಂದು ಪ್ರಾಣಿ-ಪಕ್ಷಿಯು ಮನುಷ್ಯನಿಂದ ಅಥವಾ ಇನ್ನಿತರ ಪ್ರಾಣಿ-ಪಕ್ಷಿಗಳಿಂದ ತಮ್ಮ ಜೀವವನ್ನು ಉಳಿಸಿಕೊಳ್ಳಲು ಏನಾದರೊಂದು ಪ್ರಯತ್ನ ಅಥವಾ ನಟನೆ ಮಾಡುತ್ತಲೇ ಇರುತ್ತವೆ. ಇದಕ್ಕೆ ಸಂಬಂಧಿಸಿದ ಎಷ್ಟೋ ವಿಡಿಯೋಗಳನ್ನು ಇಲ್ಲಿಯವರೆಗೆ ನಾವು ನೋಡುತ್ತಲೇ ಬಂದಿದ್ದೇವೆ. ಈಗ ಈ ಹಾವಿನ ಸರದಿ.

ಈ ಹಾವಿನ ಆಕ್ಟಿಂಗ್ ನೋಡಿದಾಗ ಇದಕ್ಕೆ ಯಾವುದಾದರೊಂದು ದೊಡ್ಡ ಪ್ರಶಸ್ತಿ ನೀಡಲೇಬೇಕು ಎಂದೆನಿಸುತ್ತದೆ. ಇದು ಅಷ್ಟೊಂದು ಅಭಿನಯದಲ್ಲಿ
ಚತುರವಾಗಿದೆ. ಸಾಮಾನ್ಯವಾಗಿ ಹಾವಿನ ವಿಡಿಯೋ ನೋಡಿದಾಗ ಭಯ ಬರುವುದು ಸಹಜ, ಆದರೆ ಈ ಹಾವಿನ ವಿಡಿಯೋ ನೋಡಿದಾಗ ಮುಖದ ಮೇಲೆ ಸ್ಮೈಲ್ ಬಂದೇ ಬರುತ್ತದೆ.

ಪ್ರಸ್ತುತ ವಿಡಿಯೋವನ್ನು ವೈರಲ್ ಹಾಗ್ ಅಕೌಂಟ್ ಮುಖಾಂತರ ಶೇರ್ ಮಾಡಲಾಗಿದೆ. ಈ ವಿಡಿಯೋ ನೋಡಿದಾಗ ನಿಮಗೆ ಭಯ ಹುಟ್ಟುವ ಬದಲಾಗಿ ತಮಾಷೆಯೆನ್ನಿಸುತ್ತದೆ. ಈ ವಿಡಿಯೋದಲ್ಲಿ ಹಾವು ನೆಲದ ಮೇಲೆ ಮೇಲ್ಮೈ ಮುಖ ಮಾಡಿ ಬಿದ್ದಿದೆ. ಆಗ ವ್ಯಕ್ತಿಯೊಬ್ಬನು ಬೆರಳಿನಿಂದ ಹಾವಿಗೆ ಸ್ಪರ್ಶ ಮಾಡುತ್ತಾನೆ. ಆಗ ಹಾವು ಸ್ಪರ್ಶ ಮಾಡಿದ ವ್ಯಕ್ತಿಗೆ ಕಚ್ಚುತ್ತದೆ ಏನೋ ಎಂದು ನಮಗನಿಸುತ್ತದೆ. ಆದರೆ ಹಾವು ಮಾತ್ರ ಬೇರೆಯೇ ಡ್ರಾಮಾ ಮಾಡುತ್ತದೆ. ಸ್ಪರ್ಶವಾದ ನಂತರ ಹಾವು ಬಾಯಿಯನ್ನು ದೊಡ್ಡದು ಮಾಡಿ ನಾಲಿಗೆ ಹೊರತೆಗೆದು ನೆಲದ ಮೇಲೆ ಅಲ್ಲಿಯೇ ಕುಸಿದು ಸತ್ತಂತೆ ಬೀಳುತ್ತದೆ. ಮೊದಲು ಸ್ಪರ್ಶ ಮಾಡಿದ ವ್ಯಕ್ತಿಗೆ ಹಾವು ಕಚ್ಚುತ್ತದೆನೋ ಎನಿಸುತ್ತದೆ ಆದರೆ ಅದು ಸತ್ತಂತೆ ನಾಟಕ ಮಾಡುತ್ತದೆ. ನಿಜವಾಗಿಯೂ ಹಾವಿನ ಈ ಆಕ್ಟಿಂಗ್ ಅದ್ಭುತವಾಗಿದೆ.

ನೋಡಿ ಈ ವಿಡಿಯೋದಲ್ಲಿ…