ಇನ್ನೊಬ್ಬರದ್ದು ಕಾಪಿ ಮಾಡುವ ಭರದಲ್ಲಿ ಕೆಸರಿನ ಹೊಂಡದಲ್ಲಿ ಡಮಾರ್ ಆದಳು ಹುಡುಗಿ!ಒಮ್ಮೆ ನೋಡಿ ಈ ತಮಾಷೆಯ ವಿಡಿಯೋ..

ಕೆಲವೊಂದು ಸಲ ಇನ್ನೊಬ್ಬರ ಕಾಪಿ ಮಾಡಲು ಹೋಗಿ ತುಂಬಾ ಸಂಕಷ್ಟಕ್ಕೆ ಅಥವಾ ಅವಮಾನಕ್ಕೆ ನಮ್ಮನ್ನು ನಾವೇ ಎಡೆ ಮಾಡಿಕೊಳ್ಳುತ್ತೇವೆ. ಹೀಗಾಗಿ ಇನ್ನೊಬ್ಬರ ತಮಾಷೆಗೆ ಗುರಿಯಾಗಿ ಬಿಡುತ್ತೇವೆ. ಈ ವಿಡಿಯೋ ಇದೇ ಪಾಠವನ್ನು ಇಲ್ಲಿ ಕಲಿಸುತ್ತದೆ ಎಂದರೆ ತಪ್ಪಾಗಲಾರದು.

ಮಕ್ಕಳಿಗೆ ಆಟವೆಂದರೆ ತುಂಬಾ ಇಷ್ಟ. ಮಕ್ಕಳು ಪ್ರತಿಯೊಂದು ಕೆಲಸವನ್ನು ಆಟ ಆಡುತ್ತಲೇ ಪೂರ್ಣ ಮಾಡಬೇಕೆಂಬ ಆಸೆ ಹೊತ್ತಿರುತ್ತಾರೆ. ಹುಡುಗ-ಹುಡುಗಿಯರ ಇಂತಹ ಅನೇಕ ವಿಡಿಯೋಗಳು ಈಗಾಗಲೇ ವೈರಲ್ ಆಗಿವೆ. ಎಷ್ಟೋ ಹುಡುಗಿಯರು ಹುಡುಗರ ಹಾಗೆ ಕುಣಿಯಲು, ಜಿಗಿಯಲು ಹೀಗೆ ಕಾಪಿ ಮಾಡಲು ಹೋಗುತ್ತಾರೆ. ಅಲ್ಲಿ ಕೆಲವೊಮ್ಮೆ ಬೇರೆಯೇ ಆಗುತ್ತದೆ. ಇಲ್ಲಿಯೂ ಇದೇ ರೀತಿಯಾಗಿದೆ.

ಈ ವಿಡಿಯೋದಲ್ಲಿ ಎರಡು ಮಕ್ಕಳು ಹಗ್ಗದ ಸಹಾಯದಿಂದ ಆಡುತ್ತಿದ್ದಾರೆ. ವ್ಯಕ್ತಿಯೊಬ್ಬನು ಅವರಿಗೆ ಸಹಾಯ ಮಾಡುತ್ತಿದ್ದಾನೆ. ಹುಡುಗನು ಹಗ್ಗದ ಸಹಾಯದಿಂದ ಕೆಸರಿನಿಂದ ತುಂಬಿದ ಹೊಂಡವನ್ನು ಸಹಜವಾಗಿ ದಾಟುತ್ತಾನೆ. ನಂತರ ಹುಡುಗಿಯೂ ಸಹ ಇದೇ ರೀತಿ ಪ್ರಯತ್ನಿಸಲು ಹೋಗಿದ್ದಾಳೆ. ಆದರೆ ಯಶಸ್ಸು ಮಾತ್ರ ಲಭಿಸಿಲ್ಲ. ಬದಲಾಗಿ ಎಲ್ಲರ ತಮಾಷೆಗೆ ಗುರಿಯಾಗಿದ್ದಾಳೆ. ಹುಡುಗನ ಹಾಗೆ ಹುಡುಗಿಯು ಹಗ್ಗವನ್ನು ಹಿಡಿದು ನೇತಾಡಿ ಕೆಸರಿನ ಹೊಂಡವನ್ನು ದಾಟಬೇಕು ಎನ್ನುವಷ್ಟರಲ್ಲಿ ಆಕೆಯ ಬ್ಯಾಲೆನ್ಸ್ ತಪ್ಪಿ ಅದೇ ಕೆಸರಿನ ಹೊಂಡದಲ್ಲಿ ಡಮಾರ್ ಎಂದು ಬಿದ್ದು ಬಿಟ್ಟಿದ್ದಾಳೆ. ಸಂಪೂರ್ಣ ದೇಹವೆಲ್ಲ ಕೆಸರಿನಲ್ಲಿ ಮುಳುಗಿದೆ. ಹುಡುಗಿಯು ನಂತರ ಅಲ್ಲಿಂದ ಎದ್ದು ಹೋಗಿಬಿಡುತ್ತಾಳೆ.

ನೋಡಿ ಈ ವಿಡಿಯೋ…

ತುಂಬಾ ತಮಾಷೆಯಾಗಿರುವ ಈ ವಿಡಿಯೋವನ್ನು lustigejoke ಹೆಸರಿನ ಅಕೌಂಟ್ ಮುಖಾಂತರ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 1 ಲಕ್ಷ 70 ಸಾವಿರವರೆಗೆ ವೀಕ್ಷಿಸಲಾಗಿದೆ. 2400 ಜನರು ವಿಡಿಯೋಗೆ ಲೈಕ್ ಮಾಡಿದ್ದಾರೆ.

ಈ ವಿಡಿಯೋ ನೋಡಿ ಅನೇಕ ನೇಟಿಜನ್ಸ್ ಗಳು ತಮ್ಮ ಪ್ರತಿಕ್ರಿಯೆಯನ್ನು ಹೊರ ಹಾಕಿದ್ದಾರೆ. ಅದರಲ್ಲಿ ಒಬ್ಬನು ‘ಸ್ಥೂಲಕಾಯದ ಹುಡುಗಿಯರ ಜೊತೆಗೆ ಯಾವಾಗಲೂ ಹೀಗೆಯೇ ಆಗುತ್ತದೆ ಎಂದಿದ್ದಾನೆ’. ಇನ್ನೊಬ್ಬನು ‘ಸೂಪರ್ ವಿಲ್ಲನ್ ನ ಜನ್ಮ ಇಲ್ಲಿಯೇ ಆಗಿದೆ’ ಎಂದಿದ್ದಾನೆ.