ಈ ವಿಡಿಯೋದಲ್ಲಿ ಒಂದು ಸಂದೇಶ ಅಡಗಿದೆ, ವೀಡಿಯೋ ನೋಡಿದ ಮೇಲೆ ನೀವೇ ಕಾಮೆಂಟ್ ಮಾಡಿ ಹೇಳಿ!!

ಇಂದಿನ ಜೀವನ ತುಂಬಾ ಸರಳವಾದ ಜೀವನವಲ್ಲ. ನಾವು ಜೀವಿಸಬೇಕಾದರೆ ಏನಾದ್ರೂ ಕಷ್ಟಪಟ್ಟು ಅದರಿಂದ ಹಣಗಳಿಸಿ ಹೊಟ್ಟೆ ತುಂಬಿಸಿಕೊಳ್ಳುವದು ತುಂಬಾ ಅವಶ್ಯಕ ವಾಗಿದೆ. ಏಕೆಂದರೆ ಇಂದು ಪ್ರತಿಯೊಂದು ವಸ್ತು ಅಥವಾ ಕೆಲಸ ಹಣದ ಮೇಲೆ ನಿರ್ಭರವಾಗಿದೆ. ‘ ಇಂದು ದುಡ್ಡಿದ್ದರೇ ಅವನೇ ದೊಡ್ಡಪ್ಪ’. ಇಂದಿನ ಸಮಾಜ ಸಹ ಹಣವುಳ್ಳ ವ್ಯಕ್ತಿಗೆ ತುಂಬಾನೇ ಆದರ ನೀಡುತ್ತೆ ತದ್ವಿರುದ್ಧ ಹಣವಿಲ್ಲದ ವ್ಯಕ್ತಿಯ ಮುಖವು ಸಹ ನೋಡಲು ಬೇಸರ ಪಡುತ್ತೆ ಇಂದಿನ ಜನ.

ಇಂದು ಉತ್ತಮವಾದ ಜೀವನ ನಡೆಸಬೇಕಾದ ನಮ್ಮ ಹತ್ತಿರ ತುಂಬಾ ದುಡ್ಡು ಇರುವದು ಅವಶ್ಯಕವಾಗಿದೆ. ಆದರೆ ಕೆಲವೊಮ್ಮೆ ನಮ್ಮ ಹತ್ತಿರ ಎಷ್ಟೇ ದುಡ್ಡಿದ್ರು ಅದು ಉಪಯೋಗಕ್ಕೆ ಬರುವದಿಲ್ಲ. ನಾವು ದುಡ್ಡು ಸಂಪಾದಿಸಬಹುದು ವಿನಃ ಅದನ್ನು ಸಾಯುವಾಗ ಜೊತೆಗೆ ಕೊಂಡೊಯ್ಯಲು ಸಾಧ್ಯವಿಲ್ಲ. ಎಷ್ಟೇ ಸಂಪಾದನೆ ಮಾಡಿದರು ಸಹ ನಾವು ಬರುವಾಗ ಹೇಗೆ ಬರಿಗೈಯಲ್ಲಿ ಬಂದಿದ್ದೇವೋ ಹಾಗೆ ಈ ಜಗತ್ತು ಬಿಟ್ಟು ಹೋಗುವಾಗ ಸಹ ಬರಿಗೈಯಿಂದಲೇ ಹೋಗಬೇಕಾಗುತ್ತದೆ.

ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಪ್ರಸ್ತುತ ವಿಡಿಯೋ ಒಂದು ಉತ್ತಮವಾದ ಸಂದೇಶ ನೀಡುವ ವೀಡಿಯೋ ಇದಾಗಿದೆ. ಆದರೆ ಈ ವೀಡಿಯೋ ನೋಡುವವರ ಕಣ್ಣಿಗೆ ಮಾತ್ರ ಬೇರೆ ಬೇರೆಯಾದ ಸಂದೇಶ ಸೃಷ್ಟಿ ಮಾಡಬಹುದು ಹೀಗಾಗಿ ಈ ವೀಡಿಯೋ ಒಂದೇ ಸಂದೇಶ ನೀಡುತ್ತೆ ಅಂತ ಹೇಳಲು ಬರುವದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಪ್ರತಿಯೊಬ್ಬ ನೆಟ್ಟಿಗನ ಯೋಚನೆ ಬೇರೆ ಬೇರೆಯಾಗಿರುತ್ತದೆ ಅಲ್ಲದೆ ಅವರು ವಿಚಾರ ಮಾಡುವ ಮಾರ್ಗ ಸಹ ಭಿನ್ನ ಭಿನವಾಗಿ ಇರುತ್ತದೆ ಹೀಗಾಗಿ ಈ ವೀಡಿಯೋ ಯಾವ ಸಂದೇಶ ನೀಡುವದು ಎಂಬುದು ನೀವು ಸಹ ಈ ವಿಡಿಯೋ ನೋಡಿ ತಿಳಿಸಿ.

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಒಂದು ಬಸವನ ಹುಳು ತನ್ನ ಮೇಲೆ ಶಂಖುವಿನ ಕವಚ ಹೊದ್ದಿಕೋಂಡು ತನ್ನಷ್ಟಕ್ಕೆ ತಾನು ಒಂದು ಎಲೆಯ ಮೇಲಿಂದ ಸಾವಕಾಶವಾಗಿ ಹೊಂಟಿರುತ್ತದೆ ಆದರೆ ಆ ಎಲೆಯ ಎದುರುಗಡೆಯಿಂದ ಒಂದು ಹಾವು ಬರುತ್ತದೆ. ಹಾವು ಬರುವದನ್ನು ನೋಡಿದ ಬಸವನ ಹುಳು ತನ್ನ ಮುಖವನ್ನು ಶಂಖಿನ ಒಳಗಡೆ ಮುಚ್ಚಿಕೊಳ್ಳುತ್ತದೆ ಕೆಲವು ಸೆಕೆಂಡ್ ಗಳ ವರೆಗೆ ಮುಚ್ಚಿಕೊಂಡ ನಂತರ ಮತ್ತೆ ಅದರ ಮುಖವನ್ನು ಹೊರಗಡೆ ಹಾಕುತ್ತದೆ. ಹಾಕಿದ ನಂತರ ಹಾವು ಇದರ ಮುಖವನ್ನೆ ನೋಡುತ್ತಾ ಇರುತ್ತದೆ. ಇದನ್ನು ಅರಿತ ಬಸವನ ಹುಳ ತನ್ನ ಮೇಲೆ ಕವಚವಿದೆ ಹಾವು ಹೇಗೆ ನನ್ನ ತಿನ್ನುತ್ತೆ ಅನ್ನೋ ಭರವಸೆಯಿಂದ ಹಾವಿನ ಮುಂಡೆಗಡೆಯಿಂದ ಸಾವಕಾಶವಾಗಿ ಹೋಗಲು ಪ್ರಯತ್ನ ಮಾಡುತ್ತದೆ.

ಹಾವಿನ ಮುಂದುಗಡೇಯಿಂದ ಹೋಗುತ್ತಿರುವ ಬಸವನ ಹುಳುವನ್ನು ಕಂಡು ಹಾವು ಅದರ ಮುಖದ ಮೇಲೆ ಒಮ್ಮೆಲೇ ಅ#ಟ್ಯಾಕ್ ಮಾಡುತ್ತೆ. ಹಾವು ನನ್ನನ್ನು ತಿನ್ನಲು ಸಾಧ್ಯವಾಗುವದಿಲ್ಲ ಅನ್ನೋ ಅತೀ ವಿಶ್ವಾಸದಿಂದ ಹೊರಟ ಬಸವನ ಹುಳದ ಮುಖ ಹಾವಿನ ಬಾಯಲ್ಲಿ ಹೋದಾಗ ಅದರಿಂದ ಬಿಡಿಸಿಕೊಳ್ಳಲು ಬೇರೆ ಮಾರ್ಗವೇ ಇರಲಿಲ್ಲ. ಹೀಗಾಗಿ ಹಾವು ಆ ಕವಚವಿದ್ದರು ಸಹ ಬಸವನ ಹುಳವನ್ನು ನುಂಗಿ ಬಿಡುತ್ತದೆ.

ನೀವು ಸಹ ಈ ವಿಡಿಯೋ ನೋಡಿ ಈ ವಿಡಿಯೋದಲ್ಲಿ ಅಡಗಿರುವ ಸಂದೇಶವನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

ವೀಡಿಯೋ ನೋಡಿ. …….