ಸಾಕಿದ ಹಸುವಿನ ಜೀವ ಕಾಪಾಡಲು ಚಿರತೆಯೊಂದಿಗೆ ಫೈಟ್ ಮಾಡಿದ ಧೀರ ಮಹಿಳೆ! ಬೇರೆ ದಾರಿ ಕಾಣದೆ ಓಡಿ ಹೋದ ಚಿರತೆ!
ಭಿಮತಾಲ:- ಮಹಿಳೆಯರು ಎಷ್ಟು ಧೈರ್ಯವಂತರೂಅನ್ನೋದು ನಾವು ಇತಿಹಾಸ ಹಾಗೂ ಚಲನಚಿತ್ರ , ಹಾಗೆ ನೈಜ ಜೀವನದಲ್ಲಿಯೂ ಸಾಕಷ್ಟುಪ್ರಾಮಾಣದಲ್ಲಿ ನೋಡಿದ್ದೇವೆ ಅಲ್ಲದೆ ಅವರ ಸಾಹಸದ ಬಗ್ಗೆ ಕೇಳಿದ್ದೇವೆ. ಉತ್ತರಾಖಂಡ್ ದಲ್ಲಿ ಸಹ ಅನೇಕ ಮಹಿಳೆಯರ ಸಾಹಸದ ಬಗ್ಗೆ ಹಲವಾರು ಘಟನೆಗಳು ನಡೆದಿವೆ. ಇಂದು ಸಹ ನಾವು ಒಬ್ಬ ಸಾಹಸಿ ಮಹಿಳೆಯ ಕುರಿತು ತಿಳಿಸುವವರಿದ್ದೇವೆ.
ಈ ಘಟನೆ ಮಲವತಾಲ್ ಗ್ರಾಮಪಂಚಯತದ ದೇವಕಾಧುರ್ ಎಂಬ ಊರಿನಲ್ಲಿಯದು ಇದೆ. ಅಷ್ಟಕ್ಕೂ ನಡೆದದ್ದು ಏನೆಂದರೆ, ಅಲ್ಲಿಯ ದುಮಕಾ ಪರಿವಾರದ ಒಂದು ಗೋಶಾಲೆ ಇದೆ ಅದರಲ್ಲಿ ಸಾಕಷ್ಟು ಆಕಳುಗಳಿವೆ. ನವೀನ್ ದುಮಕಾ ಹಾಗೂ ಸರಸ್ವತಿ ದುಮಕಾ ಇಬ್ಬರು ದಂಪತಿಗಳು ಈ ಗೋಶಾಲೆಯನ್ನು ನಡೆಸುತ್ತಿದ್ದಾರೆ. ಆದರೆ ರವಿವಾರ ರಾತ್ರಿಯ 2 ಗಂಟೆಯ ಸಮಯದಲ್ಲಿ ಈ ಗೋಶಾಲೆಯ ಒಳಗೆ ಒಂದು ಚಿರತೆ ಪ್ರವೇಶ ಮಾಡಿತು. ತದನಂತರ ಅಲಿದ್ದ ಆಕಳುಗಳ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿತು.

ಗೋಶಾಲೆಯಲ್ಲಿದ್ದ ಎಲ್ಲ ಗೋವುಗಳು ಚಿರತೆಯನ್ನು ಕಂಡು ಜೋರಾಗಿ ಹಲಬಲು ಪ್ರಾರಂಭ ಮಾಡಿದವು ಬದಿಯ ಮನೆಯಲ್ಲಿ ಮಲಗಿದ್ದ ಸರಸ್ವತಿ ದುಮಕಾ ಅವರಿಗೆ ಈ ಧ್ವನಿಯನ್ನು ಕೇಳಿಸಿತು ತದನಂತರ ಸರಸ್ವತಿ ಅವರು ಗೋಶಾಲೆಯಲ್ಲಿ ಬಂದು ನೋಡಿದಾಗ ಚಿರತೆ ಒಂದು ಗೋವಿನ ಮೇಲೆ ಹಲ್ಲೆ ಮಾಡುತ್ತಿತ್ತು ತಕ್ಷಣವೇ ಅವರು ಬಳಿಯಲಿದ್ದ ಒಂದು ಕಟ್ಟಿಗೆಯನ್ನು ತಗೆದುಕೊಂಡು ಅದನ್ನು ಓಡಿಸಲು ಪ್ರಯತ್ನ ಮಾಡತೊಡಗಿದರು ಆದರೆ ಅವರನ್ನು ಕಂಡ ಚಿರತೆ ಆಕಳನ್ನು ಬಿಟ್ಟು ಇವರ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿತು ಆಗ ಇವರು ಸಹ ತಮ್ಮ ಕೈಯಲ್ಲಿದ್ದ ಕಟ್ಟಿಗೆಯಿಂದ ಚಿರತೆಯ ಬಾಯನ್ನು ಒತ್ತಿ ಹಿಡಿದು ಅದರ ಜೊತೆಗೆ ಗುದ್ದಾಟ ನಡೆಸಿದರು ಕೊನೆಗೆ ತಾವು ಕೆಳಗೆ ಬಿದ್ದಾಗ ಅವರು ಜೋರಾಗಿ ಕೂಗಲು ಪ್ರಾರಂಭ ಮಾಡಿದರು. ಆಗ ಬದಿಯಲ್ಲಿದ್ದ ಜನರು ಎಚ್ಚರಗೊಂಡು ಗೋಶಾಲೆಯ ಕಡೆಗೆ ಬರತೊಡಗಿದರು ಅದನ್ನು ಕಂಡ ಚಿರತೆ ಗಾಬರಿಯಿಂದ ಗೋವು ಮತ್ತು ಮಹಿಳೆಯನ್ನು ಅಲ್ಲಿಯೇ ಬಿಟ್ಟು ಬದಿಯ ಕಾಡಿನಲ್ಲಿ ಹೊರಟು ಹೋಯಿತು. ತನ್ನ ಜೀವದ ಹಂಗನ್ನು ತೊರೆದು ಗೋಮಾತೆಯ ರಕ್ಷಣೆ ಮಾಡಿದ ತಾಯಿ ತುಂಬಾ ಗ್ರೇಟ್.
ಚಿರತೆ ಮತ್ತು ಇವರ ನಡುವಿನ ಸಮರದಲ್ಲಿ ಇವರಿಗೆ ತುಂಬಾ ಗಾಯವಾಗಿತ್ತು ತದನಂತರ ಇವರನ್ನು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಿಸಿತು ಸದ್ಯಕ್ಕೆ ಇವರು ಯಾವುದೇ ಸಮಸ್ಯೆ ಇಲ್ಲದೆ ಆರಾಮವಾಗಿ ಇದ್ದಾರೆ. ಈ ಘಟನೆ ಆ ಊರಿನ ಹಿರಿಯರಾದ ಲಕ್ಷ್ಮಣ ಸಿಂಗ್ ಗಂಗೋಲಾ ಅವರು ತಿಳಿಸಿದ್ದಾರೆ. ಅಲ್ಲಿಯ ಗ್ರಾಮಸ್ಥರು ಊರಲ್ಲಿ ಚಿರತೆಗಾಗಿ ಬಲೆ ಹಾಕಬೇಕು ಎಂದು ಸರಕಾರಕ್ಕೆ ಕೋರಿಕೆ ನೀಡಿದ್ದಾರೆ.