ಸ್ಟಂಟ್ ಮಾಡುವ ಭರದಲ್ಲಿ ರಸ್ತೆಯ ಮೇಲೆ ಅಪ್ಪಳಿಸಿದನು ಮುಖ ಕೆಳಗೆ ಮಾಡಿ! ನೇಟಿಜನ್ಸ್ ಗಳು ಈ ವಿಡಿಯೋ ನೋಡಿ ಸಂಪೂರ್ಣ ಸ್ತಬ್ಧ!
ಸೋಶಿಯಲ್ ಮೀಡಿಯಾದ ಜಗತ್ತು ನಿಜಕ್ಕೂ ಅದ್ಭುತವಾಗಿದೆ. ಇಲ್ಲಿ ಬೆರಗುಗೊಳಿಸುವ ಅನೇಕ ವಿಡಿಯೋ ಮತ್ತು ಫೋಟೋಗಳು ಸದಾ ವೈರಲ್ ಆಗುತ್ತಿರುತ್ತವೆ. ಅದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿ ಪಡೆಯಲು ಯಾರ್ಯಾರು ಯಾವ ಮಾರ್ಗವನ್ನು ಅನುಸರಿಸುತ್ತಾರೆ ಎಂಬುದು ಹೇಳಲು ಸಾಧ್ಯವಿಲ್ಲ. ಎಷ್ಟೋ ಜನರು ತಮ್ಮ ವಿಡಿಯೋ ಮತ್ತು ಫೋಟೋಗಳಿಗೆ ತುಂಬಾ ಲೈಕ್ಸ್ ಮತ್ತು ಕಾಮೆಂಟ್ಗಳನ್ನು ಪಡೆಯುವ ಸಲುವಾಗಿ ತಮ್ಮ ಜೀವವನ್ನು ಅಪಾಯದಲ್ಲಿ ಸಿಲುಕಿಸಲು ಸಹ ಹಿಂದೆಮುಂದೆ ನೋಡುವುದಿಲ್ಲ.
ಈಗ ಸೋಶಿಯಲ್ ಮೀಡಿಯಾದಲ್ಲಿ ಇಂಥದೇ ಒಂದು ವಿಡಿಯೋ ಸಂಚಲನ ಮೂಡಿಸಿದೆ. ಹುಡುಗನೊಬ್ಬನು ಬೈಕ್ ಮೇಲೆ ಸ್ಟಂಟ್ ಮಾಡುವುದು ತುಂಬಾ ದುಬಾರಿಯಾಗಿ ಪರಿಣಮಿಸಿದೆ. ವಿಡಿಯೋ ನೋಡಿದ ನಂತರ ನಿಮಗೂ ಸಹ ತುಂಬಾ ಕೆಡುಕೆನಿಸುವುದು.
ಈ ವಿಡಿಯೋದಲ್ಲಿ ಹುಡುಗನು ಬೈಕ್ ಮೇಲೆ ಸ್ಟಂಟ್ ಮಾಡಿ ತೋರಿಸಲು ಯತ್ನಿಸಿದ್ದಾನೆ. ವಿಡಿಯೋ ನೋಡುವಾಗ ಕೆಲವೇ ಕ್ಷಣಗಳಲ್ಲಿ ಈ ಹುಡುಗನ ಜೊತೆಗೆ ಏನಾದರೂ ಅಘಟಿತ ಘಟನೆ ನಡೆಯುತ್ತದೆ ಎಂಬುದು ಅನಿಸುವುದಿಲ್ಲ. ಯಾಕೆಂದರೆ ಹುಡುಗನು ಸಹಜವಾಗಿಯೇ ಬೈಕ್ ಹವೆಯಲ್ಲಿ ಚಲಾಯಿಸುತ್ತಾನೆ. ಆದರೆ ನಂತರದ ಕೆಲವೇ ಕ್ಷಣಗಳಲ್ಲಿ ನಡೆದ ಘಟನೆಯು ನೋಡಿದಾಗ ನೋಡುಗರ ಮೈನವಿರೇಳುತ್ತದೆ. ಏಕೆಂದರೆ ಒಂದೇ ವ್ಹೀಲ್ ಮೇಲೆ ಬೈಕ್ ನಡೆಸುವಾಗ ಹುಡುಗನ ಬ್ಯಾಲೆನ್ಸ್ ತಪ್ಪಿ ರಸ್ತೆಯ ಮೇಲೆ ಮುಖ ಕೆಳಗೆ ಮಾಡಿ ನೆಲಕ್ಕೆ ಅಪ್ಪಳಿಸುವನು.
ನೋಡಿ ಈ ವಿಡಿಯೋ…
ಈ ವಿಡಿಯೋವನ್ನು ಇನ್ಸ್ಟಾಗ್ರಾಂ ನಲ್ಲಿ ರ್ಯಾಪಿಡೆನಿ ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ‘ಹೆಲ್ಮೆಟ್ ಉಪಯೋಗಿಸುವುದು ಎಷ್ಟೊಂದು ಮಹತ್ವದ್ದಾಗಿದೆ’ ಎಂದು ಕ್ಯಾಪ್ಷನ್ ನಲ್ಲಿ ಬರೆಯಲಾಗಿದೆ. ಸದ್ಯ ಈ ಹುಡುಗನಿಗೆ ಹೆಚ್ಚೇನು ಗಾಯವಾಗಿಲ್ಲ ಮತ್ತು ಆರೋಗ್ಯವಂತನಾಗಿದ್ದಾನೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಜನರು ನೋಡಿದ್ದಾರೆ.
ಈ ವಿಡಿಯೋ ನೋಡಿ ಅನೇಕ ನೇಟಿಜನ್ಸ್ ಗಳು ರೈಡರ್ ಬಗ್ಗೆ ತುಂಬಾ ಕಳವಳ ವ್ಯಕ್ತ ಮಾಡಿದ್ದಾರೆ. ಯಾಕೆಂದರೆ ಸ್ಟಂಟ್ ಮಾಡುವಾಗ ಆತ ಯಾವ ರೀತಿ ನೆಲಕ್ಕೆ ಅಪ್ಪಳಿಸಿದ್ದಾನೆ ಅದರಿಂದಾಗಿ ಅನೇಕರು ಆತನಿಗೆ ತುಂಬಾ ಜೋರಾಗಿ ಮುಖಕ್ಕೆ ಪೆಟ್ಟು ಆಗಿರಬೇಕೆಂಬ ಸಂಶಯ ವ್ಯಕ್ತ ಮಾಡಿದ್ದಾರೆ. ನೀವು ಒಂದು ವೇಳೆ ಹೆಲ್ಮೆಟ್ ಉಪಯೋಗಿಸಿದರೂ ಸಹ ಈ ರೀತಿಯ ಸ್ಟಂಟ್ ಮಾಡಲೇಬೇಡಿ ಎಂದು ಎಲ್ಲರಿಗೂ ಒಬ್ಬನು ಕಾಮೆಂಟ್ ನಲ್ಲಿ ಸಲಹೆ ನೀಡಿದ್ದಾನೆ. ಕೆಲವರಂತೂ ಮೂರ್ಖತನದ ಕೆಲಸ ಮಾಡಲು ದೇವರು ನಿಮಗೆ ಮೆದುಳು ಅಥವಾ ಬುದ್ಧಿ ನೀಡಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬ ಈತ ಹಾಸ್ಪಿಟಲ್ಗೆ ಹೋಗುವ ಸಲುವಾಗಿ ಮಾಡಿದ ಐಡಿಯಾ ಎಂದು ಹೇಳಿದ್ದಾನೆ.