ನಕ್ಕು ನಗಿಸುವ ಅಪಘಾತ ನೀವೆಲ್ಲಿಯಾದರೂ ನೋಡಿದ್ದೀರಾ? ಇಲ್ಲವಾದರೆ ನೋಡಿ ಈ ವಿಡಿಯೋದಲ್ಲಿ….!

ಸೋಶಿಯಲ್ ಮೀಡಿಯಾದಲ್ಲಿ ಅಪಘಾತಗಳ ಅನೇಕ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆ ವಿಡಿಯೋಗಳು ನೋಡಿದಾಗ ಮನ ಕಲಕುತ್ತದೆ. ಅಪಘಾತಗಳ ವಿಡಿಯೋ ನೋಡಿದಾಗ ಮನಸ್ಸಿಗೆ ಭಯ ಮತ್ತು ಕಳವಳ ಉಂಟಾಗುತ್ತದೆ.

ಆದರೆ ಇವತ್ತಿನ ಈ ವಿಡಿಯೋ ನೋಡಿದಾಗ ನಿಜಕ್ಕೂ ನಿಮಗೆ ನಿಮ್ಮ ನಗು ತಡೆಯಲು ಸಾಧ್ಯವಾಗುವುದಿಲ್ಲ. ಅಷ್ಟೊಂದು ತಮಾಷೆಯಾಗಿದೆ ಈ ವಿಡಿಯೋ.

ಪ್ರಸ್ತುತ ವಿಡಿಯೋದಲ್ಲಿ ಉಪರಸ್ತೆಯಿಂದ ಮುಖ್ಯರಸ್ತೆಗೆ ಟ್ರ್ಯಾಕ್ಟರ್ ಒಂದು ಬರುತ್ತಿದೆ. ಬರುವಾಗ ಅದು ಏರಿನ ಕಡೆಗೆ ಬರುತ್ತಿರುವುದರಿಂದ ಟ್ರ್ಯಾಕ್ಟರ್ ಡ್ರೈವರ್ ಟ್ರ್ಯಾಕ್ಟರ್ ನಡೆಸುವ ಕಡೆಗೆ ತುಂಬಾ ಗಮನ ನೀಡಿದ್ದಾನೆ. ಹೀಗಾಗಿ ಟ್ರ್ಯಾಕ್ಟರ್ ನಡೆಸುವ ಡ್ರೈವರ್ ಮುಖ್ಯ ರಸ್ತೆಗೆ ಬಂದು ಕೂಡಿಕೊಳ್ಳುವ ಮುನ್ನ ಮುಖ್ಯ ರಸ್ತೆಯಲ್ಲಿ ಸ್ವಲ್ಪವೂ ಹಿಂದೆಮುಂದೆ ನೋಡುವುದಿಲ್ಲ. ಹಾಗೆಯೇ ನೇರ ಬರುತ್ತಿರುವಾಗ ಹಿಂದಿನಿಂದ ಕಾರೊಂದು ವೇಗವಾಗಿ ಬರುತ್ತಿರುವುದು ಗಮನಿಸುವುದೇ ಇಲ್ಲ. ಏತನ್ಮದ್ಯೆ ಕಾರು ನಡೆಸುವ ಡ್ರೈವರ್ ಸಹ ಅಡ್ಡರಸ್ತೆಯಿಂದ ಬರುತ್ತಿರುವ ಟ್ರ್ಯಾಕ್ಟರ್ ನ್ನು ನೋಡಿ ತನ್ನ ಕಾರಿನ ವೇಗವನ್ನು ಸ್ವಲ್ಪವೂ ಕಡಿಮೆ ಮಾಡದೆ ಹಾಗೆಯೇ ಮುನ್ನುಗ್ಗಿ ಬರುತ್ತಾನೆ. ಇದರ ಪರಿಣಾಮ ಕಾರು ಟ್ರ್ಯಾಕ್ಟರ್ ಗೆ ಬಂದು ಡಿಕ್ಕಿ ಹೊಡೆಯುತ್ತದೆ. ಈ ಅಪಘಾತದಲ್ಲಿ ಯಾರಿಗೂ ಯಾವುದೇ ರೀತಿಯ ಗಾಯವಾಗುವುದಿಲ್ಲ. ಆದರೆ ತಮಾಷೆ ಘಟನೆಯೊಂದು ನಡೆದು ಹೋಗುತ್ತದೆ. ಏನೆಂದರೆ ಕಾರಿನ ವೇಗಕ್ಕೆ ಟ್ರ್ಯಾಕ್ಟರ್ ನ ಮುಂದಿನ ಅರ್ಧಭಾಗವು ಬಿಚ್ಚಿಕೊಂಡು ಹೋಗಿದೆ. ಮತ್ತು ಟ್ಯಾಕ್ಟರ್ ಮೇಲಿನ ಡ್ರೈವರ್ ಸಹಜವಾಗಿ ಟ್ರ್ಯಾಕ್ಟರ್ ನಿಂದ ರೋಡ್ ಮೇಲೆ ಕೆಳಗೆ ಜಾರಿ ಇಳಿದಿರುವುದು ಕಂಡುಬರುತ್ತದೆ.

ವೀಡಿಯೋ ನೋಡಿ

ಈ ವಿಡಿಯೋವನ್ನು ಯುಪಿ ಲೈಫ್ ಸ್ಟೈಲ್ ಹೆಸರಿನ ಅಕೌಂಟ್ ನಿಂದ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಲಾಗಿದೆ. ಇಲ್ಲಿಯವರೆಗೆ ಸುಮಾರು 70 ಸಾವಿರ ಜನರು ಈ ವಿಡಿಯೋವನ್ನು ನೋಡಿದ್ದಾರೆ. ಈ ವಿಡಿಯೋಗೆ ಪಂಜಾಬಿ ಹಾಡಿನ ವಾಯ್ಸ್ ಓವರ್ ನೀಡಿರುವುದರಿಂದ ಮತ್ತಷ್ಟು ತಮಾಷೆಯೆನ್ನಿಸುತ್ತದೆ.