‘ಈ’ ಒಂದು ಕಾರಣದಿಂದ ಒಂದು ತಿಂಗಳಲ್ಲಿ 250 ಕ್ಕಿಂತ ಹೆಚ್ಚು ನಾಯಿಮರಿಗಳನ್ನು ಬ#ಲಿ ತಗೆದುಕೊಂಡ ಕೋತಿ!

ಸದ್ಯಕ್ಕೆ ಒಂದು ಘಟನೆ ತುಂಬಾ ಚರ್ಚೆ ಯಾಗುತ್ತಿದೆ. ಈ ಘಟನೆ ಅಂತ್ಯಂತ ಭ#ಯಾನಕವಾದ ಘಟನೆಯಾಗಿದೆ. ಇದುವರೆಗೂ ಈ ಘಟನೆ ನಡೆಯುತ್ತಲೇ ಇದೆ ಹೊರತು ಇದಕ್ಕೆ ಕಡಿವಾಣ ಹಾಕಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಅದೇನೆಂದರೆ ಒಂದು ಕೋತಿಯ ಗುಂಪು ಸುಮಾರು ಒಂದು ತಿಂಗಳಲ್ಲಿ ಆ ಊರಲ್ಲಿಯ 250 ಕ್ಕೂ ಹೆಚ್ಚು ನಾಯಿ ಮರಿಗಳನ್ನು ಕೊಂ#ದು ಹಾಕಿವೆ. ಇಂತಹ ಭ#ಯಂ#ಕರ ಕೋತಿಗಳ ಕೃ#ತ್ಯದಿಂದ ಇಡೀ ಊರೇ ಹೆದ#ರಿದೆ. ಈ ಘಟನೆ ಏನಿದೆ ಅಂತ ಸಂಪೂರ್ಣವಾಗಿ ತಿಳಿದುಕೊಳ್ಳಿ.

ಪ್ರಸ್ತುತ ಘಟನೆ ನಮ್ಮ ಬದಿಯ ರಾಜ್ಯ ಮಹಾರಾಷ್ಟ್ರದ ಬೀಡ ಜಿಲ್ಲೆಯ ಮಾಜಲಾಗಾವ ತಾಲೂಕಿನ ಲವುಳ ಊರಲ್ಲಿ ನಡಿದಿದೆ. ಇಲ್ಲಿ ಕೆಲವು ಕೋತಿಗಳು ವಾಸವಾಗಿದ್ದು ಊರಲ್ಲಿ ನಾಯಿ ಮರಿ ಕಂಡರೆ ಸಾಕು ಅವುಗಳನ್ನು ಎತ್ತಿಕೊಂಡು ಹೋಗಿ ಎತ್ತರದ ಸ್ಥಳದಿಂದ ಕೆಳಗೆ ಬಿಳಿಸಿ ಅವುಗಳ ಬ#ಲಿ ತಗೆದುಕೊಳ್ಳುತ್ತಿವೆ. ಈ ಕೋತಿಗಳು ಇದುವರೆಗೆ ಸುಮಾರು 250 ನಾಯಿಗಳ ಬ#ಲಿ ತಗೆದುಕೊಂಡಿವೆ ಎಂದು ಹೇಳಲಾಗುತ್ತಿದೆ. ಆದರೆ ಅರಣ್ಯ ಇಲಾಖಾದವರು ಈಕಡೆ ದು#ರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬುದು ಅಲ್ಲಿಯ ಜನತೆಯ ಪ್ರತಿಕ್ರಿಯೆ ಆಗಿದೆ.

ಮಾಜಲಗಾಂವ್‌ನಿಂದ ಹತ್ತು ಕಿಲೋಮೀಟರ್ ದೂರದಲ್ಲಿರುವ ಲವುಲ್ ಐದು ಸಾವಿರ ಜನಸಂಖ್ಯೆಯನ್ನು ಹೊಂದಿರುವ ಗ್ರಾಮವಾಗಿದೆ. ಕಳೆದ ಒಂದು ತಿಂಗಳಿನಿಂದ ಈ ಕೋತಿಗಳು ನಾಯಿ ಮರಿಗಳನ್ನು ಇಲ್ಲಿಂದ ತಗೆದುಕೊಂಡು ಹೋಗುತ್ತಿವೆ. ನಾಯಿ ಮರಿಗಳನ್ನು ಎತ್ತಿಕೊಂಡು ಹೋಗಿ ಎತ್ತರದ ಮರ ಅಥವಾ ಮನೆಗೆ ಮೇಲಿಂದ ಕೆಳಗೆ ಎಸೆಯುತ್ತಿವೆ. ಗ್ರಾಮಸ್ಥರ ಪ್ರಕಾರ, ಕೋತಿಗಳು ಇದುವರೆಗೆ 250 ಕ್ಕೂ ಹೆಚ್ಚು ನಾಯಿಮರಿಗಳನ್ನು ಕೊಂ#ದಿವೆ

ಈ ಬಗ್ಗೆ ಗ್ರಾಮ ಪಂಚಾಯಿತಿಯವರು ಧಾರೂರಿನಲ್ಲಿರುವ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಆ ಅಧಿಕಾರಿಗಳು ಕೇವಲ ಒಂದೇ ಒಂದು ದಿನ ಬಂದು ಸ್ವಲ್ಪ ಹೊತ್ತು ಆ ಕೋತಿಗಳನ್ನು ಹಿಡಿಯಲು ಪ್ರಯತ್ನಿಸಿದರು ಆದರೆ ಕೋತಿಗಳನ್ನು ಹಿಡಿಯಲು ಸಾಧ್ಯವಾಗದೆ ಅಲ್ಲಿಂದ ಹೊರಟು ಹೋದರು. ಅಂದಿನಿಂದ ಅವರು ಇತ್ತ ತಿರುಗಿಯೂ ಸಹ ನೋಡಿಲ್ಲವಂತೆ.

ನಾಯಿಗಳು ಕೋತಿ ಮರಿಯನ್ನು ಕೊಂ#ದು ಹಾಕಿದ್ದವು

ಕೆಲ ದಿನಗಳ ಹಿಂದೆ ಲಾವುಲ್ ಗ್ರಾಮದಲ್ಲಿ ಕೋತಿಯ ಮರಿಯೊಂದನ್ನು ನಾಯಿಗಳು ಕೊಂ#ದು ಹಾಕಿದ್ದವು. ಇದರಿಂದ ಸಿಟ್ಟಿಗೆದ್ದ ಕೋತಿಗಳು ಗ್ರಾಮದ ನಾಯಿ ಮರಿಗಳನ್ನು ಸಾಯಿ#ಸುತ್ತಿವೆ ಎನ್ನುತ್ತಾರೆ ಗ್ರಾಮಸ್ಥರು.

ಹಲವಾರು ಜನರು ಗಾಯಗೊಂಡಿದ್ದಾರೆ.

15 ದಿನಗಳ ಹಿಂದೆ ಲಾವುಲ್ ಗ್ರಾಮದ ಸೀತಾರಾಂ ನೈಬಾಲ್ ಅವರ ನಾಯಿಮರಿಯನ್ನು ಕೋತಿಯೊಂದು ತೆಗೆದುಕೊಂಡು ಹೋಗಿತ್ತು. ನೈಬಾಲ್ ಟೆರೇಸ್‌ಗೆ ಹೋಗಿ ನಾಯಿಮರಿಯನ್ನು ರಕ್ಷಿಸಲು ಪ್ರಯತ್ನಿಸಿದಾಗ, ಕೋತಿಗಳು ಅವನ ಕಡೆಗೆ ಓಡಿ ಬರುತ್ತಿದ್ದವು ಅವುಗಳಿಂದ ರಕ್ಷಿಸಿಕೊಳ್ಳಲು ಹೋಗುತ್ತಿದ್ದಾಗ ನೈಬಾಲ್ ಮಹಡಿಯಿಂದ ಕೆಳಗೆ ಬಿದ್ದು ಕಾಲು ಮುರಿದುಕೊಂಡಿದ್ದಾರೆ. ಇದರ ಜೊತೆಗೂ ಇನ್ನು ಹಲವಾರು ಜನರು ಗಾಯ#ಗೊಂಡ ಘಟನೆಗಳೂ ನಡೆದಿವೆ.

ಈಗ ಸಣ್ಣ ಮಕ್ಕಳ ಟಾರ್ಗೆಟ್.

ಗ್ರಾಮದಲ್ಲಿ ನಾಯಿ ಮರಿಗಳ ಸಂಖ್ಯೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಗಳು ಇದೀಗ ಸಣ್ಣ ಮಕ್ಕಳ ಕಡೆಗೆ ಗಮನ ಹರಿಸಿವೆ. ಸಂತ್ರಾಂ ಶಿಂಧೆಯವರ ಎಂಟು ವರ್ಷದ ಮೊಮ್ಮಗನನ್ನು ಕೋತಿ ಎತ್ತಿಕೊಂಡು ಮನೆಯ ಮಹಿಡಿಯ ಮೇಲೆ ಹೋಗಿತ್ತು. ನಾಗರಿಕರು ಇದನ್ನು ಕಂಡು ಆ ಮಂಗನ ಮೇಲೆ ಕಲ್ಲು ಮತ್ತು ದೊಣ್ಣೆಗಳನ್ನು ಎಸೆದು ಕೋತಿಯಿಂದ ಮಗುವನ್ನು ಬಿಡಿಸಿಕೊಂಡಿದ್ದಾರೆ. ಈ ಕೋತಿಗಳು ಶಾಲೆಗೆ ಹೋಗುವ ಮಕ್ಕಳನ್ನು ಹಿಂಬಾಲಿಸುತ್ತಿವೇ ಜೊತೆಗೆ ಕೆಲವು ಮಹಿಳೆಯರನ್ನು ಸಹ ಹೊಡೆದಿವೆ ಎಂದು ಪಂಚಾಯತ್ ಸಮಿತಿಯ ಮಾಜಿ ಸದಸ್ಯ ರಾಧಾಕಿಸನ್ ಸೋನಾವಾನೆ ಹೇಳಿದರು.