ಆ#ಘಾತಕಾರಿ! ಮಹಿಳೆಯ ಫೋನ್ ಕಸಿದುಕೊಂಡ ನಂತರ ಸುಮಾರು 100 ಮೀಟರ್ ವರೆಗೆ ಎಳೆಯುತ್ತ ಕೊಂಡೊಯ್ದರು ಬೈಕ್ ಸವಾರರು. ನೋಡಿ CCTV ಫುಟೇಜ್!

ಕಳ್ಳರು ಬೈಕ್ ಮೇಲೆ ಬಂದು ಮೊಬೈಲ್ ನಲ್ಲಿ ಮಾತನಾಡುತ್ತಿರುವ ವ್ಯಕ್ತಿಯ ಕೈಯಲ್ಲಿಂದ ಮೊಬೈಲ್ ಕಸಿದುಕೊಂಡು ಹೋಗುವದು ಮತ್ತು ಮಹಿಳೆಯರ ಕೊರಳಲ್ಲಿಯ ಚಿನ್ನದ ಸರ ಎಳೆದುಕೊಂಡು ಹೋಗುವದು ಇವು ಸೋಶಿಯಲ್ ಮೀಡಿಯಾದಲ್ಲಿಯ ನಿತ್ಯದ ಘಟನೆಗಳಾಗಿವೆ. ಈ ಘಟನೆಗಳಿಗೆ ಕಳ್ಳರು ಪೂರ್ಣರೂಪ ಕೊಡುವಾಗ ಎಷ್ಟೋ ಸಲ ಸಾಮಾನ್ಯ ಮತ್ತು ನಿರಪರಾಧಿ ವ್ಯಕ್ತಿ ಸಾವು ಬದುಕಿನ ನಡುವೆ ಹೋರಾಡಬೇಕಾಗುತ್ತದೆ.

ಈಗ ದೆಹಲಿಯಿಂದ ಇಂಥದ್ದೇ ಇಂದು ಘಟನೆ ವರದಿಯಾಗಿದೆ. ಇಲ್ಲಿ ಶಾಲಿಮಾರ್ ಬಾಗ್ ನಲ್ಲಿ ಮಹಿಳೆಯೊಬ್ಬಳ ಮೊಬೈಲ್ ನ್ನು ಕಸಿದು ಕೊಳ್ಳಲು ಹೋಗಿ ಆಕೆಯನ್ನು ಸುಮಾರು 100 ಮೀಟರ್ ರಸ್ತೆಯ ಮೇಲೆ ಎಳೆದುಕೊಂಡು ಒಯ್ದ ಘಟನೆಯೊಂದು ವರದಿಯಾಗಿದೆ. ಈ ಸಂಪೂರ್ಣ ಘಟನೆ ಸಿಸಿಟಿವಿ ಯಲ್ಲಿ ಸೆರೆಯಾಗಿದೆ.

ರಸ್ತೆಯ ಮೇಲೆ ವಾಹನ ಮತ್ತು ಜನರ ಗದ್ದಲವಿದ್ದಾಗ ಆ#ಕಸ್ಮಿಕ ವೇಗದಿಂದ ಬೈಕ್ ಒಂದು ಮಧ್ಯದಲ್ಲಿ ಬರುತ್ತದೆ. ಆ ಬೈಕಿಗೆ ಮಹಿಳೆಯೊಬ್ಬಳು ಎಳೆ#ದಾಡುತ್ತಾ ಬರುತ್ತಿರುವುದು ಕಂಡು ಬರುತ್ತದೆ. ಆನಂತರ ಸ್ವಲ್ಪೇ ಕ್ಷಣದಲ್ಲಿ ಮಹಿಳೆಯು ರಸ್ತೆಯ ಮಧ್ಯೆ ಮೂ#ರ್ಛೆ ತಪ್ಪಿ ಬೀಳುತ್ತಾಳೆ. ಇದನ್ನು ನೋಡಿದ ಜನರು ಆಕೆಯ ಸಹಾಯಕ್ಕಾಗಿ ಪ್ರಯತ್ನಿಸುವರು. ಆಗ ಕಳ್ಳರು ಮಾತ್ರ ಅಲ್ಲಿಂದ ಪಲಾಯನ ಮಾಡುವದರಲ್ಲಿ ಯಶಸ್ವಿಯಾಗುತ್ತಾರೆ.

ವೀಡಿಯೋ ನೋಡಿ

ಸದ್ಯ ದೆಹಲಿ ಪೊಲೀಸರು ಸಿಸಿಟಿವಿ ಫುಟೇಜ್ ಸಹಾಯದಿಂದ ಆ ಕಿಡಿಗೇಡಿಗಳ ಗುರುತು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ತನಿಖೆ ಮಾತ್ರ ಜೋರಾಗಿ ನಡೆದಿದೆ ಎಂದು ತಿಳಿದು ಬಂದಿದೆ.