ಎಲ್ಲರಿಗೂ ಒಬ್ಬ ಅಣ್ಣ ಯಾಕೆ ಬೇಕು? ಈ ಪ್ರಶ್ನೆಯ ಉತ್ತರ ಹೇಳಿ ಕೊಡುವ ಪುಟ್ಟ ಮಕ್ಕಳ ಸುಂದರವಾದ ಈ ವಿಡಿಯೋ ನೋಡಿ ಗೊತ್ತಾಗುತ್ತೆ?

ಕುಟುಂಬದಲ್ಲಿ ಪ್ರತಿಯೊಂದು ಸಂಬಂಧಗಳು ತಮ್ಮದೇಯಾದ ಮಹತ್ವವನ್ನು, ಜವಾಬ್ದಾರಿಯನ್ನು ತಿಳಿಸಿ ಕೊಡುತ್ತವೆ. ಅದರಲ್ಲಿ ಅಣ್ಣನ ಜವಾಬ್ದಾರಿಯೂ ಮಹತ್ವದ್ದಾಗಿರುತ್ತದೆ. ಮನೆಯಲ್ಲಿ ತಂದೆಯ ನಂತರ ಜವಾಬ್ದಾರಿಯನ್ನು ಹೊತ್ತು ಕೊಳ್ಳುವ ವ್ಯಕ್ತಿ ಎಂದರೆ ಅಣ್ಣನೇ ಎಂದು ಹೇಳಬಹುದು.

ಆದ್ದರಿಂದಲೇ ಬಹುಶಃ ‘ದೊಡ್ಡ ಮಗನಾಗಬಾರದು ಮತ್ತು ಕಿರಿಯ ಸೊಸೆಯಾಗಬಾರದು’ ಎಂದು ಹೇಳುತ್ತಾರೆ. ಇಲ್ಲಿ ದೊಡ್ಡ ಮಗನಾಗಬಾರದು ಎಂದರೆ ತಂದೆಯ ನಂತರ ಆತನ ಮೇಲೆಯೇ ಮನೆಯ ಎಲ್ಲ ಜವಾಬ್ದಾರಿಯ ಹೊರೆ ಬೀಳುತ್ತದೆ ಎಂದರ್ಥ ಅಲ್ಲವೇ?

ಈ ಚಿಕ್ಕ ಮಕ್ಕಳಲ್ಲಿ ಅಣ್ಣನು ತನ್ನ ಜವಾಬ್ದಾರಿಯನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತಿರುವ ಸುಂದರವಾದ ವಿಡಿಯೋ ಒಂದು ನಿಮಗಾಗಿ ಇಲ್ಲಿ ತಂದಿದ್ದೇವೆ. ಪ್ರಸ್ತುತ ವಿಡಿಯೋವನ್ನು IFS ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸುಶಾಂತ್ ನಂದಾ ಅವರು ಟ್ವಿಟರ್ನಲ್ಲಿ ತಮ್ಮ ಅಕೌಂಟ್ ಮುಖಾಂತರ ಶೇರ್ ಮಾಡಿ ಅದಕ್ಕೆ ‘ಎಲ್ಲರಿಗೂ ಅಣ್ಣ ಯಾಕೆ ಬೇಕು’? ಎಂಬ ಕ್ಯಾಪ್ಶನ್ ನೀಡಿದ್ದಾರೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಜನರು ನೋಡಿ ಮೆಚ್ಚುಗೆಯೊಂದಿಗೆ ತಮ್ಮ ಪ್ರತಿಕ್ರಿಯೆಗಳನ್ನು ಸಹ ಹೊರಹಾಕಿದ್ದಾರೆ.

ನೋಡಿ ಈ ವಿಡಿಯೋ…