ಮೂತ್ರ ಮಾಡಿ ಬಂದ ನಂತರ ತಕ್ಷಣ ನೀರು ಕುಡಿಯುವುದು ದೇಹಕ್ಕೆ ಯೋಗ್ಯ? ಅಯೋಗ್ಯ? ತಜ್ಞರು ಹೇಳುವ ಮಾತೇನು?

ಮೂತ್ರ ಮಾಡಿ ಬಂದ ನಂತರ ತಕ್ಷಣ ನೀರು ಕುಡಿಯುವುದು ಸರಿಯೋ? ಅಥವಾ ತಪ್ಪು? ಎಂಬ ಪ್ರಶ್ನೆ ಅನೇಕರಿಗೆ ಸತಾಯಿಸುತ್ತದೆ. ಈ ಪ್ರಶ್ನೆಗೆ ತಜ್ಞರು ಹೇಳುವ ಸರಿಯಾದ ಮತ್ತು ಸಮರ್ಪಕವಾದ ಉತ್ತರಗಳು ಇಲ್ಲಿವೆ ನೋಡಿ.

ಮೂತ್ರ ವಿಸರ್ಜನೆ ಮಾಡಿ ಬಂದ ನಂತರ ತಕ್ಷಣ ನೀರು ಕುಡಿಯುವದರ ಬಗ್ಗೆ ತಜ್ಞರು ನೀಡುವ ಸಲಹೆ ಹೀಗಿದೆ.

ನೀವು ಒಂದು ವೇಳೆ ಮೂತ್ರವಿಸರ್ಜನೆ ಮಾಡಿ ಬಂದ ನಂತರ ತಕ್ಷಣ ನೀರು ಕುಡಿಯುವ ಅಭ್ಯಾಸವಿದ್ದರೆ ಮೊದಲು ಅದನ್ನು ನಿಲ್ಲಿಸಿ. ಈ ರೂಢಿಯೂ ನಿಮ್ಮ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆ. ದಿನಂಪ್ರತಿ ಮೂತ್ರ ವಿಸರ್ಜನೆ ಮಾಡಿ ಬಂದ ನಂತರ ತಕ್ಷಣ ನೀರು ಕುಡಿಯುತ್ತಿದ್ದರೆ ಮೂತ್ರಾಶಯಕ್ಕೆ ಸಂಬಂಧಿಸಿದ ರೋಗಗಳಿಗೆ ಆಮಂತ್ರಣ ನೀಡಿದಂತಾಗುತ್ತದೆ. ಮತ್ತು ಕಿಡ್ನಿ ಸ್ಟೋನ್ ಸಮಸ್ಯೆಯಾಗಬಹುದು ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ ಈ ರೂಢಿ ತಪ್ಪಿಸಿಕೊಳ್ಳಿ. ಯಾವಾಗಲಾದರೂ ಒಮ್ಮೆ ಈ ರೀತಿ ಮಾಡುವದರಿಂದ ಯಾವ ಸಮಸ್ಯೆಯಾಗದು.

ಮೂತ್ರ ವಿಸರ್ಜನೆ ಮಾಡಿ ಬಂದ ನಂತರ ಕನಿಷ್ಠ 10 ರಿಂದ 15 ನಿಮಿಷಗಳ ನಂತರವೇ ನೀರು ಕುಡಿಯಬೇಕು. ಮೂತ್ರ ವಿಸರ್ಜನೆ ಮಾಡುವ ಮುನ್ನವೂ ಸಹ ನೀರು ಸೇವಿಸಿ ತಕ್ಷಣ ಮೂತ್ರ ವಿಸರ್ಜನೆಗೆ ಹೋಗಬಾರದು. ಇಲ್ಲಿಯೂ 10 ರಿಂದ 15 ನಿಮಿಷಗಳ ಅಂತರ ಇರಬೇಕು. ಎಲ್ಲಕ್ಕೂ ಮಹತ್ವದ್ದೆಂದರೆ ಮುಂಜಾನೆ ನಿದ್ರೆಯಿಂದ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ 2 ರಿಂದ 3 ಗ್ಲಾಸ್ ನೀರು ಕುಡಿಯಬೇಕು. ಇದರಿಂದ ದೇಹದಲ್ಲಿಯ ವಿಷಯುಕ್ತ (ಟಾಕ್ಸಿಕ್) ಪದಾರ್ಥ ಹೊರಗೆ ಹೋಗುವುದರಿಂದ ದೇಹವು ಶುಚಿಯಾಗಿರಲು ಸಹಾಯವಾಗುತ್ತದೆ.

ಡಾಕ್ಟರ್ಸ್ ಗಳು ಮತ್ತು ಆರೋಗ್ಯ ತಜ್ಞರು ಹೇಳುವ ಪ್ರಕಾರ ವ್ಯಕ್ತಿಯೊಬ್ಬನು ದಿನನಿತ್ಯ 3-4 ಲೀಟರ್ ನೀರು ಕುಡಿಯಲೇ ಬೇಕು. ದೇಹದಲ್ಲಿ ನೀರಿನ ಅಂಶ ಕಡಿಮೆ ಇರುವುದರಿಂದ ಅನೇಕ ರೋಗಗಳಿಗೆ ಆಮಂತ್ರಣ ನೀಡಿದಂತಾಗುತ್ತದೆ. ಆದ್ದರಿಂದ ತಜ್ಞರು ಹೇಳುವ ಪ್ರಕಾರ ದೇಹಕ್ಕೆ ಯಾವುದು ಅತೀ ಹೆಚ್ಚು ಮತ್ತು ಅತೀ ಕಡಿಮೆ ಆಗಬಾರದು. ಎಲ್ಲವನ್ನೂ ಸರಿಯಾಗಿ ಬ್ಯಾಲೆನ್ಸ್ ಮಾಡಬೇಕು.

ದಿನಪೂರ್ತಿ ಸಾಕಷ್ಟು ನೀರು ಕುಡಿಯುವ ಸಲಹೆಯನ್ನು ಆರೋಗ್ಯ ತಜ್ಞರು ನೀಡುತ್ತಾರೆ. ನಿರೋಗಿಯಾಗಿ ಇರಲು ನೀರಿನ ಹೆಚ್ಚಿನ ಸೇವನೆಯು ತುಂಬಾ ಉಪಯೋಗವಾಗುತ್ತದೆ. ಆದ್ದರಿಂದ ನೀರು ಯಾವಾಗ ಮತ್ತು ಹೇಗೆ ಕುಡಿಯುವುದರಿಂದ ನಮ್ಮ ದೇಹಕ್ಕೆ ಲಾಭವಾಗುತ್ತದೆ ಎಂಬುದನ್ನು ತಿಳಿಯುವುದು ಅಗತ್ಯ. ಹೀಗಾಗಿ ಮೂತ್ರವಿಸರ್ಜನೆಯ ಮುನ್ನ ಹಾಗೂ ನಂತರ ತಕ್ಷಣ ನೀರಿನ ಸೇವನೆ ಮಾಡಬಾರದು. ಇವೆರಡರಲ್ಲಿ ಸುಮಾರು 10 ರಿಂದ 15 ನಿಮಿಷಗಳ ಅಂತರವಿರಬೇಕು.